Latestಚಿಕ್ಕಬಳ್ಳಾಪುರ-Chikkaballapuraರಾಜಕೀಯ | Politicsರಾಜ್ಯ-Karnataka

ರಾಜೀನಾಮೆಗೆ ಒತ್ತಾಯ ಹೆಚ್ಚಾಗುತ್ತಿದ್ದಂತೆ, ಪ್ರದೀಪ್‌ ಈಶ್ವರ್ ಮೊಬೈಲ್‌ ಸ್ವಿಚ್‌-ಆಫ್‌

ಚಿಕ್ಕಬಳ್ಳಾಪುರ: ರಾಜೀನಾಮೆಗೆ ಒತ್ತಾಯ ಹೆಚ್ಚಾಗುತ್ತಿದ್ದಂತೆ ಪ್ರದೀಪ್‌ ಈಶ್ವರ್‌ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿ ಕುಳಿತಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಡಾ. ಕೆ ಸುಧಾಕರ್‌ ಅವರಿಗೆ ಒಂದೇ ಒಂದು ಮತದ ಲೀಡ್‌ ಸಿಕ್ಕರೂ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಪ್ರದೀಪ್‌ ಈಶ್ವರ್‌ ಸವಾಲು ಹಾಕಿದ್ದರು. ಸದ್ಯ ಇದೀಗ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಡಾ. ಕೆ. ಸುಧಾಕರ್‌ ಅವರು ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ವಿರುದ್ಧ ಭರ್ಜರಿ ಗೆಲುವನ್ನು ಸಾಧಿಸಿದ್ದಾರೆ. ಸುಧಾಕರ್‌ ಗೆಲವಿನ ಬೆನ್ನಲ್ಲೇ ಒಂದೆಡೆ ಶಾಸಕ ಟ್ರೋಲ್‌ ಆಗುತ್ತಿರುವ ಜೊತೆಜೊತೆಗೆ ರಾಜೀನಾಮೆಗೂ ಒತ್ತಾಯ ಹೆಚ್ಚಾಗುತ್ತಿದ್ದೆ. ಇನ್ನೊಂದೆಡೆ ಪ್ರದೀಪ್‌ ಈಶ್ವರ್‌ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿ ಕುಳಿತಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ ಹಗರಣ –ಅಕ್ರಮವಾಗಿ ಬ್ಯಾಂಕ್‌ಗೆ ವರ್ಗಾವಣೆಯಾಗಿದ್ದ 45 ಕೋಟಿ ಸೀಝ್‌

https://youtu.be/EN_1kRxjo-4?si=Zt6fgtLR5bdS6xPI

ಕೆಲ ದಿನಗಳ ಹಿಂದೆ ಶಾಸಕ ಪ್ರದೀಪ್‌ ಈಶ್ವರ್‌ ಸುದ್ದಿಗೋಷ್ಠಿಯಲ್ಲಿ ಡಾ. ಕೆ. ಸುಧಾಕರ್‌ ಅವರು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಒಂದೇ ಒಂದು ವೋಟ್‌ ಹೆಚ್ಚು ತೆಗೆದುಕೊಂಡರೂ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದರು. ಆದರೆ ಈ ಸವಾಲಿನಲ್ಲಿ ಶಾಸಕ ಸೋತಿದ್ದು, ರಾಜೀನಾಮೆ ಯಾವಾಗ ಕೊಡ್ತೀರಿ ಸ್ವಾಮಿ ಎಂದು ನೆಟ್ಟಿಗರು ಪ್ರಶ್ನೆ ಕೇಳ್ತಿದ್ದಾರೆ. ಫಲಿತಾಂಶದ ಬಳಿಕ ಎಲ್ಲೂ ಕಾಣಿಸಿಕೊಳ್ಳದ ಪ್ರದೀಪ್‌ ಈಶ್ವರ್‌ ಮೊಬೈಲ್‌ ಅನ್ನು ಕೂಡಾ ಸ್ವಿಚ್‌ ಆಫ್‌ ಮಾಡಿ ಕುಳಿತಿದ್ದಾರೆ. ಇದನ್ನೂ ಓದಿ: ಪಟಾಕಿ ಸಿಡಿಸಿದ್ದಕ್ಕೆ ಬಜರಂಗದಳ ಕಾರ್ಯಕರ್ತನ ಮೇಲೆ‌ ಕೈ ಕಾರ್ಯಕರ್ತನಿಂದ ಹಲ್ಲೆ ಆರೋಪ

https://youtu.be/IrlpjBl1yQk?si=8Ze4UOeqxfUjjGHG

ಈ ಕುರಿತ ವಿಡಿಯೋವೊಂದನ್ನು _sanathan_dharm ಎಂಬ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ರಾಜೀನಾಮೆ ಕೊಡ್ತೀನಿ ಅಂತ ಹೇಳಿ ಫೋನ್‌ ಸ್ವಿಚ್‌ ಆಫ್‌ ಮಾಡಿ ಕುಳಿತಿದ್ದೀರಾ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಶಾಸಕ ರಾಜೀನಾಮೆ ಕೊಡೋವರೆಗೂ ಬಿಡ್ಬೇಡಿ ಅಂತ ತರಹೇವಾರಿ ಕಾಮೆಂಟ್ಸ್‌ಗಳು ಹರಿದುಬಂದಿವೆ. ಇದನ್ನೂ ಓದಿ: ಡಿಎಂಕೆ ಕಾರ್ಯಕರ್ತರಿಂದ ಅಣ್ಣಾಮಲೈ ಫೋಟೋ ಹಾಕಿ ನಡು ರಸ್ತೆಯಲ್ಲಿ ಮೇಕೆ ತಲೆ ಕತ್ತರಿಸಿ ಸಂಭ್ರಮಾಚರಣೆ

Share with Friends
author avatar
News Desk