Latest

ಪ್ರಜ್ವಲ್ ಪೆನ್‌ಡ್ರೈವ್‌ ಕೇಸ್: ಪ್ರಜ್ವಲ್ ಮಾಜಿ ಕರು ಚಾಲಕ ಕಾರ್ತಿಕ್ ನಾಪತ್ತೆ

ಬೆಂಗಳೂರು: ಹಾಸನ (Hassan) ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ(Prajwal Revanna) ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ಟ್ವಿಸ್ಟ್ ದಿನಕ್ಕೊಂದು ತಿರುವು ಪಡೆಯುತ್ತಿದೆ.

ಇಷ್ಟು ದಿನ ಅಶ್ಲೀಲ ವಿಡಿಯೋಗಳ ಬಗ್ಗೆ ಪೊಲೀಸ್ ತನಿಖೆ ಆಯಾಮದಲ್ಲಿ ಮಾತ್ರ ಸುದ್ದಿಯಾಗ್ತಿತ್ತು. ಇದೀಗ ಪೆನ್‌ಡ್ರೈವ್ ಅಸಲಿ ಕಹಾನಿ ಶುರುವಾಗಿದೆ. ಪ್ರಜ್ವಲ್ ಅಶ್ಲೀಲ ವಿಡಿಯೋ ನೀಡಿದ್ದು ನಾನೇ ಎಂದು ಹೇಳಿದ್ದ ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್? ಇದೀಗ ನಾಪತ್ತೆ ಆಗಿದ್ದಾರೆ. ಆ ಮೂಲಕ ಹಲವು ಅನುಮಾನಗಳಿಗೆ ಕಾರಣವಾಗಿದೆ. ಹೊಳೆನರಸೀಪುರ (Holenarsipura) ತಾಲೂಕಿನ ಕಡುವಿನಕೋಟೆ ನಿವಾಸಿ ಕಾರ್ತಿಕ್(Karthik), ಪ್ರಜ್ವಲ್ ಬಳಿ ಕಾರು ಚಾಲಕನಾಗಿ 13 ವರ್ಷ ಕೆಲಸ ಮಾಡಿದ್ದರು. 2 ದಿನದ ಹಿಂದೆ SIT ಮುಂದೆ ಹಾಜರಾಗೋದಾಗಿ ವಿಡಿಯೋ ಮೂಲಕ ಹೇಳಿಕೆ ಬಿಡುಗಡೆ ಮಾಡಿದ್ದರು.ಇದನ್ನೂ ಓದಿ: ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಪಿಹೆಚ್‌ಡಿ ವಿದ್ಯಾರ್ಥಿ ಅನುಮಾನಸ್ಪದ ಸಾವು

https://youtu.be/7ZX33HT5nQs?si=8iI9ldAC9-tE6nFT

ಪೆನ್‌ಡ್ರೈವ್‌ ಬಗ್ಗೆ ಹೊಳೆನರಸೀಪುರ ಬಿಜೆಪಿ ಮುಖಂಡ ದೇವರಾಜೇಗೌಡ ಹೇಳಿಕೆ ಬೆನ್ನಲ್ಲೇ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ದೇವರಾಜೇಗೌಡ (DevarajeGowda) ಹೇಳಿಕೆ ಬೆನ್ನಲ್ಲೇ ಸ್ಪಷ್ಟನೆ ನೀಡಿದ್ದ ಕಾರ್ತಿಕ್, ನಾನು ಬಿಜೆಪಿ (BJP) ಮುಖಂಡ ದೇವರಾಜೇಗೌಡ ಬಿಟ್ಟರೆ ಬೇರೆ ಯಾರಿಗೂ ವಿಡಿಯೋ, ಫೋಟೋಗಳನ್ನು ಹಂಚಿಕೊಂಡಿಲ್ಲ ಎಂದು ಹೇಳಿದ್ದರು. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ಕಾರ್ತಿಕ್ಗೆ SIT ನೋಟಿಸ್ ಸಹ ನೀಡಿತ್ತು. ಆದರೆ ಇದೀಗ ಅವರು ಸಹ ಎಸ್ಕೇಪ್ ಆಗಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ಪೇನ್‌ಡ್ರೈವ್‌ ಕೇಸ್: ಪಿಎಂಗೆ ಪತ್ರ ಬರೆದ ಸಿಎಂ

Share with Friends
author avatar
News Desk