LatestTop Storiesತುಮಕೂರು-Tumakuru

ಕುಣಿಗಲ್ ಪಟ್ಟಣದ ಜಿಕೆ ಬಿಎಂಎಸ್ ಸರ್ಕಾರಿ ಶಾಲೆಯಲ್ಲಿಸ್ವಾತಂತ್ರ್ಯ ದಿನಾಚರಣೆ..

ತುಮಕೂರು : ಕುಣಿಗಲ್ ಪಟ್ಟಣದ ಜಿಕೆ ಬಿಎಂಎಸ್ ಸರ್ಕಾರಿ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಡಗರದಿಂದ ಆಚರಿಸಿದ್ದಾರೆ . ಹಾಗು ಈ ವರ್ಷ ಒಂದೇ ಮಾತರಂ ಗೀತೆಗೆ ಸರಿ ಸುಮಾರು 150 ವರ್ಷದ ಇತಿಹಾಸ ಇದೆ ಎಂಬುದನ್ನು ನೆನೆದಿದ್ದಾರೆ .
ಇನ್ನು ಜಿಕೆ ಬಿ ಎಂ ಎಸ್ ಸರ್ಕಾರಿ ಶಾಲೆಯಲ್ಲಿ ಎಸ್ ಡಿ ಎಂ ಸಿ,ಅಧ್ಯಕ್ಷರಾದ ಮಂಜುನಾಥ್ ಅವರು ಧ್ವಜಾರೋಹಣ ನೆರವೇರಿಸಿದರು ,

ಕುಣಿಗಲ್ ಪಟ್ಟಣದ ಜಿಕೆ ಬಿಎಂಎಸ್ ಸರ್ಕಾರಿ ಶಾಲೆಯಲ್ಲಿಸ್ವಾತಂತ್ರ್ಯ ದಿನಾಚರಣೆ

ಮತ್ತು ಸ್ವತಂತ್ರ ಕ್ಕಾಗಿ ಹೋರಾಡಿದ ಹೋರಾಟಗರರನ್ನು ನೆನೆದು ಮಾತನಾಡಿದ್ದಾರೆ .ನಮ್ಮ ಸ್ವಾತಂತ್ರಕ್ಕಾಗಿ ಹೋರಾಡಿದ ವೀರರ ಕುರಿತು ಮಕ್ಕಳಿಗೆ ಭಾಸಣವನ್ನು ಮಾಡಿದ್ದಾರೆ.ಸ್ವಾತಂತ್ರ್ಯ ಎಂದರೆ ಕೇವಲ ಬಂಧನದಿಂದ ಮುಕ್ತಿ ಮಾತ್ರವಲ್ಲ ಅದು ನಮ್ಮ ಜವಾಬ್ದಾರಿಎಂದು ತಿಳಿಸಿ ಹೇಳಿದ್ದಾರೆ .ಶಿಸ್ತು ಸಮಾನತೆ ಮತ್ತು ಧೈರ್ಯ ಇದೆಲ್ಲವೂ ನಮ್ಮ ದೇಶದ ಸಂಕೇತವಾಗಿದೆ, ಹಾಗೂ ನಮ್ಮ ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬ ನಾಗರೀಕನ ಪಾತ್ರ ಅತ್ಯಂತ ಮುಖ್ಯವಾಗಿದೆ ಎಂದು ಶಾಲಾ ಮಕ್ಕಳು ಮಾತನಾಡಿದ್ದಾರೆ .

ಭಾಷಣ ಮುಗಿದನಂತರ ರಾಷ್ಟ್ರಧ್ವಜಕ್ಕೆ ಎಲ್ಲರೂ ವಂದಿಸಿ ರಾಷ್ಟ್ರಗೀತೆ ಹಾಡಿದರು.ಶಾಲಾ ಮಕ್ಕಳು “ಒಂದೇ ಮಾತರಂ” ಮತ್ತು ಇತರ ದೇಶಭಕ್ತಿ ಗೀತೆಗಳನ್ನು ಹಾಡಿ ರಾಷ್ಟ್ರಧ್ವಜಕ್ಕೆ ವಂದಿಸಿದರು .ತದನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು .ಇನ್ನು ಸರ್ಕಾರಿ ಶಾಲೆ ಮಕ್ಕಳು ವಿಶೇಷವಾಗಿ ಪಥಸಂಚಲನ್ನು ನಡೆಸಿದ್ದಾರೆ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಶಾಲಾ ಮಕ್ಕಳು ವಿಶೇಷ ಭಾಷಣ ಮಾಡಿದ್ದಾರೆ .ಶಾಲೆಯ ಪುಟ್ಟ ಮಕ್ಕಳು ವಿಶೇಷ ವೇಷ ಭೂಷಣಗಳನ್ನು ಧರಿಸಿದ್ದು ಎಲ್ಲರ ಗಮನ ಸೆಳೆದಿದ್ದಾರೆ .

ದೇಶಭಕ್ತಿ ಆಧಾರಿತ ನೃತ್ಯಗಳು ನಡೆದವು ದೇಶಭಕ್ತಿ ನಾಟಕ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ಸಾರುವ ಕಿರು ನಾಟಕ ಪ್ರದರ್ಶನಗೊಂಡಿತು.ಒಟ್ಟಾರೆ ಕುಣಿಗಲ್ ಪಟ್ಟಣದ ಜಿಕೆ ಬಿಎಂಎಸ್ ಸರ್ಕಾರಿ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಡಗರದಿಂದ ನೆರವೇರಿಸಿದ್ದಾರೆ .

Share with Friends
author avatar
Digital Desk