Crime NewsLatestಬೆಂಗಳೂರು-Bengaluruರಾಜ್ಯ-Karnataka

ಪ್ರಜ್ವಲ್ ರೇವಣ್ಣ ನ್ಯಾಯಾಧೀಶರ ಮುಂದೆ ಹಾಜರು

-42 ನೇ ACMM ಕೋಟ್೯ ನಲ್ಲಿ ಪ್ರಜ್ವಲ್ ರೇವಣ್ಣ ಹಾಜರು

ಬೆಂಗಳೂರು: ಲೈಂಗಿಕ ಅತ್ಯಾಚಾರ ಲೈಂಗಿಕ ಕಿರುಕುಳು ಕಿಡ್ನಾಪ್ ಕೇಸ್ ನಲ್ಲಿ ಬಂಧನವಾಗಿರುವ ಪ್ರಜ್ವಲ್ ರೇವಣ್ಣ (Prajwal Revanna) ಇದೀಗ ಮೆಡಿಕಲ್ ಚೆಕಪ್ (Medical Test) ಬಳಿಕ ನ್ಯಾಯಾಧೀಶರ ಮುಂದೆ ಪ್ರಜ್ವಲ್ ಹಾಜರಾಗಿದ್ದು, ವಿಚಾರಣೆ ನಡೆಯುತ್ತಿದೆ.

42 ನೇ ನ್ಯಾಯ್ಯಾಲಯ ದಲ್ಲಿ ನ್ಯಾಯಾಧೀಶ ಶಿವಕುಮಾರ್ (Shivakumar) ಅವರ ಮುಂದೆ ಸಂಸದ ಪ್ರಜ್ವಲ್‌ ರೇವಣ್ಣರನ್ನು ಹಾಜರುಪಡಿಸಿದ್ದಾರೆ. ಸದ್ಯ ಕೋಟ್೯ ಆವರಣದ ಸುತ್ತಲು ಪೊಲೀಸ್ ಸರ್ಫಗಾವಲು ಇದ್ದು, ಪ್ರಜ್ವಲ್‌ ಅವರ ವಿಚಾರಣೆ ನಡೆಸಲು ಎಸ್‌ಐಟಿ (SIT) ಪೊಲೀಸ್‌ ಕಸ್ಟಡಿಗೆ ಕೇಳಲಿದೆ.

https://youtu.be/Ic8UB2mCBrU?si=HhZKF4WwJ_gPCvTr

ಕೋರ್ಟ್‌ ನಲ್ಲಿ SIT ಪರ SPP ಅಶೋಕ್ ನಾಯಕ್ (Ashok Nayak) ವಾದ ಮಂಡಿಸುತ್ತಿದರೆ, ಪ್ರಜ್ವಲ್ ಪರ ವಕೀಲ ಅರುಣ್ ಕುಮಾರ್ (Arun Kumar) ಹಾಜರಾದಿದ್ದಾರೆ. ನ್ಯಾಯಧೀಶರು ಪ್ರಜ್ವಲ್‌ ನನ್ನು ಹಲವಾರು ಪ್ರಶ್ನೆಗಳನ್ನು ಕೇಳಿದ್ದರು. ನಿಮ್ಮ ಹೆಸರೇನು, ಎಲ್ಲಿ ಅರೆಸ್ಟ್ ಮಾಡಿದ್ದು, ಯಾವಾಗ ಅರೆಸ್ಟ್‌ ಮಾಡಿದ್ದು, ಅದು ಬಿಟ್ಟು ಏನಾದ್ರು ತೊಂದ್ರೆ ಕೊಟ್ರಾ ಈ ಎಲ್ಲಾ ಪ್ರಶ್ನೆಗಳಿಗೆ ಪ್ರಜ್ವಲ್‌ ಉತ್ತರ ನೀಡಿದ್ದಾರೆ. ಇದನ್ನೂ ಓದಿ: ಶಾಸಕರು ಇರೋದು ಶಾಸನ ರೂಪಿಸಲು- ಹರೀಶ್ ಪೂಂಜಾಗೆ ಹೈಕೋರ್ಟ್ ನಲ್ಲಿ ಕ್ಲಾಸ್‌

ಸದ್ಯ ಅತ್ಯಾಚಾರ ವಾಗಿರುವ ಲೈಂಗಿಕ‌ ಕಿರುಕುಳದ‌ ಬಗ್ಗೆ ಉಲ್ಲೇಖ ಮಾಡಿ, ಕಸ್ಟಡಿಗೆ ನೀಡುವಂತೆ ಸರ್ಕಾರಿ ವಕೀಲರು ವಾದ ಮಂಡನೆ ಮಾಡುತ್ತಿದ್ದಾರೆ. ಈತ ಒಬ್ಬ ವಿಕೃತ ಕಾಮಿ ಎನ್ನಿಸುತ್ತಿದೆ ಇವರಿಗೆ ಕಠಿಣ ಶಿಕ್ಷೆಯಾಗಬೇಕು, ಈತನಿಂದ ನೂರಾರು ಮಹಿಳೆಯರ ಮಾನ ಹರಾಜಾಗಿದೆ ಎಂದು ವಾದ ಮಂಡಿಸುತ್ತಿದ್ದಾರೆ. ಇದನ್ನೂ ಓದಿ: ಎಸ್‌ಐಟಿಯಿಂದ ಭವಾನಿ ರೇವಣ್ಣಗೆ ಮತ್ತೊಂದು ನೋಟಿಸ್

https://youtu.be/7yBIMPkTX5U?si=QqPHtrvSd_a7qRTt

ಪ್ರಜ್ವಲ್ ರೇವಣ್ಣ ನಿಂದ ಹಲವಾರು ಮಹಿಳೆಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಡಿಯೋ ಗಳು ವೈರಲ್ ಆಗಿರೋದ್ರಿಂದ ನೂರಾರಾ ಮಹಿಳೆಯರು ಆತಂಕಕ್ಕೆ ಒಳಗಾಗಿದ್ದಾರೆ. ಇದರಿಂದಾಗಿ ಹಲವು ಕುಟುಂಬಗಳು ಬೀದಿಗೆ ಬಂದಿವೆ. ವಿಡಿಯೋ ಮಾಡಿದ ಮೊಬೈಲ್ ವಶಕ್ಕೆ ಪಡೀಬೇಕಿದೆ. ಇಷ್ಟೆಲ್ಲಾ ಅವಾಂತರ ಆದಮೇಲೆ ದೇಶ ಬಿಟ್ಟು ಹೋಗಿದ್ದುಯಾಕೆ ಎಂದು ಪ್ರಶ್ನೆ ಮಾಡಿ ವಾದ ಮಂಡಿಸುತ್ತಿದ್ದಾರೆ. ಇದನ್ನೂ ಓದಿ: ಕೊನೆಗೂ ಉರುಳಿತ್ತು ಸಿದ್ದರಾಮಯ್ಯ ಸರ್ಕಾರದ ಮೊದಲ ವಿಕೆಟ್‌: ನಾಗೇಂದ್ರ ರಾಜಿನಾಮೆಗೆ ಸಿಎಂ ಸೂಚನೆ

Share with Friends
author avatar
News Desk