Latestದಕ್ಷಿಣ ಕನ್ನಡ-Dakshina Kannadaರಾಜ್ಯ-Karnataka

ಪಟಾಕಿ ಸಿಡಿಸಿದ್ದಕ್ಕೆ ಬಜರಂಗದಳ ಕಾರ್ಯಕರ್ತನ ಮೇಲೆ‌ ಕೈ ಕಾರ್ಯಕರ್ತನಿಂದ ಹಲ್ಲೆ ಆರೋಪ

ಮಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶ ಹೊರ ಬಿದಿದ್ದು, ಸಂಭ್ರಮಕ್ಕಾಗಿ ಪಟಾಕಿ ಸಿಡಿಸಿದಕ್ಕೆ ಗಲಾಟೆಯಾಗಿದ್ದು ಮರು ದಿನ ಬಜರಂಗದಳ (Bajrang Dal) ಕಾರ್ಯಕರ್ತನಿಗೆ ಕಾಂಗ್ರೆಸ್ (Congress) ಕಾರ್ಯಕರ್ತನಿಂದ ಹಲ್ಲೆ ನಡೆದಿರುವ ಆರೋಪ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕುಂಪಲ ಎಂಬಲ್ಲಿ
ಕೇಳಿ ಬಂದಿದೆ.

ಕುಂಪಲ ನಿವಾಸಿಯಾಗಿರುವ ಬಜರಂಗದಳ ಕಾರ್ಯಕರ್ತ ಪ್ರವೀಣ್ ಪೂಜಾರಿ ಯಾನೆ ಪಿಟ್ಟಿ (39) ಹಲ್ಲೆಗೊಳಗಾದ ವ್ಯಕ್ತಿ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿರುವ ಸ್ಥಳೀಯ ಕೇಸರಿ ಮಿತ್ರ ವೃಂದ ಸಂಘಟನೆಯ ಸದಸ್ಯ ಗೌತಮ್ ಎಂಬಾತನಿಂದ ಹಲ್ಲೆ‌ ನಡೆದಿದೆ ಎಂದು ಆರೋಪಿಸಲಾಗಿದೆ. ಗಾಯಾಳು ಪ್ರವೀಣ್ ಪೂಜಾರಿಯನ್ನು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಡಿಎಂಕೆ ಕಾರ್ಯಕರ್ತರಿಂದ ಅಣ್ಣಾಮಲೈ ಫೋಟೋ ಹಾಕಿ ನಡು ರಸ್ತೆಯಲ್ಲಿ ಮೇಕೆ ತಲೆ ಕತ್ತರಿಸಿ ಸಂಭ್ರಮಾಚರಣೆ

https://youtu.be/bJ8aWd95gqc?si=gGMYMbvTax8B9RHd

ಜೂನ್ .04ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಈ ಹಿನ್ನೆಲೆ ಬಜರಂಗದಳ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. ಈ ವಿಚಾರದಲ್ಲಿ ಬಜರಂಗದಳ ಹಾಗೂ ಕೇಸರಿ ಮಿತ್ರ ವೃಂದದ ಸದಸ್ಯರ ನಡುವೆ ವಾಗ್ವಾದ ನಡೆದಿತ್ತು. ಈ ಘಟನೆ ಸಂಬಂಧ ದ್ವೇಷವಿದ್ದು ನಿನ್ನೆ ಪ್ರವೀಣ್ ಪೂಜಾರಿ ಕೆಲಸ ಮುಗಿಸಿ ವಾಪಸಾಗುತ್ತಿದ್ದ ವೇಳೆ ಅಡ್ಡಗಟ್ಟಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಗೌತಮ್​ಗೆ ಹಲ್ಲೆ ನಡೆಸಿ ದೂಡಿದ್ದು, ಚರಂಡಿಗೆ ಬಿದ್ದ ಪ್ರವೀಣ್ ತಲೆಗೆ ಗಾಯಗಳಾಗಿವೆ.ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ ಹಗರಣ –ಅಕ್ರಮವಾಗಿ ಬ್ಯಾಂಕ್‌ಗೆ ವರ್ಗಾವಣೆಯಾಗಿದ್ದ 45 ಕೋಟಿ ಸೀಝ್‌

https://youtu.be/EN_1kRxjo-4?si=Zt6fgtLR5bdS6xPI

ಹಲ್ಲೆ ನಡೆಸಿದ ಗೌತಮ್ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು, ಪಟಾಕಿ ಸಿಡಿಸಿದ ದ್ವೇಷಕ್ಕೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆ ವೇಳೆ ಚರಂಡಿಗೆ ಬಿದ್ದ ಕಾರಣ ಪ್ರವೀಣ್ ತಲೆಗೆ ಗಾಯಗಳಾಗಿವೆ ಎಂದು ಹೇಳಲಾಗಿದೆ. ಉಳ್ಳಾಲ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ತ‌ನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ದೆಹಲಿ ಏರ್​ಪೋರ್ಟ್​ನಲ್ಲಿ ಚಂದ್ರಬಾಬು ನಾಯ್ಡು, ಸ್ಟಾಲಿನ್ ಭೇಟಿ

Share with Friends
author avatar
News Desk