ಕಾಸರಗೋಡಿನಲ್ಲಿ ಲವ್ ಜಿಹಾದ್ – ಹಿಂದೂ ಶಿಕ್ಷಕಿಯನ್ನ ಮದ್ವೆಯಾದ ಮುಸ್ಲಿಂ ಯುವಕ!
ಮಂಗಳೂರು: ಕರ್ನಾಟಕದ ಗಡಿನಾಡು ಕಾಸರಗೋಡಿನಲ್ಲಿ (Kasargod) ಮತ್ತೆ ಲವ್ ಜಿಹಾದ್ (Love Jihad) ಸದ್ದು ಕೇಳಿ ಬಂದಿದ್ದು, ಕಾಸರಗೋಡಿನ ಬದಿಯಡ್ಕದ ನಿವಾಸಿ ಹಿಂದೂ ಯುವತಿ ನಾಪತ್ತೆಯಾಗಿದ್ದು, ಇದೀಗ ಅನ್ಯಕೋಮಿನ ಯುವಕನ ಜೊತೆ ಮದುವೆಯಾಗಿ (Marriage) ಪೊಲೀಸ್ ಠಾಣೆಗೆ ಹಾಜರಾಗಿದ್ದಾಳೆ.
ನೇಹಾ ಕಾಸರಗೋಡಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯಾಗಿದ್ದು, ಮೇ 23 ರಂದು ಮನೆಯಿಂದ ತೆರಳಿದ್ದಾಳೆ. ಬಳಿಕ ಆಕೆ ದಿಢೀರ್ ನಾಪತ್ತೆಯಾಗಿದ್ದಳು. ಈ ಬಗ್ಗೆ ಆಕೆಯ ತಂದೆ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಕೇಸ್ ದಾಖಲಿಸಿದ್ದರು. ಅಲ್ಲದೇ ಅಪಹರಣದ ಅನುಮಾನ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಬ್ರಿಜ್ ಭೂಷಣ್ ಶರಣ್ ಸಿಂಗ್ ಪುತ್ರನ ಬೆಂಗಾವಲು ವಾಹನ ಡಿಕ್ಕಿ- ಸ್ಥಳದಲ್ಲೇ ಇಬ್ಬರು ಸಾವು, ಓರ್ವ ಗಂಭೀರ
ಇದಾದ ಬಳಿಕ ಬದಿಯಡ್ಕದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯಾಗಿದ್ದ ಯುವತಿ ನೇಹಾ ಹಾಗೂ ಯುವಕ ಮಿರ್ಶಾದ್ ಭಾವಚಿತ್ರ ಸಹಿತ ನೋಟೀಸ್ ಅಲ್ಲಿನ ಬೊರ್ಡ್ ನಲ್ಲಿ ಪತ್ತೆಯಾಗಿತ್ತು. ಇದೀಗ ಇಬ್ಬರೂ ಬದಿಯಡ್ಕ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ಇದನ್ನೂ ಓದಿ: ಒಂದು ವೋಟು ಸಹ ಸುಧಾಕರ್ಗೆ ಜಾಸ್ತಿ ಬಂದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಪ್ರದೀಪ್ ಈಶ್ವರ್
ಕಾಸರಗೋಡು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಈ ವೇಳೆ ಯುವತಿ ಸ್ವ-ಇಚ್ಛೆಯಿಂದ ಯುವಕನ ಜೊತೆ ತೆರಳಿದ್ದಾಗಿ ಆಕೆ ಹೇಳಿಕೆ ನೀಡಿದ್ದಾಳೆ. ಇದನ್ನೂ ಓದಿ: ಎಂಎಲ್ಸಿ ಆಯ್ಕೆಗೆ ಹೈ ಪವರ್ ಕಮಿಟಿ ನೇಮಿಸಿ ಸಲಹೆ ಪಡೆಯಬೇಕಿತ್ತು: ಪರಮೇಶ್ವರ್ ಅಸಮಾಧಾನ
