BlogLatestTop Storiesರಾಜಕೀಯ | Politicsರಾಜ್ಯ-Karnataka

ಇವರಿಗೆ ಅಲ್ಲಾ ಯಾವಾಗ ಬಂದು ಜಾಗ ಕೊಟ್ಟಿದ್ದ..? : ಯತ್ನಾಳ್

ಹಾವೇರಿ : ಇದು ಅಲ್ಲಾನ‌ ಜಾಗ ಅಂತ ಜಮೀರ್ ಹೇಳ್ತಾನೆ. ಅಲ್ಲಾ ಯಾವಾಗ ಭಾರತಕ್ಕೆ ಬಂದ? ಚೆನ್ನಕೇಶವ, ಸೋಮೇಶ್ವರ ದೇವಾಲಯ ಅವರದಾ? ಕಾಗಿನೆಲೆ ಊರೇ ವಕ್ಪ್ ಮಾಡಿದ್ದಾರೆ. ಅಂತಿದ್ದಾರೆ. ಇವರಿಗೆ ಅಲ್ಲಾ ಯಾವಾಗ ಕೊಟ್ಟ? ಎಂದು ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದಾರೆ.

ಇದು ಸಾಬರ ಸರ್ಕಾರ, ಹಿಂದೂಗಳದ್ದಲ್ಲ. ಆದಿಲ್ ಶಾಹಿ, ನವಾಬರು ಇದ್ದ ಕಡೆ ಬಹುತೇಕ ಇದೇ ಆಗಿದೆ. ಬೀದರ್ ನಲ್ಲಿ ನಿಜಾಮ್ ಇದ್ದಾಗ ಏ ಸಬ್ ತುಮಾರಾ ಅಂತ ಹೇಳಿದ್ನಂತೆ. ಅದಕ್ಕೆ ಜಾಗ ಕೇಳ್ತಿದಾರೆ. ಅವರಿಗೆ ಕೋರ್ಟ್ ಇಲ್ಲ. ಡಿಸಿ, ಎಸಿ ಸಿವಿಲ್ ಯಾವ ಕೋರ್ಟ್ ಇಲ್ಲ. ಅವರದೇ ಟ್ರಿಬ್ಯುನಲ್ ಇದೆ. ಅಲ್ಲಿ ಜಡ್ಜ್ ಕೂಡಾ ಸಾಬನೇ. ಅವರೇ ನಿರ್ಣಯ ಮಾಡೋರು ಎಂದು ಕಿಡಿಕಾರಿದ್ದಾರೆ.

ಮಣ್ಣು ಮಾಡಲು, ನಮಾಜ್ ಮಾಡಲು ಜಾಗ ಕೊಟ್ಟರೆ ಇಡೀ ಸರ್ವೆ ನಂಬರ್ ನಮ್ಮದು ಅಂತಾರೆ. ಸಣ್ಣ ಕಲ್ಲು ಇದ್ದರೂ ಸುಣ್ಣ ಹೊಡೆದು ಆ ಜಾಗಕ್ಕೆ ಚಾದರ ಹಾಕಿ ನಮ್ಮದು ಅಂತಾರೆ. ಬೊಮ್ಮಾಯಿ ಕಾಲದಲ್ಲಿ ಇದಕ್ಕೆ ಅವಕಾಶ ಇರಲಿಲ್ಲ. ಸಿದ್ದರಾಮಯ್ಯ ಅರೆಹುಚ್ಚ ಜಮೀರ್ ಗೆ ಹೇಳಿದರು. ಅದಕ್ಕೆ ಜಿಲ್ಲೆಗಳಿಗೆ ಹೋಗಿ ಅಧಿಕಾರಿಗಳಿಗೆ ಜಮೀರ್ ಏಕ ವಚನದಲ್ಲಿ ಆರ್ಡರ್ ಮಾಡಿದಾರೆ. ಕೇಂದ್ರದ ಅಧಿವೇಶನದಲ್ಲಿ ವಕ್ಪ್ ತಿದ್ದುಪಡಿ ಕಾನೂನಿಗೆ ವಿರೋದ ಮಾಡಿದರೆ ಓಡಾಡೋಕೆ ಬಿಡಲ್ಲ ಅಂತ ಕಾಂಗ್ರೆಸ್ ಎಂಪಿಗಳಿಗೆ ಹೇಳಿ. ಕಾಂಗ್ರೆಸ್ ಎಂಪಿಗಳ ಮನೆ ಮುಂದೆ ಧರಣಿ ಮಾಡಿ ಎಂದು ಯತ್ನಾಳ್ ಕರೆ ನೀಡಿದರು.

ಯತ್ನಾಳ್ ಕ್ಷಮೆ ಕೇಳಲಿ ಎಂಬ ಸಿಎಂ ಇಬ್ರಾಹಿಂ ಹೇಳಿಕೆ ವಿಚಾರ ಕುರಿತು ಮಾತನಾಡಿದ ಅವರು, ಪುಗಸಟ್ಟೆ ಕ್ಷಮೆ ಕೇಳೋಕೆ‌ ನನಗೇನು ? ಬೇಕಾದರೆ ಕೇಸ್ ಹಾಕಲಿ. 38 ಕೇಸ್ ಆಗುತ್ವೆ. ಕೇಸ್ ಹಾಕು ಅಂತ ಹೇಳ್ರಿ. ಇಂಡೀ ತಾಲೂಕಿನಲ್ಲಿ ಒಂದು ಊರನ್ನೇ ವಕ್ಪ್ ಮಾಡಿದಾರೆ. ಈ ಬಗ್ಗೆ ಒಬ್ರು ಶಾಸಕನೂ ಮಾತಾಡಿಲ್ಲ. ಇವರು ಮುಸ್ಲೀಂ ಓಟ್ ನಿಂದ ಮಾತ್ರ ಶಾಸಕ‌ ಆಗಿದಾರಾ? ಹಿಂದೂಗಳು ಓಟ್ ಹಾಕಿಲ್ಲವಾ? 9 ವರೆ ಲಕ್ಷ ಎಕರೆ ಅಂತ ಕ್ಲೇಮ್ ಮಾಡಿಕೊಳ್ತಿದ್ದಾರೆ. 2019 ರಲ್ಲಿ ಶೋಭಾ ಕರಂದ್ಲಾಜೆ ಪ್ರಶ್ನೆ ಮಾಡಿದಾಗ 5 ಲಕ್ಷ 81 ಸಾವಿರ ಎಕರೆ ಅಂದಿದ್ರು. ಕರ್ನಾಟಕದೊಂದೇ ಇಷ್ಟು. ಮಠಗಳನ್ನು ಕೂಡಾ ವಕ್ಪ್ ಅಂತ ಮಾಡಿದ್ದಾರೆ. ನಾವು ಮಾಡೋದು ಗ್ಯಾರಂಟಿ. ಚಳಿಗಾಲದ ಅಧಿವೇಶನದಲ್ಲಿ ಬಿಲ್ ಪಾಸ್ ಮಾಡಲಾಗುತ್ತೆ. ವಕ್ಪ್ ಅಂತ ಎಂದೂ ಹಾಕೋಕೆ ಬರದಂಗೆ ತಿದ್ದುಪಡಿ ಮಾಡ್ತೀವಿ. ವಕ್ಪ್ ರದ್ದು ಮಾಡಿ ಅಂತ ಕೇಳ್ತೀವಿ ಎಂದರು.

ವಕ್ಪ್ ವಿಚಾರದಲ್ಲಿ ನನ್ನ ಮೇಲೂ ಕೇಸ್ ಹಾಕಿದ್ದಾರೆ. ಪ್ರತಾಪ್ ಸಿಂಹ, ಚಕ್ರವರ್ತಿ ಸೂಲಿಬೆಲೆ ,ಸಿ.ಟಿ ರವಿ ಬೊಮ್ಮಾಯಿ ಮೇಲೂ ಕೇಸ್ ಹಾಕಿದ್ದಾರೆ. ಅಡ್ಜಸ್ಟ್‌ಮೆಂಟ್ ಇರಲಾರದ ಬಿಜೆಪಿ ನಾಯಕರ ಮೇಲೆ ಕೇಸ್ ಹಾಕಲಾಗಿದೆ. ಡಿಕೆಶಿ ಭಿಕ್ಷೆಯಿಂದ ಶಾಸಕ ಆದವರ ಮೇಲೆ ಒಂದು ಕೇಸ್ ಮಾಡಿಲ್ಲ. ಪೊಲೀಸರು ಅದನ್ನೇ ಮಾಡ್ತಿದಾರೆ. ಹೊಂ ಮಿನಿಸ್ಟರ್ ಡೈರೆಕ್ಷನ್ ಇದೆ. ನಾವ ಐದಾರ ಮಂದಿ ಮೇಲೆ ಮಾತ್ರ ಕೇಸ್ ಹಾಕಿದಾರೆ. ಉಳಿದವರ ಮೇಲೆ ಆಗಿಲ್ಲ ಎಂದು ಶಾಸಕ ಯತ್ನಾಳ್ ಆರೋಪಿಸಿದ್ದಾರೆ.

ಹಾವೇರಿ ರೈತನ ಆತ್ಮಹತ್ಯೆ ವಿಚಾರದಲ್ಲಿ ಸಾಲ ಹೆಚ್ಚಾಗಿತ್ತು ಅಂತ ಪೊಲೀಸರು ಸ್ಟೇಟಮೆಂಟ್ ಮಾಡಿದ್ರು. 5 ಲಕ್ಷ ರೂ ಪರಿಹಾರದ ಸಂಬಂಧ ರೈತರು ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಸಚಿವ ಶಿವಾನಂದ ಪಾಟೀಲ್ ಹೇಳಿದ್ದ. ರೈತರು ಎರಡು‌ ವರುಷ ಬರಗಾಲ ಬರಲಿ ಅಂತ ಬೇಡಿಕೊಳ್ಳುತ್ತಾರೆ ಎಂದು ಶಿವಾನಂದ ಪಾಟೀಲ್ ಹೇಳಿದ್ದಾರೆ. ಅದಕ್ಕೆ 5 ಕೋಟಿ ರೂ ಕೊಡ್ತೀನಿ ಆತ್ಮಹತ್ಯೆ ಮಾಡಿಕೊ ಅಂದಿದ್ದೆ. ಹಣಕ್ಕಾಗಿ ರೈತರು ಏನು ಬೇಕಾದರೂ ಮಾಡ್ತಾರೆ ಅನ್ನೋ ಭಾವನೆ ಈ ಸರ್ಕಾರಕ್ಕೆ ಇದೆ ಎಂದು ವಾಗ್ದಾಳಿ ನಡೆಸಿದರು.

Share with Friends
author avatar
News Desk