Crime NewsLatestಬೆಂಗಳೂರು-Bengaluruರಾಜ್ಯ-Karnataka

ರೇಣುಕಾ ಸ್ವಾಮಿ ಕೊಲೆ ಪ್ರಕರಣ: ಪರಮೇಶ್ವರ್ ನಿವಾಸದ ಬಳಿ ಸಾರಾ ಗೋವಿಂದ್ ಹೇಳಿಕೆ

ಬೆಂಗಳೂರು: ರೇಣುಕಾ ಸ್ವಾಮಿ (Renuka Swami) ಕೊಲೆ ಪ್ರಕರಣ ಕುರಿತು ಗೃಹ ಸಚಿವ ಪರಮೇಶ್ವರ್‌ (Parameshwar) ಮನೆ ಮುಂದೆ ಸಾರಾ ಗೋವಿಂದ್‌ (Sara Govind) ಮಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನಂತೂ ಈ ಘಟನೆಯನ್ನು ಖಂಡಿಸುತ್ತೇನೆ. ಆ ತಂದೆ ತಾಯಿಗೆ ನಾವು ಧೈರ್ಯ ಹೇಳಬೇಕು ಎಂದಿದ್ದಾರೆ. ಇದನ್ನೂ ಓದಿ: ಚಿತ್ರರಂಗದಿಂದ ಬ್ಯಾನ್ ಆಗ್ತಾರಾ ನಟ ದರ್ಶನ್

ತಪ್ಪು, ಸರಿ ಅನ್ನೋದನ್ನ ಪೊಲೀಸ್ ನೋಡ್ಬೇಕು. ಸಮಾಜದಲ್ಲಿ ನಾವು ಒಳ್ಳೆಯ ರೀತಿಯಲ್ಲಿ ನಡೆಯಬೇಕು. ಅಂಬರೀಶ್, ರಾಜ್ ಕುಮಾರ್, ವಿಷ್ಣುವರ್ಧನ್ ಅವರನ್ನ ನೋಡಿ ಈಗಿನ ಕಾಲದ ನಟರು ಕಲಿಯಬೇಕು. ಈ ಘಟನೆ ಚಿತ್ರರಂಗಕ್ಕೆ ಶೋಭೆ ತರುವಂತದ್ದಲ್ಲ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮರ್ಮಾಂಗಕ್ಕೆ ಹೊಡೆದು, ಚಿತ್ರಹಿಂಸೆ ನೀಡಿ ಕೊಲೆಗೈದ “ಡಿ ಬಾಸ್‌ ಗ್ಯಾಂಗ್‌”

https://youtu.be/FrrnBHNMxDs?si=LrabrB4Y3kNDVBQ4

ಜೊತೆಗೆ ಯಾರೇ ತಪ್ಪು ಮಾಡಿದ್ರು ಅವರನ್ನು ಕರೆದು ಬುದ್ದಿ ಹೇಳಬೇಕೇ ವಿನಹ ಈ ರೀತಿ ಹೋಗಬಾರದು. ಇವರನ್ನ ವಿಷ್ಣುವರ್ಧನ್, ಅಂಬರೀಶ್, ರಾಜ್ ಕುಮಾರ್ ಗೆ ಕಂಪೇರ್ ಮಾಡೋಕೆ ಆಗಲ್ಲ. ಕೊಲೆ ಗೊತ್ತಿದ್ರೂ ಯಾಕೆ ಮುಚ್ಚಿಟ್ರೋ ಗೊತ್ತಿಲ್ಲ ಎಂದರು. ಇದನ್ನೂ ಓದಿ:6 ದಿನಗಳ ಕಾಲ ದರ್ಶನ್ ಸೇರಿ 13 ಜನರಿಗೆ ಗ್ರಿಲ್

Share with Friends
author avatar
News Desk