Blogಬೆಳಗಾವಿ-Belagavi

ಪಾತಕಿ ಬನ್ನಂಜೆ ಸಹಚರ, ಇಸ್ಮಾಯಿಲ್ ಅನಾರೋಗ್ಯದಿಂದ ಸಾವು

ಬೆಳಗಾವಿ : ಭೂಗತ ಪಾತಕಿ ಬನ್ನಂಜೆ ರಾಜಾ ಸಹಚರ ಹಿಂಡಲಗಾ ಜೈಲು ಕೈದಿ ಕೆ. ಎಂ. ಇಸ್ಮಾಯಿಲ್ ಅನಾರೋಗ್ಯದಿಂದ ಜಿಲ್ಲಾಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ.

ಅಂಕೋಲಾದ ಉದ್ಯಮಿ ಆರ್.‌ಎನ್. ನಾಯಕ ಶೂಟೌಟ್ ಮೂಲಕ ಹತ್ಯೆ ಪ್ರಕರಣದ ಆರೋಪಿ ಇಸ್ಮಾಯಿಲ್ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ, ಹಿಂಡಲಗಾ ಜೈಲಿನಲ್ಲಿ ಶಿಕ್ಷೆ ಕಳೆಯುತ್ತುದ್ದ ಈತನಿಗೆ ಹೃದಯ ಖಾಯಿಕೆ ಇತ್ತು ಎನ್ನಲಾಗಿದೆ.

ಜೈಲಿನಲ್ಲಿ ಉಪಚಾರ ಮಾಡಿ ಕೊನೆಗೆ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾನೆ.‌ ಭೂಗತ ಪಾತಕಿ ಬನ್ನಂಜೆ ರಾಜಾನ ಸಹಚರನಾಗಿದ್ದ.

Share with Friends
author avatar
News Desk