EntertainmentLatest

ಸೂಪರ್ ಸ್ಟಾರ್ ರಚ್ಚು ಆಗಿ ಕಿರುತೆರೆಗೆ ದಿವ್ಯಾ ಉರುಡುಗ ಕಮ್‌ ಬ್ಯಾಕ್‌

ಕನ್ನಡ ಕಿರುತೆರೆ ಲೋಕದಲ್ಲಿ ಕಲರ್ಸ್ ಕನ್ನಡ (Colors Kannada) ವಾಹಿನಿ ವಿಭಿನ್ನ ಬಗೆಯ ಸೀರಿಯಲ್ ಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದೆ. ಇದೀಗ ಮತ್ತೊಂದು ಹೊಸ ಕಥೆ ಮೂಲಕ ಕಿರುತೆರೆ ಪ್ರೇಕ್ಷಕರ ಎದುರು ಬರ್ತಿದೆ. ಬೇರೆ ಬೇರೆ ವ್ಯಕ್ತಿತ್ವದ ಇಬ್ಬರು ವ್ಯಕ್ತಿಗಳು ಒಟ್ಟಿಗೆ ಸಾಗುವ ಮನ ಮಿಡಿಯು ಧಾರಾವಾಹಿ “ನಿನನಾಗಿ” (Ninagagi) ಇದೇ 27ನೇ ತಾರೀಖಿನಿಂದ ಶುರುವಾಗುತ್ತಿದೆ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8 ಗಂಟೆಗೆ ನಿನಗಾಗಿ ಸೀರಿಯಲ್ ಪ್ರಸಾರವಾಗಲಿದೆ.

ಬಿಗ್‌ ಬಾಸ್‌ ನಂತರ ಇದೀಗ ದಿವ್ಯಾ ಉರುಡುಗ(Divya Uruduga) ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡುತ್ತದ್ದಾರೆ.‌ ದಿವ್ಯಾ, ರಚನಾ ಪಾತ್ರದಲ್ಲಿ ನಟಿಸುತ್ತಿದ್ದು. ‘ನಿನಗಾಗಿ’ ಧಾರಾವಾಹಿಯ ಕಥೆ ಸೂಪರ್ ಸ್ಟಾರ್ ರಚನಾ ಸುತ್ತ ಸುತ್ತಲಿದ್ದು, ಕಥಾನಾಯಕನಾಗಿ ರಿತ್ವಿಕ್ ಮಠದ್ ಅಭಿನಯಿಸುತ್ತಿದ್ದಾರೆ. ಸದ್ಯ ಈ ಸೀರಿಯಲ್‌ನಲ್ಲಿ ರಚನಾ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಆಗಿರುವ ಅವರಿಗೆ ಕೋಟ್ಯಂತರ ಅಭಿಮಾನಿಗಳ ಪ್ರೀತಿ, ಆಶೀರ್ವಾದ ಇದೆ. ಆದರೆ, ಅದ್ಯಾಕೋ ರಚನಾಗೆ ಅಮ್ಮನ ಪ್ರೀತಿ ಇರುವುದಿಲ್ಲ. ಬೇರೆ ಬೇರೆ ವ್ಯಕ್ತಿತ್ವದ ಇಬ್ಬರು ವ್ಯಕ್ತಿಗಳು ಒಟ್ಟಿಗೆ ಸಾಗುವ ಮನ ಮಿಡಿಯ ಧಾರಾವಾಹಿಯಾಗಿದೆ ನಿನಿಗಾಗಿ. ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಪ್ರಕರಣ- ಮಾಜಿ ಸಚಿವ ಹೆಚ್.ಡಿ ರೇವಣ್ಣಗೆ ಸಿಗುತ್ತಾ ಜಾಮೀನು?

ಬೆಂಗಳೂರಿನ ಅಕ್ಷಯ್ ಸ್ಟುಡಿಯೋದಲ್ಲಿ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ಈ ವೇಳೆ ನಿರ್ದೇಶಕ ಸಂಪಥ್ವಿ ಮಾತನಾಡಿ, ತುಂಬಾ ಎಕ್ಸೈಟ್ ಆಗಿದ್ದೇನೆ. ಯಾಕೆಂದರೆ ಹೆಮ್ಮೆಯಿಂದ ಹೇಳುತ್ತೇನೆ.‌ ಒಂದೊಳ್ಳೆ ಪ್ರಾಜೆಕ್ಟ್ ತೆಗೆದುಕೊಂಡು ಬಂದಿದ್ದೇನೆ. ನಿನಗಾಗಿ ಶೋ ಬಂದ‌ ಮೇಲೆ ತುಂಬಾ ಸ್ಕೋರ್ ಮಾಡುತ್ತದೆ. ಯಾಕೆಂದರೆ ನನ್ನ ಬೆಂಬಲವಾಗಿ ನಿಂತಿರುವವರು ಜೈ ಮಾತಾ ಕಂಬೈನ್ಸ್ ನ ಅಶ್ವಿನಿ‌ ಮೇಡಂ. ಇಡೀ‌ ಕಲರ್ಸ್ ತಂಡ. ಪ್ರತಿಯೊಬ್ಬರಿಗೂ ಸಪೋರ್ಟಿವ್ ಆಗಿತು. ಈ ಪ್ರಾಜೆಕ್ಟ್ ಮಾಡಿಸಿದ್ದಾರೆ. ಈ ಪ್ರಾಜೆಕ್ಟ್ ಕಲರ್ಸ್ ಗೆ ಗೆಲುವು ತಂದುಕೊಡುತ್ತದೆ. ನಾಯಕ ಒಂದು ಪಡೆಯಾದರೆ, ನಾಯಕಿ ಕೂಡ ಒಂದು ಪಡೆ. ಇವರೆಲ್ಲಾ ಬಲ ತಂದುಕೊಡುತ್ತಿದ್ದಾರೆ. ಪ್ರೋವೋ ನೋಡಿ ಇಷ್ಟಪಟ್ಟಿದ್ದೀರಾ. ನಾನು ಈ ಹಿಂದೆ ನಮ್ಮನೆ ಯುವರಾಣಿ ಸೀರಿಯಲ್ ಮಾಡಿದ್ದೇನೆ. ಈ ಬಾರಿ ಒಂದು ಹೊಸ ಕಥೆ ಹೇಳಲು ಬರುತ್ತಿದ್ದೇವೆ ಎಂದರು.

https://youtu.be/MyT8YPuUm_g?si=i0tSPYNYHWQt4h0X

ನಾಯಕ ಋತ್ವಿಕ್ ಮಠದ್ ಮಾತನಾಡಿ, ಶಿವರಾಮ್ ಮಾಸ್‌ನಲ್ಲಿ‌ ನೋಡಿದ್ದೀರಾ. ಆದರೆ ಆ ಮಾಸ್ ಜೀವನ್‌ನಲ್ಲಿ ಇರುವುದಿಲ್ಲ. ತುಂಬಾ ಸರಳ ವ್ಯಕ್ತಿ.‌ಒಬ್ಬ ಮಗುವಿನ ತಂದೆ. ದುಡ್ಡಿನ ಹಿಂದೆ ಹೋಗುವ ಮನುಷ್ಯ ಅಲ್ಲ. ಆ ರೀತಿ ಪಾತ್ರ ಮಾಡುತ್ತಿದ್ದೇನೆ ಎಂದು ಮಾಹಿತಿ ನೀಡಿದರು. ನಾಯಕಿ ದಿವ್ಯಾ ಉರುಡುಗ ಮಾತನಾಡಿ, ನನಗೆ ಹೆಮ್ಮೆ ಅನಿಸುತ್ತದೆ. ಪ್ರತಿ ವಿಷಯದಲ್ಲಿಯೂ ಯೂನಿಕ್ ಆಗಿ ಮಾಡುತ್ತಿದ್ದೇವೆ. ಇದನ್ನೂ ಓದಿ: ಪೌರತ್ವದ ನಂತರ ಮೊದಲ ಬಾರಿಗೆ ಅಕ್ಷಯ್ ಕುಮಾರ್‌ ಮತದಾನ

https://youtu.be/Jd2hi_uzx-E?si=KN1vmN_Hvomb1DGn

ಇನ್ನೂ ದಿವ್ಯಾ ಉರುಡುಗ ಮತನಾಡಿ, ರಚ್ಚು ಎಂಬ ಮುದ್ದಾದ ಹುಡುಗಿ ಪಾತ್ರ ಮಾಡುತ್ತಿದ್ದೇನೆ. ರಚ್ಚು ಎಂಬ ಸೂಪರ್ ಸ್ಟಾರ್ ಸಿಂಪಲ್ ಆಗಿ ಲೈಫ್ ಲೀಡ್ ಮಾಡುವ ಕನಸು ಕಾಣುತ್ತಾ ಇರುತ್ತಾಳೆ. ಅಮ್ಮನ ಮಾತೇ ವೇದ ವಾಕ್ಯ.‌ ಆ ರೀತಿ ಪಾತ್ರ ನನ್ನದು. ಅವಳ ವೈಯಕ್ತಿಕ ಜೀವನ, ಅವಳ ಆಸೆ ನೆರವೇರುತ್ತಾ? ಅನ್ನೋದನ್ನು ನೀವು ನೋಡ್ಬೇಕು.‌ಒಂದೊಳ್ಳೆ ತಂಡದ ಜೊತೆ ಕೆಲಸ‌ ಮಾಡುತ್ತಿರುವ ಖುಷಿ ಇದೆ. ಸಿನಿಮಾ ರೀತಿಯೇ ಸೀರಿಯಲ್ ಶೂಟ್ ಮಾಡಲಾಗುತ್ತಿದೆ ಎಂದರು.

Share with Friends
author avatar
News Desk