Latestಕೃಷಿ-Agricultureಬೆಂಗಳೂರು-Bengaluruರಾಜ್ಯ-Karnataka

ಸಿಲಿಕಾನ್ ಸಿಟಿಯಲ್ಲಿ ಮುಂದುವರಿದ ತರಕಾರಿ, ಹಣ್ಣುಗಳ ಬೆಲೆ ಏರಿಕೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಕೆಲವು ದಿನಗಳಿಂದ ಮಳೇಯಾಗುತ್ತಿದ್ದು, ಬಿಸಿಲಿನ ಬೇಗೆಗೆ ರೊಸತ್ತು ಹೋಗಿದ್ದ ನಗರಿಗೆ ವರುಣಾ ತಂಪೆರೇದಿದ್ದಾನೆ. ಅತೀ ತೀವ್ರವಾದ ಬಿಸಿಲಿನಿಂದ ತಾರಕಾರಿ ಮತ್ತು ಹಣ್ಣುಗಳ(Fruits and Vegetables) ಬೆಲೆ ಏರಿಕೆಯಾಗಿತ್ತು. ಆದರೆ ಇದೀಗ ಮಳೆ (Rain) ಬಂದರೂ ಸಹ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಇನ್ನೂ ಹೆಚ್ಚು ದುಬಾರಿಯಾಗಿದೆ.

ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಪ್ರತಿ ತರಕಾರಿ ದರ ಕೆಜಿಗೆ ಸುಮಾರು 20 ರೂಪಾಯಿಯಷ್ಟು ಏರಿಕೆಯಾಗಿದೆ. ಬಿಸಿಲಿನ ಪ್ರಮಾಣ ಹೆಚ್ಚಾಗಿದ್ದರಿಂದ ತರಕಾರಿಗಳ ಪೂರೈಕೆ ಕಡಿಮೆಯಾಗಿದೆ. ಹೀಗಾಗಿ ಬರುವ ಅಲ್ಪ ತರಕಾರಿಗಳಿಗೆ ವ್ಯಾಪಾರಿಗಳು ಹೆಚ್ಚಿನ ಬೆಲೆ ನಿಗದಿ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಸರಿಯಾಗಿ ಮಳೆಯಾಗದಿದ್ದರೆ ತರಕಾರಿಗಳ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

https://youtu.be/lwT9p6w4n0U?si=AUtnGuPHWjmUMcmL

ಯಾವ ತರಕಾರಿಗೆ ಎಷ್ಟಿದೆ ದರ?

* ಕ್ಯಾರೇಟ್ 95
* ಬೀನ್ಸ್ 220
* ನವಿಲುಕೋಸು 80
* ಬದನೆಕಾಯಿ 70
* ದಪ್ಪ ಮೆಣಸಿನಕಾಯಿ 80
* ಬಟಾಣಿ 200
* ಬೆಂಡೆಕಾಯಿ 80
* ಟೊಮೆಟೋ 35
* ಆಲೂಗೆಡ್ಡೆ- 49
* ಹಾಗಲಕಾಯಿ 80
* ಸೋರೆಕಾಯಿ 52
* ಬೆಳ್ಳುಳ್ಳಿ 320
* ಶುಂಠಿ 195
* ಪಡವಲಕಾಯಿ 47
* ಗೋರಿಕಾಯಿ 64
* ಹಸಿರುಮೆಣಸಿಕಾಯಿ 110
* ಬಿಟ್ರೋಟ್ 46
* ಈರುಳ್ಳಿ 40 ಕೆಜಿಗೆ


ಇದು ಸೋಮವಾರ ಮಾರಾಟವಾದ ತರಕಾರಿಗಳ ಬೆಲೆ. ಕಳೆದ ವಾರ ಸೌತೆಕಾಯಿ ಹಾಗೂ ನಿಂಬೆಹಣ್ಣು ಬೆಲೆಯಲ್ಲಿ ಬಾರಿ ಏರಿಕೆಯಾಗಿದೆ. ಬೇರೆ ತರಕಾರಿಗಳ ಬೆಲೆ 60 ರೂ. ಒಳಗೆಯೇ ಇತ್ತು. ಆದರೆ ಈ ವಾರ ಬೀನ್ಸ್, ಕ್ಯಾರೇಟ್, ಬದನೆಕಾಯಿ, ಹಸಿರುಮೆಣಸಿನಕಾಯಿ, ಟೋಮಾಟೋ, ಬಟಾಣಿ, ಬೆಳ್ಳುಳ್ಳಿ ಸತತವಾಗಿ ಏರಿಕೆಯಾಗುತ್ತಿದೆ. ಸದ್ಯ ಒಂದು ವಾರದಿಂದ ಮಳೆಯಾಗುತ್ತಿದೆ. ಮಳೆ ಬಂದರೆ ಟೋಮೆಟೋ ಹಾಗೂ ಈರುಳ್ಳಿ ಬೆಲೆ ಏರಿಕೆಯಾಗುತ್ತದೆ. ಮಳೆ ಬಂದಿಲ್ಲ ಅಂದರೆ ತರಕಾರಿಗಳ ಬೆಲೆ ಏರಿಕೆಯಾಗುತ್ತೆ. ಮುಂದಿನವಾರ ತರಕಾರಿಗಳ ಬೆಲೆ ಕೊಂಚ ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ವ್ಯಾಪಾರಸ್ಥರು ಹೇಳಿದ್ದಾರೆ.

https://youtu.be/Huo-fB975OQ?si=Yj4S6rgksE7XTiVG

ಮತ್ತೊಂದೆಡೆ ಹಣ್ಣುಗಲ ಬೆಲೆ ಕೂಡ ಬಾರಿ ಏರಿಕೆಯಾಗಿದ್ದು, ಜನರಿಂದ ಹಣ್ಣುಗಳಿಗೆ ಹೆಚ್ಚು ಬೇಡಿಕೆ ಬರುತ್ತಿರುವ ಬೆನ್ನಲ್ಲೇ, ದರ ದುಬಾರಿಯಾಗಿದೆ.

ಹಣ್ಣುಗಳ ದರ ಕೆಜಿಗೆ ರೂ.ಗಳಲ್ಲಿ
* ಸಪೋಟ- 60 70
* ಸೇಬು 100 200
* ಮಾವಿಣ ಹಣ್ಣು 100 150
* ಕಿತ್ತಳೆ ಹಣ್ಣು 100 180
* ದ್ರಾಕ್ಷಿ 60 80
* ಮರಸೇಬು 190 200
* ದಾಳಿಂಬೆ 100 150
* ಕಲ್ಲಂಗಡಿ 40 50
* ಬಾಳೆಹಣ್ಣು 30 40
* ಅನಾನಸ್ 80 80
* ಆಸ್ಟ್ರೇಲಿಯಾ ಗ್ರೇಪ್ಸ್ 200 150

Share with Friends
author avatar
News Desk