BlogCrime NewsLatestTop Storiesಬೆಂಗಳೂರು-Bengaluru

ಪ್ರಿಯಕರನ ಜೊತೆ ಸರಸದ ವೇಳೆಯೇ ಸಿಕ್ಕಿಬಿದ್ದ ಪತ್ನಿ, ಪತಿಯ ಕಥೆ ಮುಗಿಸಿದ ಜೋಡಿ

ಬೆಂಗಳೂರು: ಪ್ರಿಯಕರನ ಜೊತೆ ಸರಸದಲ್ಲಿ ತೊಡಗಿದ್ದ ಪತ್ನಿಯನ್ನು ರೆಡ್​ಹ್ಯಾಂಡಾಗಿ ಹಿಡಿದ ಪತಿ ಕೊಲೆಯಾದ ಘಟನೆ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ಮಹೇಶ್ ಕೊಲೆಯಾದ ದುರ್ದೈವಿ.

ಹಾಸನ ಮೂಲದ ಮಹೇಶ್ ಹಾಗೂ ತೇಜಸ್ವಿನಿ ಕೆಲ ವರ್ಷಗಳ ಹಿಂದೆ ಮದುವೆಯಾಗಿ ಬೆಂಗಳೂರಿಗೆ ಬಂದಿದ್ದರು. ಮಹೇಶ್ ಆಟೋ ಚಾಲಕನಾಗಿದ್ದ. ತೇಜಸ್ವಿನಿ ಖಾಸಗಿ ಫೈನಾನ್ಸ್ನಲ್ಲಿ ಸಾಲ ವಸೂಲಾತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಇವರಿಬ್ಬರ ಮಧ್ಯೆ ಕಳೆದ ಒಂದು ವರ್ಷದಿಂದ ಇಬ್ಬರ ನಡುವೆ ಕೌಟುಂಬಿಕ ಕಲಹವಿತ್ತು.

ಕಳೆದ ಆಗಸ್ಟ್ 9ರಂದು ಮಹೇಶ್ ಕೆಲಸಕ್ಕೆ ಹೋಗಿದ್ದಾಗ ಗಜೇಂದ್ರ ಮನೆಗೆ ಬಂದಿದ್ದಾನೆ. ಮಧ್ಯಾಹ್ನ ಮಹೇಶ್ ಮನೆಗೆ ಬಂದಾಗ ಗಜೇಂದ್ರ ಹೆಂಡತಿ ಜೊತೆ ಮನೆಯಲ್ಲಿದ್ದ. ಈ ವೇಳೆ ಮಹೇಶ್ ತನ್ನ ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ. ಗಜೇಂದ್ರ ಜಗಳ ಬಿಡಿಸಲು ಬಂದಾಗ ಆತನಿಗೂ ಥಳಿಸಿದ್ದಾನೆ. ಆಗ ಗಜೇಂದ್ರ ಹಾಗೂ ತೇಜಸ್ವಿನಿ ಸೇರಿ ಮಹೇಶ್ ಕುತ್ತಿಗೆ ಹಿಡಿದು ಹತ್ಯೆ ಮಾಡಿದ್ದಾರೆ.

ತೇಜಸ್ವಿನಿ ಗಂಡ ಮಹೇಶ್ ಕೊಲೆಯಾದ ಬಳಿಕ ಗಜೇಂದ್ರ ಮನೆಯಿಂದ ಎಸ್ಕೇಪ್ ಆಗಿದ್ದಾನೆ. ಪತ್ನಿ, ನನ್ನ ಗಂಡ ಮಹೇಶ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ ಎಂದು ನಾಟಕ ಮಾಡಿದ್ದಾಳೆ. ಜೋರಾಗಿ ಚೀರಾಡುತ್ತಾ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ ಎಂದು ಡ್ರಾಮಾ ಮಾಡಿದ್ದಾಳೆ. ವೈಟ್ ಫೀಲ್ಡ್ ಪೊಲೀಸರು ಈ ಘಟನೆಯ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದರು. ಪೊಲೀಸರ ವಿಚಾರಣೆ ವೇಳೆ ಪ್ರಿಯತಮ ಹಾಗೂ ಪತ್ನಿಯ ಕಳ್ಳಾಟ ಬಯಲಾಗಿದೆ.

ಕೃತ್ಯ ಎಸಗಿದ ಆರೋಪದಡಿ ಕೊಲೆಯಾದ ಮಹೇಶ್ ಅವರ ಪತ್ನಿ ತೇಜಸ್ವಿ ಹಾಗೂ ಆಕೆಯ ಪ್ರಿಯಕರ ಗಜೇಂದ್ರ ಎಂಬುವವರನ್ನು ಬಂಧಿಸಲಾಗಿದೆ. ಈ ಬಗ್ಗೆ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share with Friends
author avatar
News Desk