Latestಚುನಾವಣೆ-Electionರಾಜಕೀಯ | Politicsರಾಷ್ಟ್ರೀಯ-National

ಜೊತೆಗೆ ದೆಹಲಿಗೆ ಹಾರಿದ ನಿತೀಶ್​ ಕುಮಾರ್, ತೇಜಸ್ವಿ ಯಾದವ್

ನವದೆಹಲಿ: ಲೋಕಸಭಾ ಚುನಾವಣಾ ಫಲಿತಾಂಶ(Lok Sabha Election Results) ಹಿನ್ನೆಲೆಯಲ್ಲಿ ಇಂದು ಎನ್​ಡಿಎ ಸಭೆಯನ್ನು ಹಮ್ಮಿಕೊಂಡಿದ್ದು, ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್(Nitish Kumar)​ ಕೂಡ ಪಾಲ್ಗೊಳ್ಳಲಿದ್ದಾರೆ. ನಿತೀಶ್​ ಕುಮಾರ್ ಹಾಗೂ ತೇಜಸ್ವಿ ಯಾದವ್ (Tejasvi Ydav) ಪಾಟ್ನಾದಿಂದ ಒಂದೇ ವಿಮಾನದಲ್ಲಿ ಆಗಮಿಸುತ್ತಿರುವುದು ವಿಶೇಷವಾಗಿದೆ.

ಇಬ್ಬರು ವಿಸ್ತಾರಾ ಯುಕೆ-718ನಲ್ಲಿ ದೆಹಲಿಗೆ ಹೊರಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ 40ರಲ್ಲಿ 30 ಸ್ಥಾನಗಳನ್ನು ಎನ್​ಡಿಎ ಗೆದ್ದಿದೆ, ಆದರೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪಕ್ಷ 12 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇದನ್ನೂ ಓದಿ: ದೆಹಲಿಯತ್ತ ಹೆಚ್.ಡಿ. ಕುಮಾರಸ್ವಾಮಿ

https://youtu.be/Sx7PrNp35Is?si=88J_zJ8a8iSCbqMm

ಇಂಡಿ ಮೈತ್ರಿಕೂಟದ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳುವ ಮೊದಲು ತೇಜಸ್ವಿ ಯಾದವ್ ಬಿಹಾರದಲ್ಲಿ ರಾಷ್ಟ್ರೀಯ ಜನತಾ ದಳವು ಗರಿಷ್ಠ ಮತಗಳನ್ನು ಗಳಿಸಿದೆ ಮತ್ತು ನಮ್ಮಲ್ಲಿ ಹೆಚ್ಚಿನ ಮತದಾನದ ಶೇಕಡಾವಾರು ಪ್ರಮಾಣವಿದೆ, ಮತದಾನವೂ ಹೆಚ್ಚಾಗಿದೆ ಎಂದರು. ಒಂದೆಡೆ ನಿತೀಶ್​ ಕುಮಾರ್ ಐಎನ್​ಡಿಐಎ ಒಕ್ಕೂಟ ಸೇರಿದರೆ ಎನ್ನುವ ಅನುಮಾನ ಕಾಡುತ್ತಿರುವಾಗಲೇ ಈ ಚಿತ್ರ ಎಲ್ಲೆಡೆ ವೈರಲ್ ಆಗಿದೆ. ಇದನ್ನೂ ಓದಿ: ಕಾಂಗ್ರೆಸ್ ಸಂಭ್ರಮಾಚರಣೆಯಲ್ಲಿ ಪಾಕಿಸ್ತಾನ ಪರ ಜೈಕಾರ – ಆರೋಪಿ ಬಂಧನ

https://youtu.be/bJ8aWd95gqc?si=HmZiAFbcT1VnH4fV
Share with Friends
author avatar
News Desk