ತಮಿಳು ನಟ ಸಿಂಬು ಜೊತೆ ರೊಮ್ಯಾನ್ಸ್ ಗೆ ಜಾನ್ವಿ ಕಪೂರ್ ಸಜ್ಜು
ಬಾಲಿವುಡ್ ಹಾಟ್ ಬೆಡಗಿ ಜಾನ್ವಿ ಕಪೂರ್ (Jhanavi Kapoor) ಬ್ಯೂಸಿಯಾಗಿದ್ದು, ಇದೀಗ ತೆಲುಗಿನ (Telugu) ನಂತರ ಕಾಲಿವುಡ್ನತ್ತ (Kollywood) ಮುಖ ಮಾಡಿದ್ದಾರೆ. ಸದ್ಯ ತೆಲುಗುವಿನ “ದೇವರ” (Devara) ಚಿತ್ರದಲ್ಲಿ ಅವರು ನಟಿಸುತ್ತಿದ್ದು, ತಮಿಳಿನ ನಟ ಸಿಂಬು ಜೊತೆ ರೊಮ್ಯಾನ್ಸ್ ಮಾಡಲು ಸಜ್ಜಾಗಿದ್ದಾರೆ.
ಸದ್ಯ ಜಾನ್ವಿಗೆ ಎಲ್ಲೆಡೆ ಅವಕಾಶಗಳು ಹೆಚ್ಚಾಗಿದ್ದು, ಅದರಲ್ಲಿ ಸೌತ್ ಸಿನಿಮಾ ರಂಗ ಸಹ ಮಣೇ ಹಾಕುತ್ತಿದೆ. ಜಾನ್ವಿಗೆ ಬಾಲಿವುಡ್ಗಿಂತ ದಕ್ಷಿಣದಲ್ಲೇ ಬಂಪರ್ ಸಿನಿಮಾ ಆಫರ್ಗಳು ಅರಸಿ ಬರುತ್ತಿದೆ. ಈ ಸಿನಿಮಾ ರಿಲೀಸ್ಗೂ ಮುಂಚೆಯೇ ಕಾಲಿವುಡ್ನಲ್ಲಿ ಬಿಗ್ ಬಜೆಟ್ ಪ್ರಾಜೆಕ್ಟ್ ಅನ್ನೇ ತಮ್ಮದಾಗಿಸಿಕೊಂಡಿದ್ದಾರೆ. ಇದನ್ನೂ ಓದಿ: ಹೃತಿಕ್ ರೋಷನ್ ಸಿನಿಮಾದಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

ಸಿಂಬು 48ನೇ ಸಿನಿಮಾದಲ್ಲಿ ನಟಿಸಲು ಜಾನ್ವಿ ಚಾನ್ಸ್ ಸಿಕ್ಕಿದೆಯಂತೆ. ನಾಯಕಿ ಪಾತ್ರಕ್ಕೆ ಭಾರೀ ಪ್ರಾಮುಖ್ಯತೆ ಇದ್ದು, ಶ್ರೀದೇವಿ ಪುತ್ರಿಯೇ ಸೂಕ್ತ ಎಂದೆನಿಸಿ ಚಿತ್ರತಂಡ ಜಾನ್ವಿ ಜೊತೆ ಮಾತುಕತೆ ನಡೆಸಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ನೀಡಿ ಫ್ಯಾನ್ಸ್ಗೆ ಸಿಹಿ ಸುದ್ದಿ ನೀಡಲಿದ್ದರಾ ಎಂಬುದು ಕಾದು ನೋಡಬೇಕಿದೆ.ಇದನ್ನೂ ಓದಿ: ಪ್ರಭಾಸ್, ಪ್ರಶಾಂತ್ ನೀಲ್ ನಡುವೆ

ಅಂದಹಾಗೆ ಈ ಸಸಿನಿಮಾದಲ್ಲಿ ಸಿಂಬು ಅವರು ಡಬಲ್ ರೋಲ್ನಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಈ ಸಿನಿಮಾವನ್ನು ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯೇ ನಿರ್ಮಾಣಕ್ಕೆ ಸಾಥ್ ನೀಡುತ್ತಿದೆ. ಸದ್ಯ ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಚಿತ್ರದಲ್ಲಿ ಸಿಂಬು ಬ್ಯುಸಿಯಾಗಿದ್ದಾರೆ. ಜೂನ್ ಬಳಿಕ ಜಾನ್ವಿ ಜೊತೆ ಸಿಂಬು ಹೊಸ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ತಂಡದ ಕಡೆಯಿಂದ ಗುಡ್ ನ್ಯೂಸ್ ಸಿಗುತ್ತಾ? ಎಂದು ಕಾದುನೋಡಬೇಕಿದೆ. ಇದನ್ನೂ ಓದಿ:
