Latestಕ್ರೀಡೆ-Sports

ತವರಿಗೆ ಬಂದಿಳಿದ ವಿಶ್ವ ಚಾಂಪಿಯನ್ಸ್‌ – ಮೋದಿ ನಿವಾಸದಲ್ಲಿ ಸನ್ಮಾನ

ನವದೆಹಲಿ: ಟಿ20 ವಿಶ್ವಕಪ್‌ ಕ್ರಿಕೆಟ್‌ (T20 World Cup) ಚಾಂಪಿಯನ್‌ ಟೀಂ ಇಂಡಿಯಾ (Team India) ಇಂದು ಬೆಳಗ್ಗೆ ತಾಯ್ನಾಡಿಗೆ ಆಗಮಿಸಿದೆ.

ವೆಸ್ಟ್‌ಇಂಡೀಸ್‌ನ ಬಾರ್ಬಡೋಸ್‌ನಿಂದ ಹೊರಟಿದ್ದ ವಿಶೇಷ ವಿಮಾನ ದೆಹಲಿಯಲ್ಲಿರುವ (Delhi) ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಆಗಿದೆ.

ಜೂ. 1ರಂದು ಬಾರ್ಬಡೋಸ್‌ಗೆ ಭೀಕರ ಬೆರಿಲ್ ಚಂಡಮಾರುತ ಅಪ್ಪಳಿಸಿದ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಭಾರತಕ್ಕೆ ಬರಲು ಆಗಿರಲಿಲ್ಲ. ಈಗ ವಿಶೇಷ​ ವಿಮಾನದ ಮೂಲಕ T20 ವಿಶ್ವಕಪ್​ ಟ್ರೋಫಿಯೊಂದಿಗೆ ಆಟಗಾರರೆಲ್ಲ ಆಗಮಿಸಿದರು.

https://youtu.be/MJjBy8hFq3c?si=93ChlwpdV9lnRAJ0

ಪದಕ ಧರಿಸಿ ಇಳಿದ ಆಟಗಾರರಿಗೆ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಸದ್ಯ ಆಟಗಾರರು ದೆಹಲಿಯಲ್ಲಿರುವ ಐಟಿಸಿ ಮೌರ್ಯ ಹೋಟೆಲಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಪ್ರಧಾನಿ ಮೋದಿ (PM Narendra Modi) ಅವರನ್ನು ಭೇಡಿ ಮಾಡಲು ಅವರ ನಿವಾಸಕ್ಕೆ ತೆರಳಿದ್ದಾರೆ.

ಮೋದಿ ಅವರನ್ನು ಭೇಟಿ ಮಾಡಿದ ಬಳಿಕ ಮುಂಬೈಗೆ ವಿಶೇಷ ವಿಮಾನದ ಮೂಲಕ ಆಗಮಿಸಲಿದ್ದು, ಒಂದು ಸಂಜೆ ಮುಂಬೈ ಮರೀನ್‌ ಡ್ರೈವ್‌ನಿಂದ ತೆರೆದ ವಾಹನದಲ್ಲಿ ವಾಂಖೆಡೆ ಸ್ಟೇಡಿಯಂವರೆಗೆ 2 ಕಿ.ಮೀ ರೋಡ್‌ ಶೋ (Road Show) ನಡೆಯಲಿದೆ.

https://youtu.be/5dt9QT5cK_o?si=n-7j9rJLMhftT-74

ಇಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಾಯಕ ರೋಹಿತ್‌ ಶರ್ಮಾ (Rohit Sharma) ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (Jay Shah) ಅವರಿಗೆ ಟಿ 20 ವಿಶ್ವಕಪ್ ಟ್ರೋಫಿಯನ್ನು ಹಸ್ತಾಂತರಿಸಲಿದ್ದಾರೆ.

Share with Friends
author avatar
News Desk