ಇಂದು ಭಾರೀ ಮಳೆ ಸಾಧ್ಯತೆ- ಕೇರಳದಲ್ಲಿ 11 ಮಂದಿ ಸಾವು
ತಿರುವನಂತಪುರಂ: ಇಂದು ಭಾರೀ ಮಳೆಯಾಗುವ (Heavy Rain) ಸಾಧ್ಯತೆ ಇದ್ದು, ಕೇರಳದ (Kerala) 7 ಜಿಲ್ಲೆಗಳಿಗೆ ಇಂದು (ಶನಿವಾರ) ಯೆಲ್ಲೋ ಅಲರ್ಟ್ ಘೋಷಿಸಿಲಾಗಿದೆ. ರಾಜ್ಯದಲ್ಲೂ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.
ತಿರುವನಂತಪುರಂ, ಕೊಲ್ಲಂ, ಅಲಪ್ಪುಳ, ಎರ್ನಾಕುಲಂ, ಕೋಝಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಇಂದು 6 ಸೆಂ.ಮೀ ಹಾಗೂ 11 ಸೆಂ.ಮೀ ನಡುವೆ ಮಳೆಯಾಗುವ (Heavy Rain) ಸಾಧ್ಯತೆಗಳಿವೆ ಎಂದು ಇಲಾಖೆ ಮನ್ಸೂಚನೆ ಕೊಟ್ಟಿದೆ. ಇದನ್ನೂ ಓದಿ: ರೇವ್ ಪಾರ್ಟಿ ಪ್ರಕರಣ- ಐವರ ಬ್ಯಾಂಕ್ ಅಕೌಂಟ್ ಸೀಜ್
ಮೇ 9 ರಿಂದ ಮೇ 23 ರವರೆಗೆ ಕೇರಳದಲ್ಲಿ ಇವರೆಗೆ ಮಳೆಗೆ ಸಂಬಂಧಿಸಿದಂತೆ ಕನಿಷ್ಠ 11 ಮಂದಿ ಸಾವನ್ನಪ್ಪಿದ್ದಾರೆ. ಇವುಗಳಲ್ಲಿ 6 ಮಂದಿ ಮುಳುಗಿ, ಇಬ್ಬರು ಕ್ವಾರಿ ದುರ್ಘಟನೆಯಲ್ಲಿ, ಇನ್ನಿಬ್ಬರು ಸಿಡಿಲು ಬಡಿದು ಹಾಗೂ ಓರ್ವ ಭಾರೀ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಮೃತಪಟ್ಟಿದ್ದಾನೆ. ಇದನ್ನೂ ಓದಿ: ಇಂದು ಆರನೇ ಹಂತದ ಚುನಾವಣೆ- 58 ಕ್ಷೇತ್ರಗಳಿಗೆ ಮತದಾನ
