Latestಚುನಾವಣೆ-Electionರಾಷ್ಟ್ರೀಯ-National

ಇಂದಿರಾ ಗಾಂಧಿಯನ್ನು ಹತ್ಯೆಗೈದ ಅಂಗರಕ್ಷಕನ ಪುತ್ರನಿಗೆ ಜಯ

ಚಂಡಿಗಢ: ಮಾಜಿ ಪ್ರಧಾನಿ ಇಂದಿರಾ ಗಾಂಧಿ (Indira Gandhi) ಅವರನ್ನು ಹತ್ಯೆಗೈದ ಅಪ್ತ ರಕ್ಷನ ಪುತ್ರ ಆಪ್‌ (AAP) ಅಭ್ಯರ್ಥಿಯನ್ನು ಸೋಲಿಸಿ (Lok Sabha Election) ಜಯಗಳಿಸಿ ಸಂಸತ್‌ ಪ್ರವೇಶಿಸಿದ್ದಾರೆ.

ಪಂಜಾಬ್‌ನ ಫರಿದ್‌ಕೋಟ್‌ನಿಂದ (Faridkot ) ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ಸರಬ್ಜಿತ್‌ ಸಿಂಗ್‌ ಖಲ್ಸಾ (Sarabjeet Singh Khalsa) ಅವರು 70,053 ಮತಗಳ ಅಂತರದಿಂದ ಆಪ್‌ (AAP) ಅಭ್ಯರ್ಥಿಯನ್ನು ಸೋಲಿಸಿದ್ದಾರೆ. ಇದನ್ನೂ ಓದಿ: ಸುಧಾಕರ್‌ಗೆ ಗೆಲುವು, ಪ್ರದೀಪ್ ಈಶ್ವರ್ ಮನೆಯ ಮೇಲೆ ಕಲ್ಲು ತೂರಾಟ

https://youtu.be/qSTRrEiHOx4?si=tsMuqe3YKDGzTYM1

ಸರಬ್ಜಿತ್‌ ಸಿಂಗ್‌ ಖಲ್ಸಾ 2,98,062 ಮತಗಳನ್ನು ಪಡೆದರೆ ಆಪ್‌ ಅಭ್ಯರ್ಥಿ ಕರಮ್‌ಜಿತ್‌ ಸಿಂಗ್‌ 2,28,009 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಅಮರ್‌ಜಿತ್‌ ಕೌರ್‌ 1,60,357 ಮತಗಳನ್ನು ಪಡೆದರೆ ಶಿರೋಮಣಿ ಅಕಾಲಿದಳ ರಜ್ವಿಂದರ್‌ ಸಿಂಗ್‌ 1,38,251 ಮತ, ಬಿಜೆಪಿಯ ಹನ್ಸ್‌ ರಾಜ್‌ ಹನ್ಸ್‌ 1,23,533 ಮತಗಳನ್ನು ಪಡೆದರು. ಇದನ್ನೂ ಓದಿ: ಪ್ರಧಾನಿ ಅಭ್ಯರ್ಥಿಯನ್ನು ನಾವು ನಿರ್ಧರಿಸುತ್ತೇವೆ: ಉದ್ಧವ್‌ ಠಾಕ್ರೆ

https://youtu.be/bJ8aWd95gqc?si=NQueHWNYAaqpATFl

2019ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅ‍ಭ್ಯರ್ಥಿ ಮೊಹಮ್ಮದ್‌ ಸಾದಿಕ್‌ ಇಲ್ಲಿ 83 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದರು. ಕಾಂಗ್ರೆಸ್‌ಗೆ 4,19,065 ಮತಗಳು ಬಿದ್ದರೆ ಶಿರೋಮಣಿ ಅಕಾಲಿ ದಳಕ್ಕೆ 3,35,809 ಮತಗಳು ಬಿದ್ದಿದ್ದವು.
1984ರ ಅಕ್ಟೋಬರ್‌ 31 ರಂದು ಸರಬ್ಜಿತ್‌ ಸಿಂಗ್‌ ತಂದೆ ಮತ್ತು ಸತ್ವಂತ್‌ ಸಿಂಗ್‌ ಆಪರೇಷನ್‌ ಬ್ಲೂ ಸ್ಟಾರ್‌ ಕಾರ್ಯಾಚರಣೆ ಮಾಡಿದ್ದಕ್ಕೆ ಪ್ರತಿಯಾಗಿ ಇಂದಿರಾ ಗಾಂಧಿ ಅವರನ್ನು ದೆಹಲಿಯ ನಿವಾಸದಲ್ಲೇ ಗುಂಡಿಟ್ಟು ಹತ್ಯೆ ಮಾಡಿದ್ದರು. ಇದನ್ನೂ ಓದಿ: ದೆಹಲಿಯಲ್ಲಿ ಎನ್‌ಡಿ ಮಹತ್ವದ ಸಭೆ – ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಭಾಗಿ

https://youtu.be/Sx7PrNp35Is?si=_r0gIGnCAUjaNaJu
Share with Friends
author avatar
News Desk