LatestLife Style | ಜೀವನಶೈಲಿಬೆಂಗಳೂರು-Bengaluruರಾಜ್ಯ-Karnataka

ರಾಜ್ಯದಲ್ಲಿ ಡೆಂಘೀ ರಣಕೇಕೆ: ಸಿಲಿಕಾನ್‌ ಸಿಟಿಯಲ್ಲಿ ಡೆಂಘೀಗೆ ಬಾಲಕ ಬಲಿ

ಬೆಂಗಳೂರು : ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು ಮಕ್ಕಳೇ ಮೊದಲ ಟಾರ್ಗೆಟ್ ಆಗಿದ್ದು, ಬೆಂಗಳೂರಿನಲ್ಲಿ ಡೆಂಘೀಗೆ 11 ವರ್ಷದ ಬಾಲಕ ಮೃತಪಟ್ಟಿದ್ದಾನೆ.

ಗಗನ್‌ (11) ಮೃತ ಬಾಲಕ. ಗಗನ್‌ ಕೆಲ ದಿನಗಳಿಂದ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ. ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಶುಕ್ರವಾರ ತಡರಾತ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಇದನ್ನೂ ಓದಿ:ಝಿಕಾ ವೈರಸ್‍ಗೆ ಮೊದಲ ಬಲಿ

https://youtu.be/VNniaOrSpzQ?si=u2w_4bxMjAB_7_Jf

ಸದ್ಯ ಹಾಸನದಲ್ಲಿ ಒಂದೇ ವಾರದಲ್ಲಿ 4 ಮಕ್ಕಳು ಡೆಂಗ್ಯೂಗೆ ಬಲಿಯಾಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ನಿವಾಸಿ ಡೆಂಘೀ ಸೋಂಕಿನಿಂದ ಮೃತಪಟ್ಟಿದ್ದಾನೆ ಎಂದು ಶಂಕಿಸಲಾಗಿದೆ. ಇದನ್ನೂ ಓದಿ:ಹತ್ರಾಸ್ ಕಾಲ್ತುಳಿತ ಪ್ರಕರಣ: ಪ್ರಮುಖ ಆರೋಪಿ ದೆಹಲಿ ಪೊಲೀಸರಿಗೆ ಶರಣು

https://youtu.be/H321Hvd7Xug?si=Zvq00PaG3lnwdlH0

ಇತ್ತ ರಾಮನಗರದಲ್ಲಿ ಡೆಂಘೀ ವಿರುದ್ಧ ಸಮರ ಸಾರಲಾಗಿದೆ. ಜ್ವರ ಬಂದವ್ರಿಗೆ ಜಿಲ್ಲಾಸ್ಪತ್ರೆಯಲ್ಲಿ 773 ರೋಗಿಗಳ ರಕ್ತದ ಮಾದರಿ ಪರೀಕ್ಷೆ ಮಾಡಿದ್ದು, 58 ಜನ್ರಿಗೆ ಡೆಂಘೀ ಪಾಸಿಟಿವ್ ಬಂದಿದೆ. ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿದ್ದಾರೆ. ಇದನ್ನೂ ಓದಿ: ಸ್ಪೈಸ್ ಜೆಟ್ ಏರ್‌ಲೈನ್ಸ್ ಎಡವಟ್ಟಿನಿಂದ 12 ಗಂಟೆ ವಿಮಾನದಲ್ಲೇ ಪ್ರಯಾಣಿಕರು ಲಾಕ್‌

Share with Friends
author avatar
News Desk