Latestಬೆಂಗಳೂರು-Bengaluruರಾಜ್ಯ-Karnataka

ದೇವನಹಳ್ಳಿ ಏರ್ಪೋಟ್ ನಲ್ಲಿ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ- 06 ಕೋಟಿ 29 ಲಕ್ಷ ಮೌಲ್ಯದ ಚಿನ್ನ ವಶ

ಬೆಂಗಳೂರು: ಕಸ್ಟಮ್ಸ್ ಅಧಿಕಾರಿಗಳು ದೇವನಹಳ್ಳಿ ಏರ್ಪೋಟ್ (Devanahalli Airport) ನಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿ ವಿದೇಶದಿಂದ ಸಾಗಿಸುತ್ತಿದ್ದ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಚಿನ್ನವನ್ನು ವಶ ಪಡಿಸಿಕೊಂಡಿದ್ದಾರೆ.

ಬ್ಯಾಂಕಾಕ್(Bankok) ನಿಂದ ಥಾಯ್ ಏರ್ವೆಸ್ ನಲ್ಲಿ ಬೆಂಗಳೂರಿನ ಕೆಂಪೇಗೌಡ ಏರ್ಪೋಟ್ಗೆ ಬಂದಿದ್ದ ಇಬ್ಬರು ಮಹಿಳೆಯರ ಬ್ಯಾಗ್‌ನಲ್ಲಿ ಮತ್ತು ವಾಶ್ ರೂಂ ನಲ್ಲಿ ಚಿನ್ನ ಪತ್ತೆಯಾಗಿದೆ. ಏರ್ಪೋಟ್ ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ ಮಹಿಳೆಯರ ಬ್ಯಾಗ್ ನಲ್ಲಿ ಚಿನ್ನ ಪತ್ತೆ. ಮಹಿಳೆಯರ ಬ್ಯಾಗ್‌ನಲ್ಲಿ ಕೋಟಿಗಟ್ಟಲೆ ಬೆಲೆ ಬಾಳುವ ಕೆಜಿ ಕಿಜೆ ಚಿನ್ನ ಕಂಡು ಅಧಿಕಾರಿಗಳು ಶಾಕ್‌ ಆಗಿದ್ದಾರೆ. ಇದನ್ನೂ ಓದಿ: ಮೋದಿ ಪ್ರಮಾಣವಚನಕ್ಕೆ ಭರ್ಜರಿ ಸಿದ್ಧತೆ- ರಾಷ್ಟ್ರಪತಿ ಭವನದ ಬಳಿ ಟೈಟ್ ಸೆಕ್ಯೂರಿಟಿ

https://youtu.be/N__BjhNj9eo?si=D3n-93eOV0QhBXCc

ನಾಜಿ ಲಿಟಿ ಎಂಬುವರಿಂದ 4 ಕೆಜಿ 61 ಗ್ರಾಂ ಮತ್ತು ಆರತಿ ಸೆಗಾಲ್ ಎಂಬುವರಿಂದ 2 ಕೆಜಿ 181 ಗ್ರಾಂ ಚಿನ್ನ ವಶ ಪಡಿಸಿಕೊಳ್ಳಲಾಗಿದೆ. ಜೊತೆಗೆ ಏರ್ಪೋಟ್ ನ ಶೌಚಾಲಯದಲ್ಲಿ 2 ಕೆಜಿ 772 ಗ್ರಾಂ ತೂಕದ ಚಿನ್ನ ಪತ್ತೆಯಾಗಿದ್ದು, ಕೋಟಿಗಟ್ಟಲೆ ಬೆಲೆ ಬಾಳುವ ಕೆಜಿ ಕೆಜಿ ಚಿನ್ನ ಕಂಡು ಅಧಿಕಾರಿಗಳು ಶಾಕ್ ಆಗಿದ್ದಾರೆ. ಇದನ್ನೂ ಓದಿ: ಮೈಸೂರು: ಗುಜರಿ ಗೋಡೌನಲ್ಲಿ ವಿಷಾನಿಲ ಸೋರಿಕೆ- 30ಕ್ಕೂ ಹೆಚ್ಚು ಮಂದಿ ಅಸ್ವಸ್ಥ

https://youtu.be/N__BjhNj9eo?si=QmQ20jStC3vT2ZfY

ಡಿಆರ್ಐ ತಂಡದ ಅಧಿಕಾರಿಗಳಿಂದ ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಏರ್ಪೋಟ್ ಶೌಚಾಲಯದಲ್ಲಿ ಸಿಕ್ಕ ಚಿನ್ನ ಎಲ್ಲಿಂದ ಬಂತು ಅನ್ನೋ ಬಗ್ಗೆಯು ಅಧಿಕಾರಿಗಳಿಂದ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಮುಸ್ಲಿಂ ಯುವಕರು ಹಿಂದೂ ವಿದ್ಯಾರ್ಥಿಗಳ ಮೇಲೆ ಹಲ್ಲೆ: ಬೀದರ್‌ ಎಂಜಿನಿಯರಿಂಗ್ ಕಾಲೇಜಿನಿಂದ 19 ವಿದ್ಯಾರ್ಥಿಗಳು ಅಮಾನತು

https://youtu.be/AIedS4838dw?si=k1ps_U7VBq25hjMQ
Share with Friends
author avatar
News Desk