Weatherಬೆಂಗಳೂರು-Bengaluruರಾಜ್ಯ-Karnataka

ಮುಂದಿನ ನಾಲ್ಕೈದು ದಿನ ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ– ಕರಾವಳಿ, ದಕ್ಷಿಣ ಒಳನಾಡಿಗೆ ಆರೆಂಜ್ ಅಲರ್ಟ್

ಬೆಂಗಳೂರು: ರಾಜ್ಯದಲ್ಲಿ ಮುಂಗಾರಿನ (Rain) ಅಬ್ಬರ ಜೋರಾಗಿದೆ. ಕಳೆದೊಂದು ವಾರದಿಂದ ಸಿಲಿಕಾನ್‌ ಸಿಟಿ(Silicon City) ಸೇರಿ ರಾಜ್ಯದ ಬಹುತೇಕ ಕಡೆ ವರುಣಾಬ್ಬರ ಜೋರಾಗಿದ್ದು, ಈ ನಡುವೆ ಮುಂದಿನ ನಾಲ್ಕೈದು ದಿನ ಮಳೆ ಅಬ್ಬರಿಸೋ ಬಗ್ಗೆ ಹವಾಮಾನ ಇಲಾಖೆ (Weather Department) ಮುನ್ಸೂಚನೆ ನೀಡಿದೆ.

ಕಳೆದ ಎಂಟತ್ತು ದಿನಗಳಿಂದ ಅಬ್ಬರಿಸುತ್ತಿರೋ ಮಳೆರಾಯ, ರಾಜ್ಯದಾದ್ಯಂತ ಮುಂದಿನ ನಾಲ್ಕೈದು ದಿನ ಮತ್ತಷ್ಟು ಅಬ್ಬರಿಸುವ ಸಾಧ್ಯತೆಯಿದೆ. ರಾಜ್ಯದ ಅನೇಕ ಜಿಲ್ಲೆಗಳಿಗೆ ಭಾರೀ ಮಳೆ ಮುನ್ಸೂಚನೆ ಕೂಡ ಇದ್ದು, ಹವಾಮಾನ ಇಲಾಖೆ ಅಲರ್ಟ್ ಘೋಷಿಸಿದೆ. ಇದನ್ನೂ ಓದಿ: ದೇವರಾಜೇಗೌಡ ಜೀವಕ್ಕೆ ಜೈಲಲ್ಲಿ ಕುತ್ತು: ಸುರೇಶ್ ಗೌಡ ಸ್ಫೋಟಕ ಹೇಳಿಕೆ

https://youtu.be/MyT8YPuUm_g?si=B99-z1m1wnzu1A-2

ಇಂದಿನಿಂದ ಮೂರು ದಿನ ಕರಾವಳಿ ಎಲ್ಲಾ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಿಗೆ 5 ದಿನ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಉತ್ತರ ಕರ್ನಾಟಕದ ಭಾಗಗಳಿಗೆ ಸಾಧಾರಣ ಮಳೆ ಮುನ್ಸೂಚನೆ ನೀಡಲಾಗಿದೆ. ಜೊತೆಗೆ ಬಹುತೇಕ ಕಡೆ ಮಳೆ ಜೊತೆಗೆ ಬಿರುಗಾಳಿ ಸಹಿತ ಮಳೆ, ಗುಡುಗು ಮಿಂಚಿನ ಎಚ್ಚರಿಕೆ ಕೂಡ ನೀಡಲಾಗಿದೆ. ಬೆಂಗಳೂರಿನಲ್ಲೂ ಮಳೆಯ ಅಬ್ಬರ ಮುಂದುವರೆಯುವ ಸಾಧ್ಯತೆ ಇದ್ದು, ಮುಂದಿನ ಒಂದು ವಾರ ನಗರದ ಹಲವೆಡೆ ಭಾರಿ ಮಳೆಯ ನಿರೀಕ್ಷೆ ಮಾಡಲಾಗಿದೆ. ಹಲವೆಡೆ ಭಾರೀ ಗುಡುಗು ಸಹಿತ ಮಳೆಯ ಅಬ್ಬರ ಎಚ್ಚರಿಕೆಯನ್ನ ಕೂಡ ಹವಾಮಾನ ಇಲಾಖೆ ನೀಡಿದೆ.ಇದನ್ನೂ ಓದಿ: ಇಬ್ರಾಹಿಂ ರೈಸಿ ನಿಧನ: ಇರಾನ್​​ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೊಹಮ್ಮದ್ ಮೊಖ್ಬರ್

https://youtu.be/NEfC4jep7Zg?si=BeeqaEL0bJUmpIx_

ಒಟ್ಟಾರೆ ಬೇಸಿಗೆ ಬೇಗೆಗೆ ಕಂಗೆಟ್ಟಿದ್ದ ರಾಜ್ಯದ ಜನತೆಗೆ ಪೂರ್ವ ಮುಂಗಾರಿನ ಹಂಗಾಮ ಜೋರಾಗಿದ್ದು, ಮಳೆ ಕಾಣದೇ ಒಣಗಿದ್ದ ಭೂಮಿ ತಂಪಾಗುತ್ತಿದ್ದು, ರೈತಾಪಿ ವರ್ಗ ಕೂಡ ನಿಟ್ಟುಸಿರು ಬಿಟ್ಟಿದೆ. ಇದನ್ನೂ ಓದಿ: ಇರಾನ್ ಅಧ್ಯಕ್ಷ ರೈಸಿ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

Share with Friends
author avatar
News Desk