ಮೈಸೂರಿನಲ್ಲಿ ಸಂಚಾರ ನಿಯಮ ಉಲ್ಲಂಘಸಿದರವ ವಿರುದ್ಧ ಒಂದೇ ದಿನ 7,336 ಕೇಸ್ ದಾಖಲು!
ಮೈಸೂರು: ನಗರದ ವಿವಿಧ ಸಂಚಾರ ಪೊಲೀಸ್ ಠಾಣೆಗಳಲ್ಲಿ ಒಂದೇ ದಿನ ಬರೋಬ್ಬರಿ 7,336 ಸಂಚಾರ ನಿಯಮ ಉಲ್ಲಂಘನೆ (Traffic Rules Violation) ಪ್ರಕರಣಗಳು ದಾಖಲಾಗಿವೆ.
ನಗರದಲ್ಲಿ ವಿಶೇಷ ತಪಾಸಣಾ ಕಾರ್ಯಾಚರಣೆ ಹಮ್ಮಿಕೊಂಡಿದ್ದ ಮೈಸೂರು ಪೊಲೀಸರು (Mysuru City Police), ಪೊಲೀಸ್ ಆಯುಕ್ತ ಬಿ.ರಮೇಶ್ ಬಾನೋತ್ ನಿರ್ದೇಶನದ ಮೇರೆಗೆ ಮಂಗಳವಾರ ಬೆಳಗ್ಗೆಯಿಂದ ಮಧ್ಯರಾತ್ರಿವರೆಗೆ ವಾಹನಗಳ ತಪಾಸಣೆ ಕಾರ್ಯ ನಡೆಸಿದ್ದಾರೆ. ಇದನ್ನೂ ಓದಿ: ಸರ್ಕಾರದಿಂದ ರಾಜ್ಯದ ಅನ್ನದಾತರಿಗೆ ಭಾರೀ ಶಾಕ್- ರೈತರ ಆಕ್ರೋಶ

-ಸಾಂರ್ಧಬಿಕ ಚಿತ್ರ
ಈ ವೇಳೆ ತ್ರಿಬಲ್ ರೈಡಿಂಗ್ (Triple Riding) ಸಂಬಂಧ 169, ಹೆಲ್ಮೆಟ್ ಧರಿಸದ ಸಂಬಂಧ 6,680, ನಂಬರ್ ಪ್ಲೇಟ್ ಇಲ್ಲದ ವಾಹನ 113 ಕೇಸ್ ಹಾಗೂ ಸರಕು ಸಾಗಣೆ ವಾಹನದಲ್ಲಿ ಪ್ರಯಾಣಿಕರನ್ನ ಕರೆದೊಯ್ಯುವುದು 22 ಪ್ರಕರಣಗಳನ್ನ ದಾಖಲಿಸಲಾಗಿದೆ. ಇದನ್ನೂ ಓದಿ: ಬಂಗಾಳಕೊಲ್ಲಿಯಲ್ಲಿ ರೆಮಲ್ ಚಂಡಮಾರುತ ಆರ್ಭಟ; ಸಾವಿನ ಸಂಖ್ಯೆ 37 ಕ್ಕೆ ಏರಿಕೆ
ಜೊತೆಗೆ ಡ್ರಂಕ್ ಅಂಡ್ ಡ್ರೈವ್ 33 ಪ್ರಕರಣಗಳು ಸೇರಿ ಒಟ್ಟು 7,336 ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳನ್ನ ದಾಖಲಿಸಲಾಗಿದೆ. ಇದನ್ನೂ ಓದಿ: ಮಂಡ್ಯದ ಗಂಡು ಅಂಬರೀಶ್ ಜನ್ಮ ಜಯಂತಿ: ಕುಟುಂಬ, ಫ್ಯಾನ್ಸ್ ನಿಂದ ಪೂಜೆ
