BlogLatestTop Stories

ಬೆಂಗಳೂರಿನಲ್ಲಿ ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ

ಬೆಂಗಳೂರು : ಮೆಟ್ಟಲಿನ ಸೈಡ್ ಗ್ರಿಲ್ ಗೆ ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಲ್ಲೇಶ್ವರಂನ ಸಾಯಿ ರೆಸಿಡೆನ್ಸಿ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ.

ರಾತ್ರಿ ಖಾಸಗಿ ಅಪಾರ್ಟ್ಮೆಂಟ್ ಗೆ ಏಕಾ ಏಕಿ ಬಂದ 45 ವರ್ಷದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದಯಾಲ್. ಈ ಮಹಿಳೆ ಅಪಾರ್ಟ್ಮೆಂಟ್ ನ ನಿವಾಸಿ ಅಲ್ಲ ಬೇರೊಂದು ಕಡೆ ವಾಸ ಮಾಡೋ ಮಹಿಳೆ ರಾತ್ರಿ ಖಾಸಗಿ ಅಪಾರ್ಟ್ಮೆಂಟ್ ಗೆ ಬಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಘಟನಾ ಸ್ಥಳಕ್ಕೆ ಮಲ್ಲೇಶ್ವರಂ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮಹಿಳೆ ಗುರುತು ಪತ್ತೆ ಹಚ್ಚುತ್ತಿದ್ದಾರೆ.

Share with Friends
author avatar
News Desk