ಜೈಲಲ್ಲಿ ಕಿತ್ತಾಡಿಕೊಂಡ ರೇಣುಕಾಸ್ವಾಮಿ ಕೊಲೆ ಆರೋಪಿಗಳು
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಝೈಳಲ್ಲಿರುವ ಆರೋಪಿಗಳು ಒಬ್ಬರಿಗೊಬ್ಬರು ಕುತ್ತಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ತುಮಕೂರು ಜೈಲಲ್ಲಿರೋ ನಾಲ್ವರ ನಡುವೆ ಮಾತಿನ ಚಕಮಕಿ ನಡೆದಿದ್ದು ಒಬ್ಬೊಬ್ಬರ ಮೇಲೆ ಒಬ್ಬಬ್ಬೊರು ಹೇಳಿಕೊಂಡು ಬೈದುಕೊಂಡಿದ್ದಾರೆ.
ವಿಶಂಕರ್,ನಿಖಿಲ್, ಕಾರ್ತಿಕ್ ,ಕೇಶವ ಎಲ್ಲರೂ ಒಂದೇ ಬ್ಯಾರಕ್ ನಲ್ಲಿದ್ದು ನಿನ್ನ ಮಾತು ಕೇಳಿ ನಾನೂ ಸಿಕ್ಕಾಕೊಂಡೆ ಅಂತ ಪರಸ್ಪರ ನಿಂದನೆ ಮಾಡಿಕೊಂಡಿದ್ದಾರೆ.
ರಾಘವೇಂದ್ರನ ಮಾತು ಕೇಳಿ ನಾವು ಸಿಲುಕಿದ್ವಿ, ನಮಗೆ ಜೈಲೇ ಗಟ್ಟಿಯಾಗುತ್ತೋ, ಯಾರು ಸಹಾಯ ಮಾಡ್ತಾರೋ ಇಲ್ವೋ ಎಂದು ಗೋಳಾಟ ನಡೆಸಿದ್ದಾರೆ.
ನಮ್ಮೆಲ್ಲರ ಜೀವನ ಸೆಟ್ಲ್ ಆಗುತ್ತೆ ಡೋಂಟ್ ವರಿ ಎಂದಿದ್ದನಂತೆ ರಾಘವೇಂದ್ರ, ಕೊಲೆ ಬಳಿಕ ಮೃತದೇಹ ಬಿಸಾಡಿದ್ದು, ಸ್ಟೇಷನ್ ಗೆ ಹೋಗಿ ಸರೆಂಡರ್ ಆಗಿದ್ದು ಎಲ್ಲಾ ರಾಘವೇಂದ್ರ ಹೇಳಿದಂತೆ.
ದುಡ್ಡಿನ ಆಸೆಗೆ ತಪ್ಪು ಮಾಡಿಬಿಟ್ವಿ ಎಂದು ಜೈಲು ಸಿಬ್ಬಂದಿ ಬಳಿ ಅಳಲು ಜೋರು ಮಾತುಗಳಿಂದ ಬೈದಾಡಿಕೊಂಡಿದ್ದು, ಜೈಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರಂತೆ. ಗಲಾಟೆ ಮಾಡಿಕೊಂಡರೆ ಕಷ್ಟವೆಂದು ಜೈಲು ಸಿಬ್ಬಂದಿ ಭದ್ರತೆಗೆ ನಿಗಾ ವಹಿಸಿದ್ದಾರಂತೆ.
