BlogLatestTop Storiesವಿದೇಶ-International

ಇಸ್ರೇಲ್ ಮಿಸೈಲ್ ದಾಳಿ : ಇರಾನ್​ನಲ್ಲಿ ಹಮಾಸ್​ ಮುಖ್ಯಸ್ಥ ಇಸ್ಮಾಯಿಲ್ ಹನಿಯಾ ಹತ್ಯೆ

ಟೆಹ್ರಾನ್ : ಇರಾನ್‌ ರಾಜಧಾನಿ ಟೆಹ್ರಾನ್‌ನಲ್ಲಿ ಹಮಾಸ್‌ನ ಪೊಲಿಟಿಕಲ್ ಬ್ಯೂರೋ ಮುಖ್ಯಸ್ಥ ಹನಿಯೆಹ್ ಅವರ ಹತ್ಯೆಯಾಗಿದೆ. ಹನಿಯಾ ಇದ್ದ ಟಹ್ರಾನ್ ನಿವಾಸವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ದಾಳಿಯಲ್ಲಿ ಇಸ್ಮಾಯಿಲ್ ಹನಿಯಾ ಕೊಲ್ಲಲ್ಪಟ್ಟಿದ್ದಾನೆ. ಇದೇ ವೇಳೆ ಅವರ ಅಂಗರಕ್ಷಕರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಹೇಳಿಕೆ ಬಿಡುಗಡೆ ಮಾಡಿದೆ.

ಇಸ್ಮಾಯಿಲ್ ಹನಿಯಾ ಹತ್ಯೆಯನ್ನು ಇರಾನ್ ಸೇನೆ, ಇರಾನ್ ರೆವಲ್ಯೂಷನರಿ ಗಾರ್ಡ್ಸ್ ಕೂಡ ದೃಢಪಡಿಸಿವೆ. ಹನಿಯಾ ಅವರ ಸಾವನ್ನು ದೃಢೀಕರಿಸುವ ಹೇಳಿಕೆಯನ್ನು ಹಮಾಸ್ ಸಹ ಬಿಡುಗಡೆ ಮಾಡಿದೆ ಮತ್ತು ಇಸ್ರೇಲ್ ಹತ್ಯೆಯ ಆರೋಪವನ್ನೂ ಮಾಡಿದೆ. ಆದರೆ, ಈ ಬಗ್ಗೆ ಇಸ್ರೇಲ್ ಯಾವುದೇ ಹೇಳಿಕೆ ನೀಡಿಲ್ಲ.

ಮಂಗಳವಾರ ಮುಂಜಾನೆ, ಇಸ್ಮಾಯಿಲ್ ಹನಿಯಾ ಅವರು ಇರಾನ್‌ನ ನೂತನ ಅಧ್ಯಕ್ಷರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇತ್ತೀಚೆಗಷ್ಟೇ ಇಸ್ರೇಲಿ ಭದ್ರತಾ ಪಡೆಗಳಿಂದ ಹನಿಯಾ ಅವರ ಮೂವರು ಮಕ್ಕಳು ಕೂಡ ಕೊಲ್ಲಲ್ಪಟ್ಟಿದ್ದರು. ಹನಿಯಾರ ಮೂವರು ಮಕ್ಕಳಾದ ಅಮೀರ್, ಹಜೆಮ್ ಹಾಗೂ ಮೊಹಮ್ಮದ್ ಗಾಜಾದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಹೊರಟಿದ್ದರು ಎಂದು ಇಸ್ರೇಲ್ ಸೇನೆ ಹೇಳಿತ್ತು.

ಕಳೆದ ಅಕ್ಟೋಬರ್ 7ರ ಇಸ್ರೇಲ್‌ ಮೇಲೆ ನಡೆದ ದಾಳಿಯ ನಂತರ ಇಸ್ಮಾಯಿಲ್ ಹನಿಯೆಹ್ ಅವರನ್ನು ಕೊಂದು ಹಮಾಸ್ ಗುಂಪನ್ನು ನಾಶಮಾಡುವುದಾಗಿ ಇಸ್ರೇಲ್ ಪ್ರತಿಜ್ಞೆ ಮಾಡಿತ್ತು. ಇದರ ಪರಿಣಾಮವಾಗಿ 1,195 ಜನರು ಸಾವನ್ನಪ್ಪಿದರು, ಹೆಚ್ಚಾಗಿ ನಾಗರಿಕರು ಮೃತಪಟ್ಟಿದ್ದರು. ಇದೀಗ ಇಸ್ರೇಲ್‌ ದಾಳಿಯಲ್ಲಿ ಹಮಾಸ್‌ ಮುಖ್ಯಸ್ಥನನ್ನ ಹತ್ಯೆಗೈದಿದ್ದು ಸೇಡು ತೀರಿಸಿಕೊಂಡಿದೆ ಎಂದು ವರದಿಗಳು ಉಲ್ಲೇಖಿಸಿವೆ.

ಹಮಾಸ್ ಹಾಗೂ ಇಸ್ರೇಲ್​ ನಡುವಿನ ಯುದ್ಧವು 2023ರ ಅಕ್ಟೋಬರ್ 3ರಿಂದಲೂ ನಡೆಯುತ್ತಿದೆ. ಹಮಾಸ್ 250 ನಾಗರಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿತ್ತು. 150 ಒತ್ತೆಯಾಳುಗಳು ಇನ್ನೂ ಅವರ ವಶದಲ್ಲಿದ್ದಾರೆ. ಇಸ್ರೇಲಿ ದಾಳಿಯಲ್ಲಿ ಇದುವರೆಗೆ 39ಕ್ಕೂ ಹೆಚ್ಚು ಪ್ಯಾಲೆಸ್ತೀನ್ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಹೇಳಿಕೊಂಡಿದೆ.

ಇಸ್ರೇಲ್‌-ಹಮಾಸ್‌ ನಡುವೆ ನಡೆದ ಭೀಕರ ದಾಳಿಯಲ್ಲಿ ಈವರೆಗೆ 40,000ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದಾರೆ. ಈ ಪೈಕಿ 39,145 ಮಂದಿ ಪ್ಯಾಲೆಸ್ತೀನಿಯರು ಹಾಗೂ 1,478 ಮಂದಿ ಇಸ್ರೇಲಿಯನ್ನರು ಪ್ರಾಣ ಕಳೆದುಕೊಂಡಿದ್ದಾರೆ. 108 ಪತ್ರಕರ್ತರು ತಮ್ಮ ಜೀವ ತೆತ್ತಿದ್ದಾರೆ ಎಂದು ಹೇಳಲಾಗಿದೆ.ದಾಳಿಯ ಕುರಿತು ತನಿಖೆ ನಡೆಸಲಾಗುತ್ತಿದ್ದು, ಫಲಿತಾಂಶವನ್ನು ನಂತರ ಪ್ರಕಟಿಸುವುದಾಗಿ ಹೇಳಿದೆ ಎಂದು ತಿಳಿದುಬಂದಿದೆ.

Share with Friends
author avatar
News Desk