LatestWeatherಬೆಂಗಳೂರು-Bengaluruರಾಜ್ಯ-Karnataka

ರಾಜ್ಯದ ಹಲವೆಡೆ ಮಳೆ ಅಬ್ಬರ- ಚಿಕ್ಕಬಳ್ಳಾಪುರದಲ್ಲಿ ಒಣಗುತ್ತಿದ್ದ ಬೆಳೆಗಳಿಗೆ ಜೀವಕಳೆ

ಬೆಂಗಳೂರು: ರಾಜ್ಯದಲ್ಲಿ ವರುನನ (Rain) ಅಬ್ಬರ ಜೋರಾಗಿದ್ದು, ಬೆಂದು ಹೊಗುತ್ತಿದ್ದ ಭೂಮಿಗೆ ಮಳೆರಾಯ ತಂಪೆರೆದಿದ್ದಾನೆ. ಇದರಿಂದಾಗಿ ಕೆಲವೆಡೆ ಅವಾಂತರಗಳು ಸೃಷ್ಟಿಯಾಗಿದೆ.

ಸಿಲಿಕಾನ್ ಸಿಟಿ (Silicon City) ಸೇರಿದಂತೆ ರಾಜ್ಯದೆಲ್ಲೆಡೆ ಬಿಸಿಲು ಅವರಿಸಿದ್ದು, ಬಿಸಿಲಿನ ಬೇಗೆಗೆ ರಾಜ್ಯದ ಜನರು ಬೆಂದು ಹೋಗುತ್ತಿದ್ದರು. ಇದೇ ವೇಳೆ ಮುಂಗಾರು ಪೂರ್ವಮಳೆಯ ಅಬ್ಬರ ಜೋರಾಗಿದೆ. ಮಳೆಗೆ ಖುಷಿ ಪಡಬೇಕೋ ಅಥವಾ ದುಖ ಪಡಬೇಕೋ, ಮಳೆಗೆ ಜನರು ಖುಷಿಯಾಗಿದ್ದರೆ, ಕೆಲವೆಡೆ ಅವಾಂತರಗಳು ಸೃಷ್ಟಿಯಾಗಿದ್ದು, ಜನರು ಪರದಾಡುವಂತಾಗಿದೆ. ಶಿರಸಿಯಲ್ಲಿ ಮಳೆ ಗಾಳಿ ಆರ್ಭಟಕ್ಕೆ ಮರ, ವಿದ್ಯುತ್ ಕಂಬಗಳು ಉರುಳಿಬಿದ್ದಿವೆ. ಹೀಗಾಗಿ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಅಲ್ಲದೇ ನಗರದಾದ್ಯಂತ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಇದನ್ನೂ ಓದಿ: ಜರ್ಮನಿಯಿಂದ ಹೊರಟು ಬೆಂಗಳೂರಿಗೆ ಬರ್ತಾರಾ ಪ್ರಜ್ವಲ್ ರೇವಣ್ಣ ?

https://youtu.be/lwT9p6w4n0U?si=s5TYL1_JLNI0qHeJ

ಕಾರವಾರ, ಮುಂಡಗೋಡು, ದಾಂಡೇಲಿ, ಜೋಯಿಡಾ ಯಲ್ಲಾಪುರ ಭಾಗದಲ್ಲಿ ನಿನ್ನೆ ಮೋಡ ಕವಿದ ವಾತಾವರಣವಿತ್ತು. ಇನ್ನೂ ಮೂರು ದಿನ ಮಲೆನಾಡು, ಕರಾವಳಿಯಲ್ಲಿ ಮಳೆ ಬರುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಸಾಂರ್ಧಬಿಕ ಚಿತ್ರ

ಇನ್ನು ಚಿಕ್ಕಬಳ್ಳಾಪುರದಲ್ಲಿ ಮಳೆ ಬಂದಿದ್ರಿಂದ ಬಿಸಿಲಿಗೆ ಬಾಡಿದ್ದ ಬೆಳೆಗಳಿಗೆ ಮರುಜೀವ ತಂದಿದೆ. ಚಿಗುರಿದ ಬೆಳೆ ಕಂಡು ರೈತನ ಮುಖದಲ್ಲಿ ಮಂದಹಾಸ ಮೂಡಿದೆ. ದ್ರಾಕ್ಷಿ, ದಾಳಿಂಬೆ, ಟೊಮ್ಯಾಟೋ, ಕ್ಯಾಪ್ಸಿಕಂ, ಬೀನ್ಸ್ ಸೇರಿದಂತೆ ಬಹುತೇಕ ತರಕಾರಿಗಳನ್ನ ಬೆಳೆಯಲಾಗಿದೆ. ಈ ಬೆಳಗಳೂ ಕೂಡ ಮಳೆಯಿಲ್ಲದೇ ಬಾಡಿದವು. ಆದ್ರೀಗ ಮಳೆಯಾಗಿದ್ದು, ರೈತರು ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ತ್ಯಾಜ್ಯದ ನೀರಿನ ಸಂಸ್ಕರಣಾ ಘಟಕದಲ್ಲಿ 3 ಮಕ್ಕಳು ಶವವಾಗಿ ಪತ್ತೆ- FIR ದಾಖಲು

https://youtu.be/am20I7-S2dU?si=qmx1RQBCZs9zF72W

ಉಡುಪಿಯಲ್ಲಿ ಸಿಡಿಲು ಬಡಿದು ವ್ಯಕ್ತಿ ಸಾವನ್ನಪ್ಪಿದ್ದಾರೆ.. ಕುಂದಾಪುರ ತಾಲೂಕಿನ ಸಿದ್ಧಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಸುರೇಶ ಶೆಟ್ಟಿ ಮೃತ ದುದೈವಿಯಾಗಿದ್ದಾರೆ.. ಸಂಜೆ 4 ಗಂಟೆ ವೇಳೆಗೆ ಸಿಡಿಲು ಬಡಿದು ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ.. ಇನ್ನು ಉಡುಪಿ ಜಿಲ್ಲೆಯಲ್ಲಿ ಮುಂದಿನ ಎರಡ್ಮೂರು ದಿನ ಮಳೆ ಮುನ್ಸೂಚನೆ ನೀಡಲಾಗಿದೆ. ಇದನ್ನೂ ಓದಿ:ಪ್ರೀತಿಸಿದ ಹುಡುಗಿ ಕೈ ಕೊಟ್ಟಿದಕ್ಕೆ ಯುವಕ ಆತ್ಮಹತ್ಯೆ

ಒಟ್ಟಾರೆ ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಕೆಲವೆಡೆ ಅನಾಹುತ ಸೃಷ್ಠಿಯಾದ್ರೆ, ಇನ್ನು ಕೆಲವೆಡೆ ಮಳೆಯಿಂದ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪೆನ್‌ಡ್ರೈವ್ ಪ್ರಕರಣ :ಲಿಖಿತ್ ಗೌಡ, ಚೇತನ್ ಜಾಮೀನು ಅರ್ಜಿ ವಜಾ

Share with Friends
author avatar
News Desk