Latestರಾಷ್ಟ್ರೀಯ-National

ನಾಲ್ಕು ದಿನಗಳಿಂದ ಉಪವಾಸ ಸತ್ಯಾಗ್ರಹ, ಹದಗೆಟ್ಟ ಆರೋಗ್ಯ – ದೆಹಲಿ ಸಚಿವೆ ಅತಿಶಿ ಆಸ್ಪತ್ರೆಗೆ ದಾಖಲು

ನವದೆಹಲಿ: ದೆಹಲಿಗೆ (Delhi) ಸಮರ್ಪಕ ನೀರು ಒದಗಿಸುವಂತೆ ಒತ್ತಾಯಿಸಿ ಭೋಗಲ್​ನಲ್ಲಿ ಕಳೆದ ನಾಲ್ಕು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ದೆಹಲಿ ಸಚಿವೆ ಅತಿಶಿ (Atishi) ಆರೋಗ್ಯ ಹೆದಗೆಟ್ಟ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸದ್ಯ ಅತಿಶಿ ಅವರನ್ನು ಎಲ್​ಎನ್​ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೋಂವಾರದಂದು ವೈದ್ಯರು ಆರೋಗ್ಯ ತಪಾಸಣೆ ನಡೆಸಿದ್ದಾರೆ, ಆರೋಗ್ಯ ಕ್ಷೀಣಿಸುತ್ತಿರುವುದನ್ನು ಕಂಡ ವೈದ್ಯರು ಆಸ್ಪತ್ರೆಗೆ ದಾಖಲಾಗುವಂತೆ ಸಲಹೆ ನೀಡಿದ್ದಾರೆ, ಆದರೂ ಅವರು ನಿರಾಕರಿಸಿದ್ದರು. ಇದನ್ನೂ ಓದಿ: ಮಂಡ್ಯದಲ್ಲಿ ಜೆಡಿಎಸ್ ಫ್ಲೆಕ್ಸ್‌ಗಳಲ್ಲಿ ರೇವಣ್ಣ ಔಟ್

ಸೋಮವಾರ ರಾತ್ರಿ ಅವರ ರಕ್ತದಲ್ಲಿರುವ ಸಕ್ಕರೆ ಪ್ರಮಾಣ 43ಕ್ಕೆ ಕುಸಿದಿತ್ತು, ಮಂಗಳವಾರ ಬೆಳಗಿನ ಜಾವ 36ಕ್ಕೆ ಕುಸಿದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಐದು ದಿನಗಳಿಂದ ಅವರು ಏನನ್ನೂ ತಿಂದಿಲ್ಲ, ಹರ್ಯಾಣದಿಂದ ದೆಹಲಿಯ ಪಾಲಿನ ನೀರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಜೂನ್ 21ರಿಂದ ಅತಿಶಿ ತೂಕ ಇಳಿಕೆಯಾಗುತ್ತಿದ್ದು, ನಾಲ್ಕು ದಿನಗಳಲ್ಲಿ 2.2 ಕೆಜಿ ತೂಕ ಇಳಿಕೆಯಾಗಿದೆ.

https://youtu.be/97Xqp_kxIBQ?si=2306xuKYD2l06lfM

ನನ್ನ ರಕ್ತದೊತ್ತಡ ಮತ್ತು ಸಕ್ಕರೆ ಮಟ್ಟವು ಕುಸಿಯುತ್ತಿದೆ ಮತ್ತು ನನ್ನ ತೂಕವು ಕಡಿಮೆಯಾಗಿದೆ. ಕೀಟೋನ್ ಮಟ್ಟವು ತುಂಬಾ ಹೆಚ್ಚಾಗಿದೆ, ಇದು ದೀರ್ಘಾವಧಿಯಲ್ಲಿ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ಅತಿಶಿ ಹೇಳಿದರು. ಇದನ್ನೂ ಓದಿ: ಹೇಮಾವತಿ’ ನೀರಿಗಾಗಿ ತೂಮಕೂರಿನಲ್ಲಿ ಹೋರಾಟ – ಇಂದು ಕಲ್ಪತರು ನಾಡು ಬಂದ್‌

ನನ್ನ ದೇಹವು ಎಷ್ಟೇ ನರಳಿದರೂ ಹರಿಯಾಣ ನೀರು ಬಿಡುವವರೆಗೆ ನಾನು ಉಪವಾಸವನ್ನು ಮುಂದುವರಿಸುತ್ತೇನೆ ಎಂದು ಹೇಳಿದರು. ದೆಹಲಿಯು ನೀರಿನ ಕೊರತೆಯನ್ನು ಎದುರಿಸುತ್ತಿರುವಾಗ, ಬಿಜೆಪಿ ನೇತೃತ್ವದ ಹರಿಯಾಣ ಸರ್ಕಾರವು ದಿನಕ್ಕೆ 100 ಮಿಲಿಯನ್ ಗ್ಯಾಲನ್ (ಎಂಜಿಡಿ) ನೀರನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ಅತಿಶಿ ಆರೋಪಿಸಿದ್ದಾರೆ.

https://youtu.be/OvXrOZlPR8I?si=5dYMf8ONfaqCJRvH

ಇದು ರಾಷ್ಟ್ರ ರಾಜಧಾನಿಯಲ್ಲಿ 28 ಲಕ್ಷಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿದೆ. ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚಿನ ತಾಪಮಾನ ಮತ್ತು ಶಾಖದ ಅಲೆಗಳೊಂದಿಗೆ ನೀರಿನ ಕೊರತೆಯ ಸಮಸ್ಯೆ ಉದ್ಭವಿಸಿದೆ. ಸದ್ಯ ದೆಹಲಿ ಜನರು ತಮ್ಮ ದೈನಂದಿನ ನೀರಿನ ಅವಶ್ಯಕತೆಗಳನ್ನು ಪಡೆಯಲು ನೀರಿನ ಟ್ಯಾಂಕರ್‌ಗಳ ಮೊರೆ ಹೋಗಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ಎಸ್‌ಐಟಿಯಿಂದ ಮತ್ತೋರ್ವ ಆರೋಪಿಯ ಬಂಧನ

Share with Friends
author avatar
News Desk