Crime NewsLatestತುಮಕೂರು-Tumakuruರಾಜ್ಯ-Karnataka

ಎಂಜಿನಿಯರ್‌ಗೆ ₹41 ಲಕ್ಷ ವಂಚನೆ

ತುಮಕೂರು: ‘ಆನ್‌ಲೈನ್ ಟ್ರೇಡಿಂಗ್ ಮೇಲೆ ಹಣ ಹೂಡಿಕೆ ಮಾಡಿ ದುಪ್ಪಟ್ಟು ಲಾಭ ಗಳಿಸಬಹುದು’ ಎಂದು ನಂಬಿಸಿ ನಗರದ ಶಿರಾಗೇಟ್ ನಿವಾಸಿ, ಎಂಜಿನಿಯರ್ (Engeneering) ಹನುಮಂತಪ್ಪ ಬಾರ್ಕಿ ಎಂಬುವರಿಗೆ ₹41.89 ಲಕ್ಷ ವಂಚಿಸಿದ್ದಾರೆ.

ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ(Facebook) ‘ಟ್ರೇಡಿಂಗ್ ಮೇಲೆ ಹಣ ಹೂಡಿಕೆ ಮಾಡಿ ಲಾಭ ಪಡೆಯಬಹುದು’ ಎಂಬ ಜಾಹೀರಾತು ನೋಡಿ ಅದರಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದ್ದಾರೆ. ನಂತರ ಅವರನ್ನು ‘ಗೋಲ್ಡನ್ ಫಿಂಗರ್ ಅಲಯನ್ಸ್ ಬ್ರಾಡ್ ಸೆಕ್ಯೂರಿಟಿಸ್’ ಎಂಬ ವಾಟ್ಸ್ ಆ್ಯಪ್ ಗ್ರೂಪ್‌ಗೆ ಸೇರಿಸಿದ್ದಾರೆ. ಸದರಿ ಗ್ರೂಪ್‌ನಲ್ಲಿ ಆನ್‌ಲೈನ್ ಟ್ರೇಡಿಂಗ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಜೂನ್‌ 24ರ ವರೆಗೆ ಪ್ರಜ್ವಲ್‌ ರೇವಣ್ಣಗೆ ಜೈಲು!

https://youtu.be/9qxusJr7wDE?si=8luT2ffn00aZyD1Q

ಇದನ್ನು ನಂಬಿದ ಹನುಮಂತಪ್ಪ ಮಾರ್ಚ್ 12ರಿಂದ ಮೇ 20ರ ವರೆಗೆ ಹಂತ ಹಂತವಾಗಿ ಒಟ್ಟು ₹41.89 ಲಕ್ಷ ಹಣವನ್ನು ಸೈಬ‌ರ್ ಆರೋಪಿಗಳು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಹನುಮಂತಪ್ಪ ಖಾತೆಗೆ ಯಾವುದೇ ಹಣ ವಾಪಸ್ ಬಂದಿಲ್ಲ. ಇದರಿಂದ ಅನುಮಾನಗೊಂಡು ಸೈಬ‌ರ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:ಯಾತ್ರಾರ್ಥಿಗಳಿದ್ದ ಬಸ್ ಮೇಲೆ ದಾಳಿಗೆ ಹೊಣೆ ಹೊತ್ತ ಪಾಕ್ ಉಗ್ರ ಸಂಘಟನೆ

https://youtu.be/V2xj2tozX58?si=yk0SGA3Zb_WPpqrW
Share with Friends
author avatar
News Desk