Latestಬೆಂಗಳೂರು-Bengaluruರಾಜ್ಯ-Karnataka

ಚಿನ್ನದ ನಾಡಲ್ಲಿ ಅಕ್ರಮವಾಗಿ ನಾಡಬಂದೂಕು ತಯಾರಿಕೆ, ಮಾರಾಟ

ಕೋಲಾರ: ಅಕ್ರಮವಾಗಿ ನಾಡಬಂದೂಕು (Gun) ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಕೋಲಾರದ ಬೂದಿಕೋಟೆ ಪೊಲೀಸರು (Budikote police) ಪತ್ತೆಹಚ್ಚಿದ್ದು, ಮೂವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಬಂಗಾರಪೇಟೆ (Bangarapet) ತಾಲ್ಲೂಕಿನ ಪಲಮಡಗು ಗ್ರಾಮದ ಮಾರಪ್ಪ, ರಾಮಪ್ಪ ಹಾಗೂ ಧರ್ಮನ್ ಎಂದು ಗುರುತಿಸಲಾಗಿದೆ. ಕೆಜಿಎಫ್ (KGF) ಎಸ್‍ಪಿ ಶಾಂತರಾಜು ನೇತೃತ್ವದಲ್ಲಿ ಬೂದಿಕೋಟೆ ಪೊಲೀಸರು ಆರೋಪಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ.ಇದನ್ನೂ ಓದಿ: ಪೆನ್‌ಡ್ರೈವ್‌ ಕೇಸ್‌ನಲ್ಲಿ ಸರ್ಕಾರದ ದೇವೇಗೌಡರ ಕುಟುಂಬವನ್ನೇ ಟಾರ್ಗೆಟ್ ಮಾಡ್ತಿದೆ – ನಿಖಿಲ್ ಕಿಡಿ

https://youtu.be/SjqyqjIHY1A?si=5VXptpZlRgzhfN9B

ದಾಳಿ ವೇಳೆ 8 ನಾಡ ಬಂದೂಕುಗಳು ಹಾಗೂ 80 ಸಾವಿರ ರೂ. ನಗದು ಪತ್ತೆಯಾಗಿದೆ. ಪೊಲೀಸರು ಹಣ ಹಾಗೂ ನಾಡಬಂದೂಕುಗಳನ್ನು ವಶಕ್ಕೆ ಪಡೆದಿದ್ದಾರೆ. ನಾಡ ಬಂದೂಕಗಳನ್ನು ತಯಾರಿಸಿ ಆಂದ್ರಪ್ರದೇಶ, ತಮಿಳುನಾಡು ಸೇರಿದಂತೆ ಹಲವೆಡೆ ಆರೋಪಿಗಳು ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣ ಅತ್ಯಂತ ಸ್ವಚ್ಛ ನಿಲ್ದಾಣ ಹೆಗ್ಗಳಿಕೆಗೆ ಪಾತ್ರ

https://youtu.be/CQ5L1vxidf0?si=rvJTFlWPpogs-1a_

ಈ ಕುರಿತು ಬೂದಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದರೆ. ಇದನ್ನೂ ಓದಿ: ಪೆನ್‌ಡ್ರೈವ್‌ ಕೇಸ್‌ನಲ್ಲಿ ಸರ್ಕಾರದ ದೇವೇಗೌಡರ ಕುಟುಂಬವನ್ನೇ ಟಾರ್ಗೆಟ್ ಮಾಡ್ತಿದೆ – ನಿಖಿಲ್ ಕಿಡಿ

Share with Friends
author avatar
News Desk