Crime NewsEntertainmentLatestಬೆಂಗಳೂರು-Bengaluruರಾಜ್ಯ-Karnataka

ಶವ ವಿಲೇವಾರಿ ಮಾಡಲು 30 ಲಕ್ಷಕ್ಕೆ ಡೀಲ್‌ – ದರ್ಶನ್ ಟೀಂ ಸಿಕ್ಕಿಬಿದ್ದಿದ್ದು ಹೇಗೆ?

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿಯನ್ನು (Renukaswamy) ಕೊಲೆಗೈದ ಪ್ರಕರಣದಲ್ಲಿ ದರ್ಶನ್‌ (Darshan) ತಂಡ ಅರೆಸ್ಟ್‌ ಆಗಿದೆ. ಈಗ ಅರೆಸ್ಟ್‌ ಆಗಿದ್ದರೂ ಈ ಪ್ರಕರಣದಿಂದ ಪಾರಾಗಲು ದರ್ಶನ್‌ ಭಾರೀ ಪ್ಲ್ಯಾನ್‌ ಮಾಡಿದ ವಿಚಾರ ಪೊಲೀಸ್‌ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಹಂತಕರಿಗೆ ರೇಣುಕಾಸ್ವಾಮಿಯನ್ನು ಕೊಲೆ ಮಾಡಿ ಶವ ವಿಲೇವಾರಿ ಮಾಡಿದ ಬಳೊಕ ನಡುಕ ಶುರುವಾಗಿತ್ತು. ಆಗ ದರ್ಶನ್‌ ಅವರು ಈ ಮೂಔರನ್ನು ಶರಣಾಗುವಂತೆ ಸೂಚನೆ ನೀಡಿದ್ದರು. ಆದರಂತೆಯೇ ಮೂವರು ಜೂನ್‌ 10 ರಂದು ಕಾಮಾಕ್ಷಿಪಾಳ್ಯ ಠಾಣೆಗೆ ಶರಣಾಗಿ ನಾವು ಹಣಕಾಸು ವಿಚಾರಕ್ಕೆ ಕೊಲೆ ಮಾಡಿರುವುದಾಗಿ ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಮಿಲಿಟರಿ ವಿಮಾನ ಅಪಘಾತ; ಮಲಾವಿಯ ಉಪಾಧ್ಯಕ್ಷ ಚಿಲಿಮ್ ಸೇರಿ 9 ಮಂದಿ ಸಾವು

https://youtu.be/reNX04pb4bE?si=_0vlj36F_cIJ7xfs

ಕೊಲೆ ಮಾಡಿ ಶರಣಾದ ಹಿನ್ನೆಲೆಯಲ್ಲಿ ಅನುಮಾನಗೊಂಡ ಪೊಲೀಸರು (Police) ಮೂವರನ್ನು ಪ್ರತ್ಯೇಕವಾಗಿ ಕರೆದು ಪೊಲೀಸ್‌ ಶೈಲಿಯಲ್ಲಿ ವಿಚಾರಣೆ ನಡೆಸಿ ಯಾರ ಮಾಹಿತಿ ಮೇರೆಗೆ ಬಂದು ಶರಣಾಗಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಒಬ್ಬೊಬ್ಬರು ಸಂಬಂಧವೇ ಇಲ್ಲದ ಒಂದೊಂದು ಹೇಳಿಕೆ ನೀಡಿದ್ದಾರೆ. ಪೊಲೀಸರು ಮತ್ತೆ ತನಿಖೆಗೆ ಇಳಿದು ಮೊಬೈಲ್‌ ಪರಿಶೀಲನೆ ನಡೆಸಿದಾಗ ದರ್ಶನ್‌ಗೆ ರಾತ್ರಿಯಿಡಿ ವಾಟ್ಸಪ್‌ ಕರೆ ಮಾಡಿರುವ ವಿಚಾರ ಗೊತ್ತಾಗಿದೆ. ಈ ವಿಚಾರ ತಿಳಿದು ವಿಚಾರಣೆಯನ್ನು ಮತ್ತಷ್ಟು ತೀವ್ರಗೊಳಿಸಿದಾಗ ಈ ಪ್ರಕರಣದ ನೈಜ ಹಂತಕರ ಬಗ್ಗೆ ಬಾಯಿಬಿಟ್ಟಿದ್ದಾರೆ.ಇದನ್ನೂ ಓದಿ: ಮಾಹಿತಿ , ಪ್ರಸಾರ ಖಾತೆ ಸಚಿವರಾಗಿ ಅಶ್ವಿನಿ ವೈಷ್ಣವ್ ಅಧಿಕಾರ ಸ್ವೀಕಾರ

https://youtu.be/8kM-OdHHiws?si=Br_XdA7cZRA12bW7

ಗ್ಯಾಂಗ್‌ನಲ್ಲಿ ಇರಲಿಲ್ಲ:
ಮೊದಲು ಶರಣಾಗತಿಯಾದ ಮೂವರು ಈ ಕೊಲೆ ಪ್ರಕರಣದಲ್ಲೇ ಇರಲಿಲ್ಲ. ಹಲ್ಲೆಯೂ ಮಾಡಿಲ್ಲ, ಕಿಡ್ನ್ಯಾಪ್‌ ಮಾಡಿಲ್ಲ. ಪೊಲೀಸರ ದಿಕ್ಕು ತಪ್ಪಿಸಲು ದರ್ಶನ್‌ ಈ ಪ್ಲ್ಯಾನ್‌ ಮಾಡಿದ್ದರು. ಈ ಮೂವರ ಜೊತೆ ಶವ ವಿಲೇವಾರಿ ಮಾಡಲು 30 ಲಕ್ಷ ರೂ. ಡೀಲ್‌ ನಡೆದಿತ್ತು. ಈಗ ಸುಳ್ಳು ಆರೋಪಿಗಳಾಗಿ ಶರಣಾಗಿದ್ದಕ್ಕೆ ಪೊಲೀಸರು ಪ್ರತ್ಯೇಕ ಸೆಕ್ಷನ್‌ ಅಡಿ ಬಂಧಿಸಿದ್ದಾರೆ. ಇದನ್ನೂ ಓದಿ: ಮಳೆಯೋ ಮಳೆ.. ವರುಣನ ಅಬ್ಬರಕ್ಕೆ ಜನರು ತತ್ತರ

https://youtu.be/FrrnBHNMxDs?si=OXdh0qa3VbERD85s
Share with Friends
author avatar
News Desk