ಲೋಕಸಭಾ ಚುನಾವಣೆ 2024: ಮತದಾನದ ಬಳಿಕ ಇವಿಎಂ, ಮತಗಟ್ಟೆ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಬಸ್ಗೆ ಬೆಂಕಿ
ಭೋಪಾಲ್: ಚುನಾವಣೇ ಬಳಿಕ ಇವಿಎಂ (EVM) ಯಂತ್ರಗಳು ಹಾಗು ಮತಗಟ್ಟೆ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಬಸ್ಗೆ (Bus) ಬೆಂಕಿ ತಗುಲಿರುವ ಘಟನೆ ಮಧ್ಯಪ್ರದೇಶದ (Madhyapradesh) ಬೇತುಲ್ನಲ್ಲಿ (Bethul) ಮಂಗಳವಾರ (8) ರಾತ್ರಿ ನಡೆದಿದೆ.
ಘಟನೆಯಲ್ಲಿ ಕೆಲವು ಇವಿಎಂ ಯಂತ್ರಗಳು ಹಾನಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಯಾವುದೇ ಮತಗಟ್ಟೆ ಸಿಬ್ಬಂದಿ ಹಾಗೂ ಬಸ್ ಚಾಲಕನಿಗೆ ಗಾಯಗಳಾಗಿಲ್ಲ ಎಂದು ಬೇತುಲ್ಮ ಜಿಲ್ಲಾಧಿಕಾರಿ ನರೇಂದ್ರ ಸೂರ್ಯವಂಶಿ ತಿಳಿಸಿದ್ದಾರೆ. ಇದನ್ನೂ ಓದಿ: ಬೇಸಿಗೆಗೆ ಹೆಚ್ಚಿದ ವಿಷ ಸರ್ಪಗಳು – ಸರ್ಕಾರಿ ಆಸ್ಪತ್ರೆಗಳಲ್ಲಿಲ್ಲ ಸಾಕಾಗುವಷ್ಟು ಔಷಧಿ
ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ಜಿಲ್ಲೆಯ ಗೋಲಾ ಗ್ರಾಮದ ಬಳಿ ಈ ಘಟನೆ ನಡೆದಿದೆ. ಬೂತ್ ಸಂಖ್ಯೆ 275, 276,277,278,279 ಹಾಗು 280ಕ್ಕೆ ಸೇರಿದಂತೆ ನಾಲ್ಕು ಮತಗಟ್ಟೆಗಳ ಇವಿಎಂಗಳಿಗೆ ಹಾನಿಯಾಗಿದೆ. ಅಗ್ನಿಶಾಮಕ ದಳವು ಬೆಂಕಿಯನ್ನು ನಂದಿಸಿತು. ಬಸ್ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಇದನ್ನೂ ಓದಿ: ಮಂಡ್ಯದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿದ ದುಷ್ಕರ್ಮಿಗಳು

ಬಸ್ನಲ್ಲಿ ಆರು ಮತಗಟ್ಟೆಗಳ ಇವಿಎಂಗಳು ಇದ್ದವು, ಅವುಗಳಲ್ಲಿ ನಾಲ್ಕು ಹಾನಿಯಾಗಿದೆ. ಎರಡು ಸುರಕ್ಷಿತವಾಗಿದೆ. ಪರಿಣಾಮ ನಾಲ್ಕು ಇವಿಎಂಗಳಲ್ಲಿ ಕಂಟ್ರೋಲ್ ಯೂನಿಟ್ ಅಥವಾ ಬ್ಯಾಲೆಟ್ ಯೂನಿಟ್ಗೆ ಹಾನಿಯಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಸುರಿದ ಮಳೆಗೆ ಬೆನ್ನು ಮೂಳೆ ಮುರಿದುಕೊಂಡ ಟೆಕ್ಕಿ
ಘಟನೆಯಿಂದ ಇವಿಎಂಗಳಲ್ಲಿ ದಾಖಲಾದ ಮತ ಎಣಿಕೆ ಮೇಲೆ ಪರಿಣಾಮ ಬೀರಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ, ಈ ಕುರಿತು ಚುನಾವಣಾ ಆಯೋಗಕ್ಕೆ ತಮ್ಮ ವರದಿಯನ್ನು ಕಳುಹಿಸಲಾಗುವುದು ಮತ್ತು ಹಾನಿಗೊಳಗಾದ ಮತಗಟ್ಟೆಗಳಲ್ಲಿ ಮರು ಮತದಾನದ ಬಗ್ಗೆ ಚುನಾವಣಾ ಸಂಸ್ಥೆ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ
ಬೇತುಲ್ ಲೋಕಸಭಾ ಕ್ಷೇತ್ರದಲ್ಲಿ ಶೇ.72.65ರಷ್ಟು ಮತದಾನವಾಗಿತ್ತು ಎಂದು ಚುನಾವಣಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಸ್?ನ ಮುಂಭಾಗದಲ್ಲಿ ಚಿಲಕ ಹಾಕಿದ್ದ ಕಾರಣ ಹಿಂಬಾಗಿಲು ಮತ್ತು ಕಿಟಕಿ ಒಡೆದು ಬಸ್ನಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಇದನ್ನೂ ಓದಿ: KOMUL ನೇಮಕಾತಿ ಹಗರಣದಲ್ಲಿ ಶಾಸಕ ನಂಜೇಗೌಡ ಸೇರಿ ಪ್ರಭಾವಿ ನಾಯಕರ ವಿರುದ್ಧ ತನಿಖೆಗೆ ಪತ್ರ
