Latestಬೆಂಗಳೂರು-Bengaluruರಾಜ್ಯ-Karnataka

ವಿರಾಟ್ ಕೊಹ್ಲಿ ಮಾಲೀಕತ್ವದ ಪಬ್ ವಿರುದ್ಧ ಎಫ್‌ಐಆರ್

ಬೆಂಗಳೂರು: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ (Virat Kohli) ಮಾಲೀಕತ್ವದ ಪಬ್‌ವೊಂದರ (Pub) ಮೇಲೆ ಎಫ್‌ಐಆರ್ (FIR) ದಾಖಲಾಗಿದೆ.

ಅವಧಿಗೂ ಮೀರಿ ಪಬ್ ತೆರೆದಿದ್ದಕ್ಕೆ ಕಸ್ತೂರಬಾ ರಸ್ತೆಯಲ್ಲಿರುವ ಒನ್ 8 ಕಮ್ಯೂನ್ (ONE 8 COMMUNE) ಪಬ್ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಈ ಪಬ್, ಟಾನಿಕ್ ಬಿಲ್ಡಿಂಗ್‌ನ ಕೊನೆಯ ಮಹಡಿಯಲ್ಲಿದ್ದು, ವಿರಾಟ್‌ ಕೊಹ್ಲಿ ಇದರ ಮಾಲೀಕರಾಗಿದ್ದಾರೆ.

ಜುಲೈ 6 ರಂದು ರಾತ್ರಿ 1:20 ರ ವರೆಗೆ ಪಬ್ ತೆರೆದಿತ್ತು. ರಾತ್ರಿ ಗಸ್ತಿನಲ್ಲಿದ್ದ ಸಿಬ್ಬಂದಿಗೆ ಪಬ್ ಓಪನ್ ಇರುವುದಾಗಿ ಮಾಹಿತಿ ಇತ್ತು. ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಅವಧಿ ಮುಗಿದಿದ್ದರೂ ಗ್ರಾಹಕರು ಇದ್ದರು. ಹೀಗಾಗಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ: ಹಾತ್ರಾಸ್ ಕಾಲ್ತುಳಿತ ಪ್ರಕರಣ: ಎಸ್‌ಡಿಎಂ, ತಹಸೀಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳ ಅಮಾನತು

https://youtu.be/Z9guiREBeLU?si=uYZP0rMuNCSg98bZ

ಉಪ ಪೊಲೀಸ್ ಆಯುಕ್ತ (ಕೇಂದ್ರ) ಶೇಖರ್ ಹೆಚ್.ತೆಕ್ಕಣ್ಣನವರ್ ಮಾತನಾಡಿ, ನಾವು ಕಳೆದ ರಾತ್ರಿ 1:30 ರವರೆಗೆ ತೆರೆದಿರುವಂತೆ ಸುಮಾರು 3-4 ಪಬ್‌ಗಳನ್ನು ಕಾಯ್ದಿರಿಸಿದ್ದೇವೆ. ಜೋರಾಗಿ ಸಂಗೀತವನ್ನು ನುಡಿಸಲಾಗುತ್ತಿದೆ ಎಂಬ ದೂರುಗಳನ್ನು ನಾವು ಸ್ವೀಕರಿಸಿದ್ದೇವೆ. ಪಬ್‌ಗಳು ಮಧ್ಯರಾತ್ರಿ 1 ಗಂಟೆಯವರೆಗೆ ಮಾತ್ರ ತೆರೆದಿರಲು ಅನುಮತಿಸಲಾಗಿದೆ. ಈ ಅವಧಿ ಮೀರಿ ತೆರೆಯುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಹತ್ರಾಸ್‌ ಕಾಲ್ತುಳಿತ ಪ್ರಕರಣ: ವರದಿ ಸಲ್ಲಿಸಿದ ಎಸ್‌ಐಟಿ

Share with Friends
author avatar
News Desk