Crime NewsLatestಬೆಂಗಳೂರು-Bengaluruರಾಜ್ಯ-Karnataka

ಬೆಂಗಳೂರಿನಲ್ಲಿ ಆಂಬುಲೆನ್ಸ್ ಡ್ರೈವರ್‌ನ ಅವಾಂತರದ ಚಾಲನೆ- 3 ಕಾರು ಮತ್ತು ಒಂದು ಬೈಕ್ ನಡುವೆ ಸರಣಿ ಅಪಘಾತ

ಬೆಂಗಳೂರು: ಅಂಬುಲೆನ್ಸ್ (Ambulance) ಡಿಕ್ಕಿ ಹೊಡೆದ ಪರಿಣಾಮ ಮೂರು ಕಾರುಗಳು (Car) ಮತ್ತು ಬೈಕ್ (Bike) ನಡುವೆ ಸರಣಿ ಅಪಘಾತ ಶುಕ್ರವಾರ ರಾತ್ರಿ 10.45 ರ ಸುಮಾರಿಗೆ ಬ್ಯಾಟರಾಯನಪುರ (Byatarayanapura) ಸಂಚಾರಿ ಠಾಣಾ ವ್ಯಾಪ್ತಿಯ ಗುಡ್ಡದಹಳ್ಳಿ ಬಳಿ ಘಟನೆ ಸಂಭವಿಸಿದೆ.

ಅಂಬುಲೆನ್ಸ್ ಚಾಲಕ ಸುಮಂತ್ ಮಾರ್ಕೆಟ್‌ನಿಂದ ಗುಡ್ಡದಹಳ್ಳಿ ಮಾರ್ಗದಿಂದ ವೇಗವಾಗಿ ಬರುತ್ತಿದ್ದ ವೇಳೆ ನಿಯಂತ್ರಣ ಸಿಗದೆ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮುಂದಿದ್ದ ಎರಡು ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ. ಇದನ್ನೂ ಓದಿ:ಉಗ್ರರಿಂದ ಬಂಬ್ ದಾಳಿ- 2 ಯೋಧರು ಹುತಾತ್ಮ

https://youtu.be/DbyxeBZAkXM?si=zkEZ32CBAa0osNlC

ಸುಮಂತ್ ಟೆಂಕ್ಷನ್‌ನಲ್ಲಿ ಬ್ರೇಕ್ ತುಳಿಯದೆ ಎಕ್ಸಲೇಟರ್ ತುಳಿದು ಅವಾಂತರ ಸೃಷ್ಟಿಸಿದ್ದಾರೆ. ಇದೇ ವೇಳೆ ನಾಲ್ಕು ತಿಂಗಳ ಗರ್ಭಿಣಿ ಮಹಿಳೆ ಕಾರಿನಲ್ಲಿದ್ದು, ಅದೃಷ್ಟಾವಶತ್ ಯಾವುದೇ ಪ್ರಾಣಹಾಣಿಯಾಗಿಲ್ಲ. ಇದನ್ನೂ ಓದಿ: ಚಿನ್ನದ ನಾಡಲ್ಲಿ ಇವಿಎಂ ಮೆಷಿನ್ ಸಾಗಿಸುತ್ತಿದ್ದ ಟೈರ್ ಬ್ಲಾಸ್ಟ್

ಸದ್ಯ ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬ್ಯಾಟರಾಯನಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಚಾಲಕ ಸುಮಂತ್‌ನ್ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶಕ್ಕೆ ಕಳ್ಳಸಾಗಾಣಿಕೆಯಾಗುತ್ತಿದ್ದ 95 ಮಕ್ಕಳ ರಕ್ಷಣೆ

Share with Friends
author avatar
News Desk