LatestWeatherಮಂಡ್ಯ-Mandyaರಾಜ್ಯ-Karnataka

ವರುಣಾರ್ಭಟಕ್ಕೆ ಕೆಆರ್‌ಎಸ್‌ ಡ್ಯಾಂನಲ್ಲಿ ಒಳಹರಿವು ಮತ್ತಷ್ಟು ಹೆಚ್ಚಳ

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಇದರಿಂದ ಕೆಆರ್‌ಎಸ್‌ ಡ್ಯಾಂಗೆ (KRS Dam) 10 ಸಾವಿರ ಕ್ಯೂಸೆಕ್‌ ಒಳಹರಿವು ಹೆಚ್ಚಳವಾಗಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಮಳೆಯ ಅಬ್ಬರದಿಂದ ಕೆಆರ್‌ಎಸ್‌ಗೆ ಹರಿದು ಬಂದ ಅಧಿಕ ಒಳಹರಿವು ಬಂದಿದೆ. ಇಂದು ಕೆಆರ್‌ಎಸ್‌ಗೆ 13,437 ಕ್ಯೂಸೆಕ್ ಒಳಹರಿವು ಹೆಚ್ಚಾಗಿದೆ. ಈ ವರ್ಷದಲ್ಲಿ ಸದ್ಯ ಇದೇ ಅಧಿಕ ಪ್ರಮಾಣದ ಒಳಹರಿವು ಆಗಿದೆ. ಇದನ್ಮೂ ಓದಿ: ದೆಹಲಿ ಏರ್‌ಪೋರ್ಟ್‌ನ ಟರ್ಮಿನಲ್ 1 ರಲ್ಲಿ ಛಾವಣಿ ಕುಸಿತ – 6 ಮಂದಿಗೆ ಗಾಯ, ಓರ್ವ ಸಾವು

https://youtu.be/DF5yh4qa8x8?si=-KH1K6mivcN1e8SZ

ನಿನ್ನೆ 3,856 ಕ್ಯೂಸೆಕ್‌ ಒಳಹರಿವು ಇತ್ತು. 24 ಗಂಟೆಯ ಅವಧಿಯಲ್ಲಿ 10 ಸಾವಿರ ಕ್ಯೂಸೆಕ್ ಒಳಹರಿವು ಹೆಚ್ಚಳವಾಗಿದೆ. ಜೊತೆಗೆ ಒಂದೇ ದಿನದಲ್ಲಿ 1 ಟಿಎಂಸಿಗೂ ಅಧಿಕ ನೀರು ಡ್ಯಾಂಗೆ ಹರಿದು ಬಂದಿದೆ. 49.452 ಟಿಎಂಸಿ ಗರಿಷ್ಠ ಸಾಮಾರ್ಥ್ಯದ ಕೆಆರ್‌ಎಸ್‌ನಲ್ಲಿ 16.118 ಟಿಎಂಸಿ ಸಂಗ್ರಹವಾಗಿದೆ. ನಿನ್ನೆ 15.007 ಟಿಎಂಸಿ ನೀರು ಇತ್ತು.

https://youtu.be/acTG2N43Gx8?si=jJaJVTlykwj5UawM

124.80 ಅಡಿ ಗರಿಷ್ಠ ಮಟ್ಟದ ಡ್ಯಾಂನಲ್ಲಿ ನೀರು ಈಗ 90.30 ಅಡಿ ತಲುಪಿದೆ. ಇಂದಿನ ಹೊರಹರಿವು 478 ಕ್ಯೂಸೆಕ್ ಆಗಿದೆ. ಇದನ್ಮೂ ಓದಿ: ಹಾವೇರಿ ಬಳಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ- 13 ಮಂದಿ ದುರ್ಮರಣ

Share with Friends
author avatar
News Desk