Latestಕ್ರೀಡೆ-Sportsರಾಷ್ಟ್ರೀಯ-National

ಫುಟ್‌ಬಾಲ್‌ಗೆ ಗುಡ್‌ಬೈ ಹೇಳಿದ ಸುನಿಲ್ ಛೆಟ್ರಿ

ನವದೆಹಲಿ: ಟೀಂ ಇಂಡಿಯಾದ ಖ್ಯಾತ ಪುಟ್‌ಬಾಲ್‌ಗೆ (Football) ಆಟಗಾರ ಸುನಿಲ್‌ ಛೆಟ್ರಿ (Sunil Chetri) ಅಂತಾರಾಷ್ಟ್ರೀಯ ಪುಟ್‌ಬಾಲ್‌ಗೆ ವಿದಾಯ ಹೇಳಿದ್ದಾರೆ. ಜೂನ್‌ 6 ರಂದು ಕುವೈತ್‌ (Kuwait) ವಿರುದ್ಧ ಫಿಫಾ ವಿಶ್ವಕಪ್‌ ಅರ್ಹತಾ ಪಂದ್ಯ ತನ್ನ ಕೊನೆಯ ಪಂದ್ಯವಾಗಲಿದೆ (last Match) ಎಂದು ತಿಳಿಸಿದ್ದಾರೆ.

39 ವರ್ಷದ ಛೆಟ್ರಿ ಅವರು ತಮ್ಮ ವಿದಾಯದ ನಿರ್ಧಾರವನ್ನು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕುವ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ಕೇಜ್ರಿವಾಲ್‌ ಜಾಮೀನನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ: ಶಾ ಕಿಡಿ

ಸುನಿಲ್‌ ಅವರು ಮಾರ್ಚ್‌ನಲ್ಲಿ ಭಾರತಕ್ಕಾಗಿ ತಮ್ಮ 150 ನೇ ಪಂದ್ಯ ಆಡಿದ್ದರು. ಗುವಾಹಟಿಯಲ್ಲಿ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಗೋಲು ಗಳಿಸಿದ್ದರು. ಆದರೆ ಆ ಪಂದ್ಯದಲ್ಲಿ ಭಾರತ 1-2 ಅಂತರದಲ್ಲಿ ಸೋಲನುಭವಿಸಿತ್ತು. ಇದನ್ನೂ ಓದಿ: ಮುಂದಿನ 5 ದಿನಗಳು ರಾಜ್ಯದಲ್ಲಿ ಗಾಳಿ ಮಳೆ

https://youtu.be/kagAomYJ8WM?si=mZps4ze4pvMAfDi9

ದೇಶಕ್ಕಾಗಿ ಆಡಿದ್ದೇನೆ. ನಾನು ವೈಯಕ್ತಿಕವಾಗಿ ಆಡಿಲ್ಲ. ನಾನು ರಾಷ್ಟ್ರೀಯ ತಂಡದೊಂದಿಗಿನ ಪ್ರತಿಯೊಂದು ತರಬೇತಿಯನ್ನು ನಾನು ಆನಂದಿಸಲು ಬಯಸುತ್ತೇನೆ. ಕುವೈತ್ ವಿರುದ್ಧದ ಪಂದ್ಯಕ್ಕೆ ಒತ್ತಡವಿದೆ. ಮುಂದಿನ ಸುತ್ತಿಗೆ ಅರ್ಹತೆ ಪಡೆಯಲು ನಮಗೆ ಮೂರು ಅಂಕಗಳ ಅಗತ್ಯವಿದೆ. ಇದು ನಮಗೆ ಬಹಳ ಮುಖ್ಯವಾಗಿದೆ ಎಂದು ಛೆಟ್ರಿ ಹೇಳಿದರು. ಇದನ್ನೂ ಓದಿ: ಭಾವಾನಿ ರೇವಣ್ಣ ವಿರುದ್ಧ ಎಚ್ಚರಿಕೆಯ ಹೆಜ್ಜೆ ಇಡುವಂತೆ ಎಸ್‌ಐಟಿಗೆ ಸೂಚನೆ

Share with Friends
author avatar
News Desk