Crime NewsLatestಕಲಬುರಗಿ-Kalaburagiರಾಜ್ಯ-Karnataka

ಕಂದಾಯ ಸಚಿವ ಇದ್ದಾಗಲೇ  ಕಲಬುರುಗಿ ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ

ಕಲಬುರಗಿ: ಇಲ್ಲಿನ ಏರ್‌ಪೋರ್ಟ್ ಗೆ ಬಾಂಬ್ ಬೆದರಿಕೆ (Bomb Threat) ಇಮೇಲ್‌ ಮೂಲಕ ಬಂದಿದೆ.

ಏರ್‌ಪೋರ್ಟ್ ಮೇಲ್ ಐಡಿಗೆ ಅನಾಮಧೇಯ ವ್ಯಕ್ತಿಯಿಂದ ಮೇಲ್ ಬಂದಿದ್ದು, ಏರ್‌ಪೋರ್ಟ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ. ವಿಷಯ ಬಯಲಾಗುತ್ತಿದ್ದಂತೆಯೇ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ, ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ 17ರ ಯುವಕನ ಬರ್ಬರ ಹತ್ಯೆ!

https://youtu.be/mluduqVISA0?si=c-i5Tf57MImZZKUR

ಇಮೇಲ್‌ನಿಂದ ಬಂದ ಬಾಂಬ್‌ ಬೆದರಿಕೆಯಿಂದ ಜನರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಪ್ರಯಾಣಿಕರ ಬ್ಯಾಗ್‍ಗಳ ತಪಾಸಣೆ ನಡೆಸಲಾಗುತ್ತಿದೆ. ಅಲ್ಲದೇ ಏರ್‌ಪೋರ್ಟ್ ನ ಇಂಚಿಂಚು ಸ್ಥಳ ಪರಿಶೀಲನೆ ಪೊಲೀಸರು ನಡೆಸುತ್ತಿದ್ದಾರೆ.ಇದನ್ನೂ ಓದಿ: ಜೈಲಿನ ಸೆಕ್ಯುರಿಟಿ ಸೆಲ್‍ನಲ್ಲಿ ದರ್ಶನ್ – ಇಂದು ಕೋರ್ಟ್‍ನಲ್ಲಿ ಅರ್ಜಿ ವಿಚಾರಣೆ

https://youtu.be/OvXrOZlPR8I?si=l88I3Hy6KvmhTHMt

ಕಂದಾಯ ಸಚಿವ ಕೃಷ್ಣೆಬೈರೇಗೌಡ (Krishna Byregowda) ಸೇರಿ ಹಲವು ಪ್ರಯಾಣಿಕರಿದ್ದ ವಿಮಾನವು ಇಂದು ಬೆಳಗ್ಗೆ 9:20ಕ್ಕೆ ಬೆಂಗಳೂರಿನಿಂದ ಕಲಬುರಗಿ ಏರ್‌ಪೋರ್ಟ್ ಗೆ ಆಗಮಿಸಿದೆ. ಇತ್ತ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಏರ್‌ಪೋರ್ಟ್ ಸಿಬ್ಬಂದಿ 20 ನಿಮಿಷ ಪ್ಯಾಸೆಂಜರ್ ಗಳನ್ನ ಇಳಿಸಲಿಲ್ಲ. ಏರ್‌ಪೋರ್ಟ್ ತಪಾಸಣೆ ಬಳಿಕವೇ ಅಧಿಕಾರಿಗಳು ಪ್ರಯಾಣಿಕರನ್ನು ಕೆಳಗಿಳಿಸಿದರು. ಇದನ್ನೂ ಓದಿ: 18ನೇ ಲೋಕಸಭೆಯ ಮೊದಲ ಅಧಿವೇಶನ ಇಂದಿನಿಂದ ಶುರು

Share with Friends
author avatar
News Desk