BlogEntertainmentLatestTop Storiesಸ್ಯಾಂಡಲ್​ವುಡ್-Sandalwood

‘ಮಾರ್ಟಿನ್’ ಚಿತ್ರದಲ್ಲಿ ಬಾಲಿವುಡ್ ನಟ

ಎ.ಪಿ ಅರ್ಜುನ್ ನಿರ್ದೇಶನದ ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಚಿತ್ರದಲ್ಲಿ ಬಾಲಿವುಡ್ ನಟ ನಿಕಿತಿನ್ ಧೀರ್ ಕಾಣಿಸಿಕೊಳ್ಳಲಿದ್ದಾರಂತೆ. ನಿಕಿತಿನ್ ಧೀರ್ ‘ಮಾರ್ಟಿನ್’ ಸಿನಿಮಾದಲ್ಲಿ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದಾರೆ. ಆದರೆ ಅವರ ಪಾತ್ರದ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಹಿಂದಿ ‘ಮಹಾಭಾರತ’ದಲ್ಲಿ ಕರ್ಣನ ಪಾತ್ರಧಾರಿಯಾಗಿರುವ ಪಂಕಜ್ ಧೀರ್ ಅವರ ಪುತ್ರ ಈ ನಿಕಿತಿನ್. ಶಾರುಖ್‌ ಖಾನ್‌ ನಟನೆಯ ‌’ಚೆನ್ನೈ ಎಕ್ಸ್‌ಪ್ರೆಸ್’, ಸಲ್ಮಾನ್‌ ನಟನೆಯ ‘ದಬಾಂಗ್- 2’ ಸಿನಿಮಾ ಸೇರಿದಂತೆ ಹಲವು ತೆಲುಗು ಚಿತ್ರಗಳಲ್ಲಿ ನಿಕಿತಿನ್‌ ಧೀರ್ ನಟಿಸಿದ್ದಾರೆ.

ಈ ಸಿನಿಮಾದಲ್ಲಿ ಸ್ಟಾರ್‌ ಕಲಾವಿದರ ದಂಡೇ ಇದ್ದು ಇದೇ ಅಕ್ಟೋಬರ್ 11ಕ್ಕೆ ಬಹುಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.

Share with Friends
author avatar
News Desk