Latestಬೆಂಗಳೂರು-Bengaluruರಾಜ್ಯ-Karnataka

ಕೇಂದ್ರ ಸ್ಥಾನವನ್ನ ರಾಜ್ಯದ ಜನರಿಗೆ ಅರ್ಪಣೆ – ಹೆಚ್‌ಡಿಕೆ ಭಾವುಕ

ಬೆಂಗಳೂರು: ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ(HD Kumaraswamy) ಅವರು ವಾರದ ಬಳಿಕ ಇಂದು ಬೆಂಗಳೂರಿಗೆ ಆಗಮಿಸಿದರು. ಈ ವೇಳೆ ಅವರಿಗೆ ಕೆಂಪೇಗೌಡರ ಬೆಳ್ಳಿ ಮೂರ್ತಿ ಕೊಟ್ಟು ಅಭಿನಂದನೆ ಸಲ್ಲಿಸದರು.

ಈ ವೇಳೆ ಮಾತನಾಡಿದ ಅವರು, ಪ್ರಧಾನಿ ಮೋದಿ ಸಂಪುಟದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಕೇಂದ್ರ ಸಚಿವನಾದ ಬಳಿಕ ನನ್ನ ಕರ್ಮ ಭೂಮಿಗೆ ಬಂದಿದ್ದೇನೆ ಎಂದರು. ಇದನ್ನೂ ಓದಿ: ಪೋಕ್ಸೊ ಕೇಸಲ್ಲಿ ಬಿಎಸ್‌ವೈಗೆ ರಿಲೀಫ್‌; ಬಂಧನ ಭೀತಿಯಿಂದ ಪಾರಾದ ಮಾಜಿ ಸಿಎಂ

https://youtu.be/scaejbJlrAQ?si=L4GWi3gmee7AUs8_

ಜೊತೆಗೆ ಅವರು ಬಿಜೆಪಿ ಹಾಗೂ ಜೆಡಿಎಸ್‌ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ವಿಶೇಷವಾಗಿ ರಾಮನಗರ, ಮಂಡ್ಯ ಜಿಲ್ಲೆಯ ಜನರಿಗೆ ಅಭಿನಂದನೆ ತಿಳಿಸಿದ್ದಾರೆ.

https://youtu.be/MqYiVxcb02I?si=KHCUL3GvDNdSavNh

ಇದೇ ವೇಳೆ ಜೆಡಿಎಸ್​ ಮುಗಿಸಿದ್ದೇವೆ ಎಂದು ದುರಹಂಕಾರದಲ್ಲಿ ಮಾತನಾಡಿದ್ದವರಿಗೆ ನಾನು ಉತ್ತರ ಕೊಡಲ್ಲ, ನನಗೆ ಬೇಕಾಗಿದ್ದು ರಾಜಕೀಯ ಅಲ್ಲ, ರಾಜ್ಯದ ಜನರ ಸಮಸ್ಯೆಗೆ ಪರಿಹಾರ. ನರೇಂದ್ರ ಮೋದಿ ನನಗೆ ಎರಡು ದೊಡ್ಡ ಖಾತೆಗಳನ್ನು ಕೊಟ್ಟಿದ್ದಾರೆ. 4 ದಿನ ದೆಹಲಿಯಲ್ಲಿ ಕೆಲಸ, ಇನ್ನೆರಡು ದಿನ ಕರ್ನಾಟಕದಲ್ಲಿ ಅದರಲ್ಲೂ ಒಂದು ದಿನ ಮಂಡ್ಯದಲ್ಲಿ ಇರುತ್ತೇನೆ. ಜೊತೆಗೆ ನಮ್ಮ ಸ್ವಯಂಕೃತ ಅಪರಾಧದಿಂದ 2 ಕ್ಷೇತ್ರಗಳಲ್ಲಿ ಸೋತಿದ್ದೇವೆ. ರಾಜ್ಯದ ಅಭಿವೃದ್ಧಿ ಮಾಡಿದ ಮೇಲೆ ನಾನು ಸನ್ಮಾನ ಸ್ವೀಕರಿಸುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೊಲೆ ಮಾಡ್ತಾರೆ ಅಂದ್ರೆ ನಾನೇ ಕಂಪ್ಲೆಂಟ್ ಕೊಟ್ಟು ಸರಿ ಮಾಡಿಕೊಳ್ತಿದ್ದೆ: ಪವಿತ್ರಾ ಗೌಡ ಪಶ್ಚಾತ್ತಾಪ

https://youtu.be/ivtrR5vC0N8?si=aSRI5KxgO8yVe9q_
Share with Friends
author avatar
News Desk