BlogLatestTop Storiesರಾಷ್ಟ್ರೀಯ-National

ದೆಹಲಿ ಮಾಜಿ ಡಿಸಿಎಂ ಮನೀಶ್​ ಸಿಸೋಡಿಯಾಗೆ ಜಾಮೀನು

ನವದೆಹಲಿ : ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಆಮ್​ ಆದ್ಮಿ ಪಕ್ಷದ ನಾಯಕ ಮಾಜಿ ಉಪಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ಗೆ ಸುಪ್ರೀಂಕೋರ್ಟ್​ ಜಾಮೀನು ಮಂಜೂರು ಮಾಡಿದೆ.

ದೆಹಲಿ ಅಬಕಾರಿ ನೀತಿ 2021-22ರ ರಚನೆ ಮತ್ತು ಅನುಷ್ಠಾನದಲ್ಲಿರುವ ಅಕ್ರಮಗಳಲ್ಲಿ ಭಾಗಿಯಾಗಿದ್ದಕ್ಕಾಗಿ 2023ರ ಫೆಬ್ರವರಿ 26 ರಂದು ಸಿಸೋಡಿಯಾ ಅವರನ್ನು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಬಂಧಿಸಿತ್ತು.

ಇದಾದ ಬಳಿಕ ಸಿಬಿಐ ಎಫ್​ಐಆರ್​ಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಅವರನ್ನು ಮಾರ್ಚ್​ 9ರಂದು ಬಂಧಿಸಿತ್ತು. ಸಿಸೋಡಿಯಅ ಅವರು ಫೆಬ್ರವರಿ 28 ಎಂದು ದೆಹಲಿ ಕ್ಯಾಬಿನೆಟ್​ಗೆ ರಾಜೀನಾಮೆ ನೀಡಿದ್ದರು.

ಆಗಸ್ಟ್​ 6ರಂದು ಸಿಸೋಡಿಯಾ ಅರ್ಜಿಗಳ ಕುರಿತು ಸುಪ್ರೀಂಕೋರ್ಟ್​ ತನ್ನ ತೀರ್ಪು ಕಾಯ್ದಿರಿಸಿತ್ತು. 530 ದಿನಗಳ ನಂತರ ಅಂದರೆ 17 ತಿಂಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದ ಮನೀಶ್​ ಸಿಸೋಡಿಯಾ ಹೊರಬರಲಿದ್ದಾರೆ.

Share with Friends
author avatar
News Desk