LatestTop Storiesಕೃಷಿ-Agricultureಮಂಡ್ಯ-Mandyaರಾಜ್ಯ-Karnataka

KRS ಡ್ಯಾಂನಿಂದ ನಾಲೆಗಳಿಗೆ ನೀರು ಬಿಡುಗಡೆ ಮುಂದೂಡಿಕೆ

– ಆಧುನೀಕರಣ ಕಾಮಗಾರಿಯಿಂದಾಗಿ ವಿಳಂಬ

ಮಂಡ್ಯ: ನಾಲಾ ಆಧುನೀಕರಣ ಕಾಮಗಾರಿಯಿಂದಾಗಿ ಕೆಆರ್‌ಎಸ್‌ (KRS Dam) ಜಲಾಶಯದಿಂದ ನಾಲೆಗಳಿಗೆ ನೀರು ಬಿಡುಗಡೆಯನ್ನು ಮುಂದೂಡಲಾಗಿದೆ.

ಬುಧವಾರದಿಂದ (ಜು.10) ನಾಲೆಗೆ ನೀರು ಹರಿಸುವ ಸಾಧ್ಯತೆ ಇದೆ. ನಿನ್ನೆ ಸಂಜೆಯಿಂದಲೇ ನೀರು ಬಿಡುಗಡೆ ಮಾಡವುದಾಗಿ ಜಿಲ್ಲಾಡಳಿತ ತಿಳಿಸಿತ್ತು. ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಸಭೆ ನಡೆಸಿ ನೀರು ಬಿಡುಗಡೆಗೆ ತೀರ್ಮಾನಿಸಲಾಗಿತ್ತು.

https://youtu.be/3EjLAOOE9Ss?si=7VigJDFpcF1CWXxJ

ಜು.8ರಿಂದ 15 ದಿನ ನೀರು ಬಿಡುಗಡೆ ಮಾಡುವುದಾಗಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದರು. ಆದರೆ ವಿಶ್ವೇಶ್ವರಯ್ಯ ನಾಲೆ ಆಧುನೀಕರಣ ಕಾಮಗಾರಿಗೆಯಿಂದ ನೀರು ಬಿಡುಗಡೆ ತಡವಾಗಿದೆ. ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ನಾಲೆಯಲ್ಲೇ ಯಂತ್ರೋಪಕರಣಗಳು ಇವೆ. ನಾಲೆಯಿಂದ ಯಂತ್ರೋಪಕರಣ ತೆರವುಗೊಳಿಸಿ ನೀರು ಬಿಡುಗಡೆ ಮಾಡುವ ಸಾಧ್ಯತೆ ಇದೆ.

https://youtu.be/Z9guiREBeLU?si=GxxJTrDkEuzpYWG8

ಇಂದಿನ ಕೆಆರ್‌ಎಸ್ ನೀರಿನ ಮಟ್ಟ
* ಗರಿಷ್ಠ ಮಟ್ಟ – 124.80 ಅಡಿ.
* ಇಂದಿನ ಮಟ್ಟ – 103.40 ಅಡಿ.
* ಗರಿಷ್ಠ ಸಾಂದ್ರತೆ – 49.452 ಟಿಎಂಸಿ
* ಇಂದಿನ ಸಾಂದ್ರತೆ – 25.594 ಟಿಎಂಸಿ
* ಒಳ ಹರಿವು – 6,600 ಕ್ಯೂಸೆಕ್
* ಹೊರ ಹರಿವು – 575 ಕ್ಯೂಸೆಕ್

Share with Friends
author avatar
News Desk