ಬೆಳಗಾವಿ-Belagaviರಾಜ್ಯ-Karnataka

ಆಸ್ತಿಯ ವಿಚಾರಕ್ಕೆ ತಮ್ಮನ ಮೇಲೆ ಟ್ರಾಕ್ಟರ್ ಹರಿಸಿ ಕೊಂದ ಅಣ್ಣ

ಬೆಳಗಾವಿ : ಆಸ್ತಿಯ ವಿಚಾರಕ್ಕೆ ಸ್ವಂತ ತಮ್ಮನನ್ನೆ ಟ್ರಾಕ್ಟರ್ ಹತ್ತಿಸಿ ಕೊಲೆ ಮಾಡಿರುವ ಘಟನೆ ಬೆಳಗಾವಿಯ ಎರಗಟ್ಟಿ ತಾಲೂಕಿನಲ್ಲಿ ನಡೆದಿದೆ. ಗೋಪಾಲ್ (27) ಮೃತ ದುರ್ದೈವಿ, ಕಳೆದ ಕೆಲ ವರ್ಷಗಳ ಹಿಂದೆಯಷ್ಟೇ ಗೋಪಾಲ್ ಹಾಗೂ ಆತನ ಅಣ್ಣ ಮಾರುತಿ ಬಾವಿಹಾಳ (30) ಎಂಬಾತನಿಗೆ ಆಸ್ತಿಯನ್ನು ಹಂಚಲಾಗಿತ್ತು. ಈ ಬಗ್ಗೆ ಇಬ್ಬರಿಗೂ ಅಸಮಾಧಾನವಿತ್ತು, ಈ ಹಿನ್ನಲೆ ಇಬ್ಬರ ನಡುವೆ ಗಲಾಟೆಯಾಗುತ್ತಿತ್ತು.

ಆದರೆ ಒಂದು ದಿನ ಗೋಪಾಲ್ ಅಣ್ಣನ ಪಾಲಿಗೆ ಬಂದಿದ್ದ ಟ್ರಾಕ್ಟರ್ ಅನ್ನು ಆತ ಮನೆಯಿಂದ ತಂದು ತನ್ನ ಹೆಂಡತಿಯ ಮನೆಯಲ್ಲಿ ಇರಿಸಿದ್ದ, ಅಷ್ಟೇ ಅಲ್ಲದೆ ಇಬ್ಬರ ನಡುವೆ ಈ ಬಗ್ಗೆ ಸಾಕಷ್ಟು ಭಾರೀ ಗಲಾಟೆಯಾಗಿತ್ತು.

ಆದರೆ ಇದೀಗ ಮಾತಿಗೆ ಮಾತು ಬೆಳೆದು ಇಬ್ಬರು ಕೈಕೈ ಮಿಲಾಯಿಸಿದ್ದು, ಸಿಟ್ಟಿನಲ್ಲಿದ್ದ ಅಣ್ಣ ಮಾರುತಿ ನೇರವಾಗಿ ಟ್ರಾಕ್ಟರ್ ಹರಿಸಿ ತಮ್ಮ ಗೋಪಾಲ್ ನನ್ನು ಕೊಲೆ ಮಾಡಿದ್ದಾನೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯರಗಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

Share with Friends
author avatar
News Desk