Crime NewsLatestವಿದೇಶ-International

15 ದಿನಗಳ ಮಗಳನೇ ಜೀವಂತ ಸಮಾಧಿ ಮಾಡಿದ ತಂದೆ!

ಇಸ್ಲಾಮಾಬಾದ್:‌ 15 ದಿನಗಳ ಹೆಣ್ಣು ಮಗುವನ್ನೇ ಹೆತ್ತ ತಂದೆಯೇ ಜೀವಂತ ಸಮಾಧಿ ಮಾಡಿರುವ ಹೇಯ ಘಟನೆಯೊಂದು ಪಾಕಿಸ್ತಾನದ (Pakistan) ಸಿಂಧ್ ಪ್ರಾಂತ್ಯದಲ್ಲಿ ಬೆಳಕಿಗೆ ಬಂದಿದೆ.

ಆರ್ಥಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಮಗಳನ್ನು ಈ ರೀತಿ ಮಾಡಿರುವುದಾಗಿ ತಯ್ಯಬ್‌ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ. ನವಜಾತ ಮಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿರುವ ಆತ, ನವಜಾತ ಶಿಶುವನ್ನು ಹೂಳುವ ಮುನ್ನ ಗೋಣಿಚೀಲದಲ್ಲಿ ತುಂಬಿದ್ದಾಗಿ ತಯ್ಯಬ್ ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಕುಡಿಯೋಕೆ ನೀರು ಕೊಡ್ತಿಲ್ಲ.. ವಿಷನಾದ್ರೂ ಕೊಡಿ ಎಂದು ಆಕ್ರೋಶ

https://youtu.be/8mAWA5pF-os?si=7q5uDh3AyBrdNA8y

ಪ್ರಕರಣ ಸಂಬಂಧ ಆರೋಪಿ ತಂದೆ ತಯ್ಯಬ್ ನನ್ನು ಬಂಧಿಸಲಾಗಿದೆ. ವಿಚಾರಣೆಯ ವೇಳೇ ಈತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಹಳೆ ವೈಷಮ್ಯಕ್ಕೆ ಗ್ರಾಮ ಪಂಚಾಯತಿ ಸದಸ್ಯನ ಕೊಲೆ

https://youtu.be/-vvze5itFjY?si=ycQ9LSvCCABxnQzE

ತಯ್ಯಬ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನ್ಯಾಯಾಲಯದ ಸೂಚನೆಯಂತೆ ಸಮಾಧಿಯಿಂದ ಬಾಲಕಿಯ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಹೃದಯಾಘಾತದಿಂದ ವಿರಕ್ತ ಮಠದ ಶ್ರೀಗಳು ಸಾವು

Share with Friends
author avatar
News Desk