Crime NewsLatestಬೆಂಗಳೂರು-Bengaluruರಾಜ್ಯ-Karnataka

ಡಿ ಗ್ಯಾಂಗ್‌ ಕೊಲೆ ಪ್ರಕರಣ- 2 ಹಲ್ಲೆ ವೀಡಿಯೋ ಸಂಗ್ರಹಿಸಿದ ಪೊಲೀಸರು

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renukaswamy Case) ಬಂಧನಕ್ಕೆ ಒಳಗಾಗಿರುವ ನಟ ದರ್ಶನ್‌ಗೆ ಕಾನೂನಿನ ಕುಣಿಗೆ ಮತ್ತಷ್ಟು ಬಿಗಿಯಾದಂತೆ ಕಾಣುತ್ತಿದೆ. ಕೊಲೆ ಪ್ರಕರಣದಲ್ಲಿ ಬಿಗಿಯಾಗಿಯೇ ಲಾಕ್ ಮಾಡಿರುವ ಪೊಲೀಸರು (Bengaluru Police) ಎರಡು ಹಲ್ಲೆ ವೀಡಿಯೋಗಳನ್ನ ಸಂಗ್ರಹ ಮಾಡಿದ್ದಾರೆ.

ಪೊಲೀಸರು ಹೇಳುವಂತೆ ಸಂಗ್ರಹಿಸಲಾದ ಎರಡು ವೀಡಿಯೋಗಳಲ್ಲಿ, `ಡಿ’ಗ್ಯಾಂಗ್ ಮಾರಣಾಂತಿಕ ಹಲ್ಲೆ ನಡೆಸಿರುವುದು ಕಂಡುಬಂದಿದೆ ಎನ್ನಲಾಗಿದೆ. ಇದನ್ನೂ ಓದಿ: ಆಂಧ್ರಪ್ರದೇಶದ ಪೊದೆಯೊಂದರಲ್ಲಿ ಬೆತ್ತಲೆ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ – ಬೆಚ್ಚಿಬಿದ್ದ ಜನ

ರೇಣುಕಾಸ್ವಾಮಿಯನ್ನ ಅಪಹರಣದ ಬಳಿಕ ಶೆಡ್‌ಗೆ ಕರೆದೊಯ್ಯಲಾಗಿದೆ. ಈ ವೇಳೆ `ಡಿ’ಗ್ಯಾಂಗ್ (D Gang) ಮನಸೋ ಇಚ್ಚೆ ಹಲ್ಲೆ ನಡೆಸಿದೆ. ಕಬ್ಬಿಣದ ರಾಡ್, ಲಾಠಿ ಹಾಗೂ ಬೆಲ್ಟ್‌ನಿಂದ ಹಲ್ಲೆ ನಡೆಸಿದೆ ಗ್ಯಾಂಗ್. ಹಲ್ಲೆ ನಡೆಸುವಾಗ ಆರೋಪಿಯೊಬ್ಬ ಮೊಬೈಲ್‌ನಲ್ಲಿ ವೀಡಿಯೋ ಚಿತ್ರೀಕರಣ ಮಾಡಿದ್ದಾನೆ. ಈ ವಿಡಿಯೋ ಸಹ ಪೊಲೀಸರಿಗೆ ಲಭ್ಯವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

https://youtu.be/TUHqDSEB3jo?si=EMC0RDbEOMSmgJEZ

ರೇಣುಕಾಸ್ವಾಮಿಯ ಮೇಲೆ ಹಲ್ಲೆ ನಡೆಸುವ ಮೊಬೈಲ್ ವೀಡಿಯೊ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಈ ಬೆನ್ನಲ್ಲೇ ಸಿಸಿಟಿವಿ ಡಿವಿಆರ್ (CCTV DVR) ಸೀಜ್ ಮಾಡಿದ್ದು, ಚಿತ್ರೀಕರಣ ಮಾಡಿದ್ದ ಮೊಬೈಲ್‌ಗಳನ್ನೂ ಸಹ ಪೊಲೀಸರು ಜಪ್ತಿ ಮಾಡಿದ್ದಾರೆ ಎಂದು ಅಧಿಕಾರಿಗಳು ಮೂಲಗಳು ತಿಳಿಸಿವೆ.

https://youtu.be/RzHzla6ddIk?si=ogjahEaDhgXZ2Wf0
Share with Friends
author avatar
News Desk