BlogLatestTop Storiesವಿದೇಶ-International

ಇದೇ ಮೊದಲ ಬಾರಿಗೆ ಕಾರ್ಗಿಲ್ ಯುದ್ಧದಲ್ಲಿ ತನ್ನ ಸೈನಿಕರು ಸಾವನ್ನಪಿರುವುದನ್ನು ಒಪ್ಪಿಕೊಂಡ ಪಾಕ್

ಲಾಹೋರ್ : ಕಾರ್ಗಿಲ್ ಯುದ್ಧ ಸೇರಿದಂತೆ ಭಾರತದೊಂದಿಗಿನ ವಿವಿಧ ಸಂಘರ್ಷಗಳಲ್ಲಿ ಪ್ರಾಣ ಕಳೆದುಕೊಂಡ ಪಾಕಿಸ್ತಾನಿ ಸೈನಿಕರಿಗೆ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಶ್ರದ್ಧಾಂಜಲಿ ಸಲ್ಲಿಸಿದರು. ಈ ಮೂಲಕ ಭಾರತದ ವಿರುದ್ಧ 1999 ರ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ಸೇನೆ ಮೊದಲ ಬಾರಿಗೆ ತನ್ನ ಪಾತ್ರವನ್ನು ಬಹಿರಂಗವಾಗಿ ಒಪ್ಪಿಕೊಂಡಿದೆ.

20 ವರ್ಷಗಳಿಗೂ ಹೆಚ್ಚು ಕಾಲ ಸಂಘರ್ಷದ ಯಾವುದೇ ಅಧಿಕೃತ ಉಲ್ಲೇಖವನ್ನು ಮಾಡದ ಪಾಕ್ ಕಾರ್ಯಕ್ರಮವೊಂದರಲ್ಲಿ, ಕಾರ್ಗಿಲ್ ಯುದ್ಧದಲ್ಲಿ ಪ್ರಾಣ ಕಳೆದುಕೊಂಡ ಪಾಕಿಸ್ತಾನಿ ಸೈನಿಕರಿಗ ಶ್ರದ್ಧಾಂಜಲಿ ಸಲ್ಲಿಸಿದೆ.

“ಪಾಕಿಸ್ತಾನದ ಸಮುದಾಯವು ಸ್ವಾತಂತ್ರ್ಯದ ಮೌಲ್ಯ ಮತ್ತು ಅದು ಬೇಡುವ ತ್ಯಾಗಗಳನ್ನು ಅರ್ಥಮಾಡಿಕೊಳ್ಳುವ ಧೈರ್ಯಶಾಲಿ ವ್ಯಕ್ತಿಗಳ ಸಮುದಾಯವಾಗಿದೆ”. 1948, 1965, 1971 ಅಥವಾ 1999 ರ ಕಾರ್ಗಿಲ್ ಯುದ್ಧದಲ್ಲಿ ಸಾವಿರಾರು ಸೈನಿಕರು ದೇಶಕ್ಕಾಗಿ ಮತ್ತು ಇಸ್ಲಾಂ ಧರ್ಮಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದರು ಎಂದು ಮುನೀರ್ ಹೇಳಿದ್ದಾರೆ.

ಕಾರ್ಗಿಲ್ ಸಂಘರ್ಷವನ್ನು ಪ್ರಾಥಮಿಕವಾಗಿ ಕಾಶ್ಮೀರಿ ಉಗ್ರಗಾಮಿಗಳು ಮತ್ತು “ಮುಜಾಹಿದೀನ್” ಕಾರಣ ಪಾಕ್ ಈಗ ದೀರ್ಘಕಾಲದ ತನ್ನ ಅಧಿಕೃತ ಬದಲಿಸಿದೆ. ಜನರಲ್ ಮುನೀರ್ ಅವರ ಹೇಳಿಕೆಗಳು ಕಾರ್ಗಿಲ್ ಸಂಘರ್ಷದಲ್ಲಿ ಪಾಕಿಸ್ತಾನಿ ಸೈನಿಕರ ನಷ್ಟವನ್ನು ನೇರವಾಗಿ ಒಪ್ಪಿಕೊಂಡಿವೆ. ಅಲ್ಲಿ ಪಾಕಿಸ್ತಾನಿ ಪಡೆಗಳು ಕಾಶ್ಮೀರದ ಪ್ರಮುಖ ಸ್ಥಾನಗಳ ಮೇಲೆ ಹಿಡಿತ ಸಾಧಿಸಿದಾಗ ಭಾರತ ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿತ್ತು. ಕಾರ್ಗಿಲ್ ಪ್ರದೇಶದಿಂದ ಸೈನ್ಯವನ್ನು ಹಿಂತೆಗೆದುಕೊಳ್ಳುವಂತೆ ಆಗಿನ ಯುಎಸ್ ಅಧ್ಯಕ್ಷ ಬಿಲ್ ಕ್ಲಿಂಟನ್ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಮೇಲೆ ಒತ್ತಡ ಹೇರಿದ್ದರಿಂದ ಈ ಕಾರ್ಯಾಚರಣೆಯು ಪಾಕಿಸ್ತಾನಕ್ಕೆ ಗಮನಾರ್ಹ ಹಿನ್ನಡೆಯಲ್ಲಿ ಅಂತ್ಯಗೊಂಡಿತ್ತು.

Share with Friends
author avatar
News Desk