
ರಾಯರ ಕೃಪೆಯಿಂದ ವೀಲ್ಚೇರ್ನಲ್ಲಿದ್ದ MBBS ವಿದ್ಯಾರ್ಥಿನಿಗೆ ಹೊಸ ಜೀವನ – ಪವಾಡ ಎಂದ ಕುಟುಂಬ
ಹಾವೇರಿ: ಅಸಾಧ್ಯ ಅಂದಿದ್ದ ಬದುಕಿಗೆ ರಾಯರ ಕೃಪೆಯಿಂದ ಹೊಸ ತಿರುವು ಸಿಕ್ಕಿದೆ. ಹಾವೇರಿಯಲ್ಲಿ ಒಂದು ರಾಯರ ಪವಾಡ ನಡೆದಿದೆ ಎಂಬ ಮಾತುಗಳು ಈಗ ಎಲ್ಲೆಡೆ ಕೇಳಿಬರುತ್ತಿವೆ.
ವೈದ್ಯರು ಕೈಬಿಟ್ಟಿದ್ದ ಕೇಸ್ನಲ್ಲಿ ಚೇತರಿಕೆ
ನೆಗಳೂರು ಗ್ರಾಮದ ಶಿವಪ್ಪ ನೆಗಳೂರು ಅವರ ಪುತ್ರಿ ನಿವೇದಿತಾ, ಗದಗನಲ್ಲಿ MBBS ಫೈನಲ್ ಇಯರ್ಓದುತ್ತಿದ್ದ ವಿದ್ಯಾರ್ಥಿನಿ. ಆಕೆಗೆ ಅಪರೂಪದ ಆಟೋ ಇಮ್ಯೂನ್ ಕಾಯಿಲೆಕಾಣಿಸಿಕೊಂಡಿತ್ತು.
ಮೂರ್ಛೆ, ಕೈಕಾಲು ಸ್ವಾಧೀನ ಕಳೆದುಕೊಂಡು ನಿವೇದಿತಾವೀಲ್ಚೇರ್ಗೆ ಸೀಮಿತಳಾಗಿದ್ದಳು. ಬದುಕೋದು ಗ್ಯಾರಂಟಿ ಇಲ್ಲ ಎಂದು ವೈದ್ಯರು ಹೇಳಿದ್ದರು. ಮಣಿಪಾಲ್ ಆಸ್ಪತ್ರೆ ಸೇರಿ ಹಲವು ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಚೇತರಿಕೆ ಕಾಣದ ಸ್ಥಿತಿ ಇತ್ತು.
ರಾಯರ ಮೊರೆ ಹೋದ ಕುಟುಂಬಕ್ಕೆ ಸಿಕ್ಕ ಆಶೀರ್ವಾದ
ಕೊನೆಗೆ ಕೈಹಿಡಿದು ನಡೆಸುವಂತೆ ಕುಟುಂಬರಾಯರ ಮೊರೆ ಹೋಯಿತು. ಹೊಸರಿತ್ತಿ ರಾಯರ ಮಠಕ್ಕೆ ಸುಭುದೇಂದ್ರ ತೀರ್ಥ ಶ್ರೀಗಳುಆಗಮಿಸಿದ್ದ ಸಂದರ್ಭದಲ್ಲಿ ನಿವೇದಿತಾಳನ್ನು ಕರೆದೊಯ್ದ ಕುಟುಂಬ ಶ್ರೀಗಳ ಆಶೀರ್ವಾದ ಪಡೆಯಿತು.ಶ್ರೀಗಳು ಮಂತ್ರಾಕ್ಷತೆ ನೀಡಿ,ಐದು ವಾರ ರಾಯರ ಮಠಕ್ಕೆ ನಡೆದುಕೊಂಡು ಬರುವಂತೆ ಸಲಹೆ ನೀಡಿದರು.
3 ವಾರದಲ್ಲೇ ಮಹತ್ವದ ಚೇತರಿಕೆ
ಶ್ರೀಗಳ ಮಾತಿನಂತೆ ಪೂಜೆ, ಪ್ರಾರ್ಥನೆ ಮಾಡಿದಕೇವಲ ಮೂರು ವಾರದಲ್ಲೇನಿವೇದಿತಾಳ ಆರೋಗ್ಯದಲ್ಲಿ ಮಹತ್ವದ ಚೇತರಿಕೆ ಕಂಡುಬಂದಿದೆ. ವೀಲ್ಚೇರ್ನಲ್ಲಿದ್ದ MBBS ವಿದ್ಯಾರ್ಥಿನಿ ನಿವೇದಿತಾ ಈಗ ಸ್ವತಃ ನಡೆದಾಡುತ್ತಿದ್ದಾಳೆ.
ರಾಯರ ಪವಾಡದಿಂದಲೇ ನಮ್ಮ ಮಗಳು ಬದುಕುಳಿದಿದ್ದಾಳೆ. ವೈದ್ಯರು ಅಸಾಧ್ಯ ಎಂದಿದ್ದ ಜಾಗದಲ್ಲಿ ರಾಯರು ಸಾಧ್ಯ ಮಾಡಿದರು` ಎಂದು ಭಾವುಕರಾಗಿ ಹೇಳಿದ ಕುಟುಂಬದವರು.ಈ ಘಟನೆ ಹಾವೇರಿ ಜಿಲ್ಲೆಯಲ್ಲಿ ಭಕ್ತರಲ್ಲಿ ಹೊಸ ನಂಬಿಕೆ ಮೂಡಿಸಿದೆ.
