Crime NewsLatestTop Storiesರಾಷ್ಟ್ರೀಯ-National

ಪ್ರೀತಿಗೆ ವಿರೋಧಿಸಿದ ಪೊಷಕರು – ಹೆತ್ತರವನ್ನ, ಸಹೋದರನನ್ನು ಬರ್ಬರವಾಗಿ ಕೊಂದ 15 ರ ಬಾಲಕ

ವಾರಣಾಸಿ: ಪ್ರೀತಿಸುತ್ತಿದ್ದ ಹುಡಗಿಯ ಜೊತೆ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ತಂದೆ-ತಾಯಿ ಹಾಗೂ ಸಹೋದರನನ್ನು ಬರ್ಬರವಾಗಿ ಕೊಂದಿರುವುದಾಗಿ ಒಪ್ಪಿಕೊಂಡ 15 ವರ್ಷದ ಬಾಲಕನನ್ನು ಗಾಜಿಪುರ ಪೊಲೀಸರು ಮಂಗಳವಾರ ಮಧ್ಯರಾತ್ರಿ ಘಾಜಿಪುರ ಜಿಲ್ಲೆಯ ನಂದಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಕುಸುಮ್ಹಿಕಲಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಬಾಲಾಪರಾಧಿಯನ್ನು ಬಂಧಿಸಲಾಗಿದ್ದು, ಆತನ ತಂದೆ ಮುನ್ಷಿ ಬಿಂದ್ (45), ತಾಯಿ ದೇವಂತಿ ಬಿಂದ್(40) ಮತ್ತು ಸಹೋದರನ ಕತ್ತು ಸೀಳಲು ಬಳಸಿದ್ದ ಹರಿತವಾದ ಆಯುಧವನ್ನು ವಶಪಡಿಸಿಕೊಂಡಿರುವುದಾಗಿ ಎಂದು ಗಾಜಿಪುರ ಎಸ್ಪಿ ಓಂವಿರ್ ಸಿಂಗ್ ಮಂಗಳವಾರ ತಿಳಿಸಿದ್ದಾರೆ.ಇದನ್ನೂ ಓದಿ: ಹೊಟ್ಟೆ ಕಿಚ್ಚಿನಿಂದ ಇಲ್ಲಸಲ್ಲದ ಆರೋಪ: ಸಿದ್ದರಾಮಯ್ಯ

https://youtu.be/vfdhjcm8fjs?si=vuMGGo-naYKFnt8m

ಹಲವು ದಿನಗಳ ಹಿಂದೆ ಮೂವರನ್ನು ಕೊಲ್ಲಲು ನಿರ್ಧರಿಸಿದ್ದೆ, ಆದರೆ ಸಾಧ್ಯವಾಗಲಿಲ್ಲಎಂದು ಬಾಲಕ ಪೊಲೀಸರಿಗೆ ತಿಳಿಸಿದ್ದಾನೆ. ಭಾನುವಾರ ರಾತ್ರಿ, ಕುಟುಂಬದ ಸದಸ್ಯರೆಲ್ಲರೂ ಮಲಗಿದ್ದಾಗ ಮದ್ಯ ಸೇವಿಸಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಬಂದ ಬಾಲಕ ತಂದೆ, ತಾಯಿ ಹಾಗೂ ಸಹೋದರನ ಕತ್ತು ಸೀಳಿದ್ದಾನೆ.

https://youtu.be/O4L6RQjcl_M?si=od95i7TuT2HkvYck

ಅಪರಾಧ ಮಾಡಿದ ನಂತರ, ಮನೆಯಿಂದ ಸ್ವಲ್ಪ ದೂರದಲ್ಲಿರುವ ಹೊಲದಲ್ಲಿ ಚಾಕುವನ್ನು ಬಚ್ಚಿಟ್ಟು ಹತ್ತಿರದ ಆರ್ಕೆಸ್ಟ್ರಾ ಪ್ರದರ್ಶನವನ್ನು ನೋಡಲು ಹೋಗಿದ್ದಾನೆ. ಬಳಿಕ ಬೆಳಗಿನ ಜಾವ 1.45 ರ ಸುಮಾರಿಗೆ ಮನೆಗೆ ಹಿಂದಿರುಗಿದ ಬಾಲಕ ಮನೆಯವರನ್ನು ಯಾರೋ ಕೊಂದು ಹೋಗಿರುವುದಾಗಿ ಗ್ರಾಮಸ್ಥರಿಗೆ ಕರೆ ಮಾಡಿ ತಿಳಿಸಿದ್ದಾನೆ.

https://youtu.be/xm7YtFFj8GE?si=jXJJPY9Y4x_04-R0

ಬಳಿಕ ಪೊಲೀಸ್​​ ವಿಚಾರಣೆ ವೇಳೆ ಬಾಲಕ ತನ್ನ ತಪ್ಪನ್ನು ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಸೇನೆ ಮೇಲೆ ದಾಳಿ – ಬೆದರಿಸಿ ಅಡುಗೆ ಮಾಡುವಂತೆ ಗ್ರಾಮಸ್ಥರಿಗೆ ಒತ್ತಾಯಿಸಿದ್ದ ಉಗ್ರರು

Share with Friends
author avatar
News Desk