Crime NewsLatestರಾಷ್ಟ್ರೀಯ-National

ಸ್ವಾತಿ ಮಲಿವಾಲ್‌ ಮೇಲೆ ದೌರ್ಜನ್ಯ – ಕೇಜ್ರಿವಾಲ್‌ ಆಪ್ತ ಸಹಾಯಕ ಪೊಲೀಸರ ವಶ

ನವದೆಹಲಿ: ಆಪ್‌ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಲ್‌ (Swati Maliwal) ಮೇಲೆ ದೌರ್ಜನ್ಯ ಎಸಗಿದ ದೆಹಲಿ ಸಿಎಂ ಕೇಜ್ರಿವಾಲ್‌ (Aravind kerziwal) ಆಪ್ತ ಸಹಾಯಕ ಬಿಭವ್‌ ಕುಮಾರ್‌ (Bibhav Kumar) ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಸಿಎಂ ನಿವಾಸದಲ್ಲಿ ಮೇ 13 ರಂದು ತನ್ನ ಮೇಲೆ ಬಿಭವ್‌ ಕುಮಾರ್‌ ಹಲ್ಲೆ ನಡೆಸಿದ್ದಾರೆ ಎಂದು ಸ್ವಾತಿ ಮಲಿವಾಲ್‌ ದೂರು ನೀಡಿದ್ದರು. ಅವರು ನೀಡಿದ ದೂರಿನ ಬೆನ್ನಲ್ಲೇ ವಿಧಿವಿಜ್ಞಾನ ತಜ್ಞರು, ಪೊಲೀಸರ ತಂಡ ಶುಕ್ರವಾರ ಸಂಜೆ ಮುಖ್ಯಮಂತ್ರಿ ಅವರ ನಿವಾಸಕ್ಕೆ ಭೇಟಿ ನೀಡಿ ಸ್ಥಳ ಮಹಜರು ನಡೆಸಿತ್ತು. ತನಿಖೆಯ ಭಾಗವಾಗಿ ವಿಡಿಯೋ ಸೆರೆ ಹಿಡಿದ ನಂತರ ಶನಿವಾರ ನಸುಕಿನ ಜಾವ 2:15ಕ್ಕೆ ತಂಡ ಸಿಎಂ ನಿವಾಸದಿಂದ ಹೊರಬಂದಿತ್ತು. ಇದನ್ನೂ ಓದಿ: ತೀರ್ಥಯಾತ್ರೆ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಬಸ್‌ ಬೆಂಕಿಗಾಹುತಿ – 9 ಮಂದಿ ಸಜೀವ ದಹನ!

https://youtu.be/yQhaOSOME_w?si=QP211QgHAchieBJi

ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸದ ಸಿಸಿಟಿವಿ ಪೊಲೀಸರು ಸೀಲ್ ಮಾಡಿದ್ದಾರೆ. ತನಿಖೆಯ ದೃಷ್ಟಿಯಿಂದ ತಾಂತ್ರಿಕ ಸಾಕ್ಷಿಯಾಗಿ ಪರಿಗಣನೆ ಮಾಡಲು ಡಿವಿಆರ್‌ ಸಹಿತ ದತ್ತಾಂಶವನ್ನು ದೆಹಲಿ ಪೊಲೀಸರು ಸೀಲ್ ಮಾಡಿದ್ದಾರೆ.ಇದನ್ನೂ ಓದಿ: ಕೇಜ್ರಿವಾಲ್‌ ನಿವಾಸದ ಸಿಸಿಟಿವಿ ಟ್ಯಾಂಪರಿಂಗ್‌ ಮಾಡಲಾಗುತ್ತಿದೆ: ಸ್ವಾತಿ ಮಲಿವಾಲ್‌ ಆರೋಪ

Share with Friends
author avatar
News Desk