Latestಬೆಂಗಳೂರು-Bengaluruರಾಜಕೀಯ | Politicsರಾಜ್ಯ-Karnataka

ಮಾಜಿ ಸಚಿವ ಎಂ.ಪಿ.ಕೇಶವಮೂರ್ತಿ ನಿಧನ

ಬೆಂಗಳೂರು: ಮಾಜಿ ಸಚಿವ, ಆನೇಕಲ್‌ (Anekal) ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂ.ಪಿ.ಕೇಶವಮೂರ್ತಿ(Keshavamurthy) ನಿಧನರಾಗಿದ್ದಾರೆ.

85 ವರ್ಷದ ಕೇಶವಮೂರ್ತಿ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅವರು ಕೆಲ ಕಾಲದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

https://youtu.be/F0T9C-4BUvE?si=8HWxj-ELbz9nzUge

ಆನೇಕಲ್‌ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದ ಇವರು ವೀರಪ್ಪಮೊಯ್ಲಿ ಅವರ ಸಂಪುಟದಲ್ಲಿ ಅರಣ್ಯ ಮತ್ತು ಸಣ್ಣ ನೀರಾವರಿ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಆನೇಕಲ್‌ ತಾಲ್ಲೂಕಿನ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೇಶವಮೂರ್ತಿ ಮಾಡಿದ್ದರು.

https://youtu.be/R86Ec-skwp8?si=ul9sfYYVBTC-DFUY

Share with Friends
author avatar
News Desk