Latestಕ್ರೀಡೆ-Sportsರಾಷ್ಟ್ರೀಯ-National

ಕುಸ್ತಿಪಟು ಭಜರಂಗ್ ಪುನಿಯಾ ನಾಡಾದಿಂದ ಅಮಾನತು

ನವದೆಹಲಿ: ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ ಕುಸ್ತಿಪಟು ಭಜರಂಗ್ ಪುನಿಯಾ (Bhajarang Punia) ಅವರನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಿದೆ.

ಮೂಲಗಳ ಪ್ರಕಾರ ಮಾರ್ಚ್ 10 ರಂದು ಸೋನೆಪತ್‌ನಲ್ಲಿ ನಡೆದ ಟ್ರಯಲ್ಸ್ನಲ್ಲಿ ಆಯ್ಕೆಯಾದ ನಂತರ ಭಜರಂಗ್ ಪುನಿಯಾ ಮೂತ್ರದ ಮಾದರಿಯನ್ನು ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಭವಿಷ್ಯದ ಯಾವುದೇ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸದಂತೆ ಅಮಾನತುಗೊಳಿಸುವ ಆದೇಶವನ್ನು ನಾಡಾ ಹೊರಡಿಸಿದೆ.

https://youtu.be/HPmXeEmh748?si=CU9rYn7hIo6WgjFN

ಈ ಅಮಾನತು ನಿರ್ಧಾರ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ (Paris Olympics) ಸ್ಪರ್ಧಿಸುವ ಅವರ ಪ್ರಯತ್ನಕ್ಕೆ ಹಿನ್ನಡೆಯಾಗಲಿದೆ.

ಒಲಿಂಪಿಯನ್‌ಗಳಾದ ಸಾಕ್ಷಿ ಮಲಿಕ್ (Sakshi Malik) ಮತ್ತು ವಿನೇಶ್ (vinesh) ಸೇರಿದಂತೆ ಇತರ ಅಗ್ರ ಕುಸ್ತಿಪಟುಗಳು ಬಿಜೆಪಿ ಮಾಜಿ ಸಂಸದ ಮತ್ತು ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ ಬಳಿಕ ನಡೆಸಿದ ಪ್ರತಿಭಟನೆಯಲ್ಲಿ ಭಜರಂಗ್ ಪೂನಿಯಾ ಮುಂಚೂಣಿಯಲ್ಲಿದ್ದರು.

https://youtu.be/8r8XkFbaG34?si=91o-RBx6D8IdaC_E

ಪುನಿಯಾ ಅವರಲ್ಲಿ ಮೂತ್ರದ ಮಾದರಿ (Urine Sample) ನೀಡುವಂತೆ ಕೇಳಿದ್ದರೂ ಅವರು ನಿಗದಿತ ಸಮಯದ ಒಳಗಡೆ ನೀಡಿಲ್ಲ ಎಂದು ನಾಡಾ ತಿಳಿಸಿದೆ.ಈ ನಾಡಾ ಮೂತ್ರದ ಮಾದರಿಯನ್ನು ನೀಡದ್ದು ಯಾಕೆ ಎನ್ನುವುದರ ಬಗ್ಗೆ ಲಿಖಿತವಾಗಿ ಕಾರಣವನ್ನು ಮೇ 7ರ ಒಳಗಡೆ ತಿಳಿಸಬೇಕು. ಒಂದು ವೇಳೆ ಈ ಅವಧಿಯ ಒಳಗಡೆ ಸರಿಯಾದ ಕಾರಣ ನೀಡದೇ ಇದ್ದರೆ ಮುಂದೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.

https://youtu.be/M2KHexb54ZM?si=vWyobb7e11YUkSPC
Share with Friends
author avatar
News Desk