LatestWeatherಬೆಂಗಳೂರು-Bengaluruರಾಜ್ಯ-Karnataka

ಬೆಂಗಳೂರು ಸೇರಿ ರಾಜ್ಯದಲ್ಲಿ ಮುಂದುವರಿದ ಮುಂಗಾರು

ಬೆಂಗಳೂರು: ಮಟ ಮಟ ಮಧ್ಯಾಹ್ನವೇ ಸಿಲಿಕಾನ್​ ಸಿಟಿ ಬೆಂಗಳೂರಿನ ಹಲವೆಡೆ ವರುಣನ(Bengaluru Rain) ಆಗಮನವಾಗಿದೆ. ಬೆಂಗಳೂರು ಸೇರಿ ರಾಜ್ಯದಲ್ಲಿ ಮಳೆ ಮುಂದುವರೆಯಲ್ಲಿದೆ ಎಂದು ಹವಾಮಾನ (IMD) ಇಲಾಖೆ ಮೂನ್ಸೂಚನೆ ನೀಡಿದೆ.

ಶಾಂತಿನಗರ, ಇನ್ ಪೆಂಟ್ರಿ ರಸ್ತೆ, ಮಲ್ಲೇಶ್ವರಂ, ಯಶವಂತಪುರ, ಜಾಲಹಳ್ಳಿ, ರಾಜಾಜಿನಗರ, ಸುಂಕದಕಟ್ಟೆ ತಾವರೆಕೆರೆ ಕೊಟ್ಟಿಗೆ ಪಾಳ್ಯ ಕಾಮಾಕ್ಷಿ ಪಾಳ್ಯ, ವಿಲ್ಸನ್ ಗಾರ್ಡ್‌ನ್ , ಬಸವನಗುಡಿ, ಲಾಲ್ ಬಾಗ್, ವಿಜಯನಗರ ಸೇರಿದಂತೆ ತುಂತುರು ಮಳೆ ಶುರುವಾಗಿದೆ. ಇಷ್ಟು ದಿನ ಸಂಜೆಯಾಗುತ್ತಿದ್ದಂತೆ ಶುರುವಾಗುತ್ತಿದ್ದ ಮಳೆ, ಇಂದು ಬೇಗನೇ ಆರಂಭವಾಗಿದ್ದು, ದಿಢೀರ್ ಮಳೆಯಿಂದ ವಾಹನ ಸವಾರರು ಪರದಾಡುವಂತಾಗಿದೆ. ಇದನ್ನೂ ಓದಿ: ಮೋದಿ 3.0 ಸರ್ಕಾರದ ಚೊಚ್ಚಲ ಬಜೆಟ್ ಯಾವಾಗ? ಇಲ್ಲಿದೆ ಡೀಟೇಲ್ಸ್

https://youtu.be/v6aAFtRnGHY?si=XarzPm8Vrcmyn6dI

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಬೆಳಗಾವಿ, ಧಾರವಾಡ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ ಹಿನ್ನಲೆ ಇವತ್ತು ಯಲ್ಲೋ ಅಲರ್ಟ್ ನೀಡಲಾಗಿದೆ. ಇವತ್ತಿನಿಂದ ರಾಜ್ಯದಲ್ಲಿ ಮಳೆ ವಿಂಗಡಣೆಯಾಗಲಿದ್ದು, ಮಳೆ ವ್ಯಾಪಕತೆ ಕಡಿಮೆಯಾಗಲಿದೆ. ಬೆಂಗಳೂರಿನಲ್ಲಿ ಇವತ್ತಿನಿಂದ 17ರ ವರೆಗೆ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಜ್ಞ ಸಿ.ಎಸ್.ಪಾಟೀಲ್ ಹೇಳಿದರು. ಇದನ್ನೂ ಓದಿ: ದುನಿಯಾ ವಿಜಯ ಡಿವೊರ್ಸ್‌: ವಿಚ್ಛೇದನಾ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

Share with Friends
author avatar
News Desk