Latestಚುನಾವಣೆ-Electionರಾಷ್ಟ್ರೀಯ-National

ಬುರ್ಖಾ ತೆಗೆದು ವೋಟರ್ ಐಡಿ ತೋರಿಸಲು ಹೇಳಿದ ಮಾಧವಿ ಲತಾ- ಪ್ರಕರಣ ದಾಖಲು

ಹೈದರಾಬಾದ್: ಮುಸ್ಲಿಂ (Muslim) ಮಹಿಳೆಯರಿಗೆ ಬುರ್ಖಾ ತೆಗೆದು ವೋಟರ್ ಐಡಿ (Voter ID) ತೋರಿಸುವಂತೆ ಒತ್ತಡ ಹೇರಿದ್ದಕ್ಕಾಗಿ ಹೈದರಾಬಾದ್ ಬಿಜೆಪಿ (BJP) ಅಭ್ಯರ್ಥಿ ಮಾಧವಿ ಲತಾ (Madhavi Latha) ವಿರುದ್ಧ ಪ್ರಕರಣ ದಾಖಲಾಗಿದೆ.

ಮಾಧವಿ ಲತಾ ಅವರು ಹೈದರಾಬಾದ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಸೋಮವಾರ ಮತದಾನ ಕೇಂದ್ರದಲ್ಲಿ ಮುಸ್ಲಿಂ ಮಹಿಳೆಯರ ಬಳಿ ಹೋಗಿ ಬುರ್ಖಾ ತೆಗೆಯುವಂತೆ ಹೇಳುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ವಿವಾದ ಸೃಷ್ಟಿಸಿತ್ತು.ಇದನ್ನೂ ಓದಿ: ರಾಜಧಾನಿ ಸೇರಿ ರಾಜ್ಯದಲ್ಲಿ ಮುಂದಿನ 4 ದಿನ ಮಳೆ ಮುಂದುವರೆಯುವ ಸಾಧ್ಯೆತೆ

https://youtu.be/lwT9p6w4n0U?si=xefAgph_69JrqKm-

ವೈರಲ್ ಆದ ವೀಡಿಯೊದಲ್ಲಿ, ಮಾಧವಿ ಲತಾ ಅವರು ಬುರ್ಖಾ ಧರಿಸಿದ ಮುಸ್ಲಿಂ ಮಹಿಳೆಯರನ್ನು ಪರಿಶೀಲನೆಗಾಗಿ ತಮ್ಮ ಬುರ್ಖಾ ತೆಗೆಯುವಂತೆ ಹೇಳುತ್ತಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ನೀವು ಎಷ್ಟು ವರ್ಷಗಳ ಹಿಂದೆ ಇದನ್ನು (ಗಿoಣeಡಿ Iಆ) ಮಾಡಿದ್ದೀರಿ ಎಂದು ಇದೇ ವೇಳೆ ಮುಸ್ಲಿಂ ಮಹಿಳೆಯರನ್ನು ಪ್ರಶ್ನಿಸಿದ್ದಾರೆ. ಜೊತೆಗೆ ಹೆಚ್ಚಿನ ಪರಿಶೀಲನೆಗಾಗಿ ಆಧಾರ್ ಕಾರ್ಡ್ ಕೂಡ ಕೊಡುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಹೆಚ್.ಡಿ ರೇವಣ್ಣಗೆ ಜಾಮೀನು- ಅಭಿಮಾನಿಗಳ ಸಂಭ್ರಮಾಚಾರಣೆ

ಈ ದೃಶ್ಯ ವೈರಲ್ ಆಗುತ್ತಿದ್ದಂತೆಯೇ ನಾನು ಒಬ್ಬಳು ಅಭ್ಯರ್ಥಿಯಾಗಿದ್ದು, ಕಾನೂನಿನ ಪ್ರಕಾರ ಮುಖಕ್ಕೆ ಮಾಸ್ಕ್ ಇಲ್ಲದೆ ಗುರುತಿನ ಚೀಟಿಗಳನ್ನು ಪರಿಶೀಲಿಸುವ ಹಕ್ಕು ಇದೆ. ಮುಸ್ಲಿಂ ಮಹಿಳೆಯರ ಬಳಿ ತಮ್ಮ ಬುರ್ಖಾವನ್ನು ತೆಗೆಯುವಂತೆ ಕೇಳುವುದು ದೊಡ್ಡ ವಿಷಯವಲ್ಲ, ಏಕೆಂದರೆ ನಾನು ಪರುಷ ಅಲ್ಲ, ತಾನೂ ಮಹಿಳೆಯಾಗಿದ್ದೇನೆ ಎಂದು ಅವರು ಹೇಳಿ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಮುಂಬೈನಲ್ಲಿ ಧರೆಗುರುಳಿದ ಬೃಹತ್ ಬಿಲ್ ಬೋರ್ಡ್ – ಸಾವಿನ ಸಂಖ್ಯೆ 14 ಕ್ಕೆ ಏರಿಕೆ

https://youtu.be/Huo-fB975OQ?si=cQiMJznLbp3Faxct

ನಾನು ಐಡಿ ಕಾರ್ಡ್ಗಳನ್ನು ನೋಡಿ ಮತ್ತು ಪರಿಶೀಲಿಸಬಹುದೇ ಎಂದು ತುಂಬಾ ವಿನಮ್ರತೆಯಿಂದ ಅವರಲ್ಲಿ ವಿನಂತಿಸಿದ್ದೇನೆ. ಆದರೆ ಯಾರಿಗಾದರೂ ಅದನ್ನು ದೊಡ್ಡ ಸಮಸ್ಯೆಯನ್ನು ಮಾಡಬೇಕು ಎಂದು ಬಯಸಿದರೆ, ಅವರಿಗೆ ಭಯವಿದೆ ಎಂದು ಅರ್ಥ ಅಂತಾ ಮಾಧವಿ ಲತಾ ತಿಳಿಸಿದ್ದಾರೆ. ಇತ್ತ ವೀಡಿಯೋ ವೈರಲ್ ಆಗುತ್ತಾ ವಿವಾದವಾಗುತ್ತಿದ್ದಂತೆಯೇ ಮಾಧವಿ ಲತಾ ವಿರುದ್ಧ ಮಲಕಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಮುಂದುವರಿದ ತರಕಾರಿ, ಹಣ್ಣುಗಳ ಬೆಲೆ ಏರಿಕೆ

Share with Friends
author avatar
News Desk